ಮಂಜುಗೆ ದಿವ್ಯಾ ಮೇಲೆ ಇರೋದು ಪ್ರೀತಿ ಅಲ್ಲ ಅದು ಬೇರೆಯೇ; ಶುಭಾ-ನಿಧಿ ಗುಟ್ಟಿನ ಮಾತು ರಟ್ಟು

| Updated By: ಮದನ್​ ಕುಮಾರ್​

Updated on: May 09, 2021 | 7:11 AM

ಮಂಜು ಪಾವಗಡ ಇತ್ತೀಚೆಗೆ ಟಾಸ್ಕ್​ ಮೇಲೆ ಹೆಚ್ಚು ಕಾನ್ಸಂಟ್ರೇಟ್​​ ಮಾಡುತ್ತಿಲ್ಲ. ದಿವ್ಯಾ ಅತ್ತಾಗ, ಬೇಸರ ಮಾಡಿಕೊಂಡಾಗ ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡೋಕೆ ಪ್ರಯತ್ನ ಮಾಡುತ್ತಾರೆ.

ಮಂಜುಗೆ ದಿವ್ಯಾ ಮೇಲೆ ಇರೋದು ಪ್ರೀತಿ ಅಲ್ಲ ಅದು ಬೇರೆಯೇ; ಶುಭಾ-ನಿಧಿ ಗುಟ್ಟಿನ ಮಾತು ರಟ್ಟು
ಮಂಜು ಪಾವಗಡ - ದಿವ್ಯಾ ಸುರೇಶ್​
Follow us on

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಮೊದಲ ದಿನದಿಂದಲೂ ಆಪ್ತರಾಗಿದ್ದಾರೆ. ಆದರೆ, ಬರುಬರುತ್ತಾ ಮಂಜು ತಮ್ಮ ಎನರ್ಜಿಯೆಲ್ಲ ದಿವ್ಯಾ ಅವರನ್ನು ಸಂಭಾಳಿಸಲು ವ್ಯರ್ಥ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ಪ್ರೇಕ್ಷಕರಿಗೂ ಕೂಡ ಇದು ಹೌದೆನ್ನಿಸಿದೆ. ಹೀಗಿರುವಾಗಲೇ ಬಿಗ್​ ಬಾಸ್​ ಮನೆಯಲ್ಲಿ ನಿಧಿ ಹಾಗೂ ಶುಭಾ ಗುಟ್ಟಿನ ಮಾತು ಹೊರ ಬಿದ್ದಿದೆ.

ಮಂಜು ಪಾವಗಡ ಇತ್ತೀಚೆಗೆ ಟಾಸ್ಕ್​ ಮೇಲೆ ಹೆಚ್ಚು ಕಾನ್ಸಂಟ್ರೇಟ್​​ ಮಾಡುತ್ತಿಲ್ಲ. ದಿವ್ಯಾ ಅತ್ತಾಗ, ದಿವ್ಯಾ ಬೇಸರ ಮಾಡಿಕೊಂಡಾಗ ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡೋಕೆ ಪ್ರಯತ್ನ ಮಾಡುತ್ತಾರೆ. ಇನ್ನು ಸಂತೋಷದಲ್ಲಿದ್ದಾಗ ದಿವ್ಯಾ-ಮಂಜು ಪ್ರತ್ಯೇಕವಾಗಿ ಕೂತು ಮಾತುಕತೆ ನಡೆಸುತ್ತಾರೆ.

ಮೇ 8ರ ಎಪಿಸೋಡ್​ನಲ್ಲಿ ಅದೇ ರೀತಿ ಆಗಿದೆ. ಕಥೆ ಕಟ್ಟುವ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದೊಂದು ಜೋಡಿ ಕಥೆ ಹೇಳಬೇಕು. ಮಧ್ಯೆ ಮಧ್ಯೆ ಸ್ಪರ್ಧಿಗಳು ಒಂದು ಶಬ್ದಕೊಡುತ್ತಾರೆ. ಆ ಶಬ್ದ ಬಳಕೆ ಮಾಡಿಕೊಂಡು ಕಥೆ ಮುಂದುವರಿಸಬೇಕು.

ಯಾರು ಉತ್ತಮವಾಗಿ ಕಥೆ ಹೇಳಿದರೋ ಅವರು ಟಾಸ್ಕ್​ ಗೆದ್ದಂತೆ. ಈ ಟಾಸ್ಕ್​ನಲ್ಲಿ ನಾನು  ಉತ್ತಮವಾಗಿ ಕಥೆ ಹೇಳಿದ್ದೇನೆ ಎಂದು ಹೇಳುವಂತೆ ಮಂಜು ಅವರನ್ನು ಒತ್ತಾಯಿಸಿದರು. ಈ ವಿಚಾರ ನಿಧಿ ಕಿವಿಗೆ ಬಿದ್ದಿದೆ. ಇದನ್ನು ಶುಭಾ ಬಳಿ ಹಂಚಿಕೊಂಡಿದ್ದಾರೆ.

ಮಂಜುನ ನಾನೂ ಗಮನಿಸುತ್ತಿದ್ದೇನೆ. ಆರಂಭದಲ್ಲಿ ಆತ ಫಿಯರ್​ಲೆಸ್​ ಆಗಿದ್ದ. ಈಗ ಮಂಜು ಬದಲಾಗಿದ್ದಾನೆ. ಮಂಜುಗೆ ದಿವ್ಯಾ ಮೇಲೆ ಪ್ರೀತಿ ಇಲ್ಲ. ಆತನಿಗೆ ಅವಳ ಮೇಲೆ ಇರೋದು ಕೇವಲ ಭಯ ಎಂದು ಶುಭಾ-ನಿಧಿ ಮಾತನಾಡಿಕೊಂಡರು. ಪ್ರೇಕ್ಷಕರಿಗೂ ಕೂಡ ಇದು ಹೌದೆನ್ನಿಸಿದೆ.

ಇದನ್ನೂ ಓದಿ: Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​ 

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ಅಂದು ಹೇಳಿದ್ದ ಮಾತು ಇಷ್ಟು ಬೇಗ ನಿಜವಾಯ್ತೇ?