ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಅಂದು ಹೇಳಿದ್ದ ಮಾತು ಇಷ್ಟು ಬೇಗ ನಿಜವಾಯ್ತೇ?
ಬಿಗ್ ಬಾಸ್ ಸೀಸನ್ 8 ನಾಳೆ ಕೊನೆ ಆಗುತ್ತಿದೆ. ಕೊರೊನಾ ವೈರಸ್ ಎರಡನೇ ಅಲೆಯ ಕಾಟ ಜೋರಾಗಿದ್ದರಿಂದ ಈ ಸೀಸನ್ ಅರ್ಧಕ್ಕೆ ನಿಲ್ಲುತ್ತಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ಅರವಿಂದ ಕೆ.ಪಿ. ಹಿಂದಿನ ವಾರ ಹೇಳಿದ ಮಾತು ಈಗ ನಿಜವಾಗಿದೆ.
ಬಿಗ್ ಬಾಸ್ ಸೀಸನ್ 8 ನಾಳೆ ಕೊನೆ ಆಗುತ್ತಿದೆ. ಕೊರೊನಾ ವೈರಸ್ ಎರಡನೇ ಅಲೆಯ ಕಾಟ ಜೋರಾಗಿದ್ದರಿಂದ ಈ ಸೀಸನ್ ಅರ್ಧಕ್ಕೆ ನಿಲ್ಲುತ್ತಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ಅರವಿಂದ ಕೆ.ಪಿ. ಹಿಂದಿನ ವಾರ ಹೇಳಿದ ಮಾತು ಈಗ ನಿಜವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್ಗೆ ಮಂಜು ಪಾವಗಡ, ಅರವಿಂದ್ ಕೆ.ಪಿ. ಹಾಗೂ ಚಕ್ರವರ್ತಿ ಚಂದ್ರಚೂಡ್ ಆಯ್ಕೆ ಆಗಿದ್ದರು. ವೋಟಿಂಗ್ ರೀತಿಯಲ್ಲಿ ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಮೂರು ಕ್ಯಾಪ್ಟನ್ಸಿ ಅಭ್ಯರ್ಥಿಗೆ ತಲಾ ಮೂರು ಮೂರು ಮತಗಳು ಬಿದ್ದು ಟಾಸ್ಕ್ ಟೈ ಆಗಿತ್ತು. ಅರವಿಂದ್ ಹಾಗೂ ಮಂಜು ಜತೆ ಒಳ್ಳೆಯ ಒಡನಾಟ ಹೊಂದಿದ್ದ ಶಮಂತ್ ಬ್ರೋ ಗೌಡ, ಚಕ್ರವರ್ತಿಗೆ ವೋಟ್ ಮಾಡಿದ್ದರು. ಈ ವಿಚಾರ ಅರವಿಂದ್ಗೆ ಬೇಸರ ತರಿಸಿತ್ತು.
ನಂತರ ಶಮಂತ್ ಹಾಗೂ ಅರವಿಂದ್ ಈ ಬಗ್ಗೆ ಮಾತನಾಡಿದ್ದರು. ‘ಎರಡನೇ ಬಾರಿಗೆ ನಿನ್ನನ್ನು ಕ್ಯಾಪ್ಟನ್ ಮಾಡುವಾಗ ನಾನು ಹಾಗೂ ಮಂಜು ನಿನಗೆ ಬೆಂಬಲ ನೀಡಿದ್ದೆವು. ಅದನ್ನು ನೀನು ಮರೆಯಬಾರದಿತ್ತು. ನೀನು ವೋಟ್ ಮಾಡಿರೋದು ನಿನ್ನ ವೈಯಕ್ತಿಕ. ಅದರ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ, ನಾವು ಸಹಾಯ ಮಾಡಿದ್ದನ್ನು ನೀನು ಸ್ವಲ್ಪ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು’ ಎಂದು ಶಮಂತ್ಗೆ ಅರವಿಂದ್ ಕಿವಿಮಾತು ಹೇಳಿದ್ದರು.
ಇದಕ್ಕೆ ಉತ್ತರಿಸಿದ್ದ ಶಮಂತ್, ‘ಅದು ಏನೋ ಮಾಡೋಕೆ ಹೋಗಿ ಅವರಿಗೆ ವೋಟ್ ಮಾಡಿಬಿಟ್ಟೆ. ದಯವಿಟ್ಟು ಕ್ಷಮಿಸಿ. ಮುಂದಿನ ವಾರ ನಿಮಗೆ ಸಪೋರ್ಟ್ ಮಾಡ್ತೀನಿ’ ಎಂದಿದ್ದರು. ಅದಕ್ಕೆ ಅರವಿಂದ್ ಒಂದೇ ಮಾತಿನಲ್ಲಿ ಉತ್ತರ ನೀಡಿದ್ದರು. ‘ಬಿಗ್ ಬಾಸ್ ಮನೆಯಲ್ಲಿ ಮುಂದಿನ ವಾರ ಅನ್ನೋದು ಯಾವಾಗಲೂ ಇರುವುದಿಲ್ಲ. ಈಗ ಏನಾಗುತ್ತಿದೆಯೋ, ಈಗ ನಾವು ಏನು ನಿರ್ಧಾರ ತೆಗೆದುಕೊಳ್ಳುತ್ತೇವೆ ಅದಿಷ್ಟೇ ಮುಖ್ಯ. ಮುಂದಿನ ವಾರ ಏನಾಗುತ್ತದೆ ಎಂದು ಯಾರೂ ಹೇಳೋಕೆ ಸಾಧ್ಯವಿಲ್ಲ’ ಎಂದು ಹೇಳಿದ್ದರು.
ಮುಂದಿನ ವಾರ ಏನಾಗುತ್ತದೆ ಎಂದು ಯಾರೂ ಹೇಳೋಕೆ ಸಾಧ್ಯವಿಲ್ಲ ಎಂಬ ಅರವಿಂದ್ ಮಾತು ನಿಜವಾಗಿದೆ. ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಲ್ಲುತ್ತಿದೆ. ಹೀಗಾಗಿ, ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಈಗ ಹೊರ ಬರುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಪ್ರಿಯರಿಗೆ ಕಹಿ ಸುದ್ದಿ; ಅರ್ಧಕ್ಕೆ ನಿಂತ ಸೀಸನ್ 8
Bigg Boss Kannada: ಮನಸ್ಸು ಭಾರವಾಗಿದೆ, ಬಿಗ್ ಬಾಸ್ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್ ಗುಂಡ್ಕಲ್