ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್​ನಲ್ಲಿ ಅವಘಡ; ಹಲವರಿಗೆ ಗಾಯ

ತೆಲುಗು ನಟ ನಿಖಿಲ್ ಸಿದ್ದಾರ್ಥ್ ಅಭಿನಯಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾದ ಚಿತ್ರೀಕರಣ ಸೆಟ್‌ನಲ್ಲಿ ಭೀಕರ ಅವಘಡ ಸಂಭವಿಸಿದೆ. ಒಂದು ದೊಡ್ಡ ಟ್ಯಾಂಕರ್ ಒಡೆದು ನೀರು ಸೋರಿ, ಸಹಾಯಕ ಕ್ಯಾಮೆರಾಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೆಟ್‌ನಲ್ಲಿ ಹಾನಿಯೂ ಆಗಿದೆ. ರಾಮ್ ಚರಣ್ ಈ ಚಿತ್ರ ನಿರ್ಮಾಣದಲ್ಲಿ ಭಾಗಿ ಎನ್ನಲಾಗಿದೆ.

ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್​ನಲ್ಲಿ ಅವಘಡ; ಹಲವರಿಗೆ ಗಾಯ
ಸಿದ್ಧಾರ್ಥ್

Updated on: Jun 12, 2025 | 8:59 AM

ತೆಲುಗಿನ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾ (The Indian House Movie) ಸೆಟ್​ನಲ್ಲಿ ಅವಘಡ ಸಂಭವಿಸಿದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ ಈ ಅವಘಡ ಉಂಟಾಗಿದೆ. ಈ ಚಿತ್ರದ ನಿರ್ಮಾಣದಲ್ಲಿ ರಾಮ್ ಚರಣ್ ಅವರು ಕೂಡ ಭಾಗಿ ಆಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಕಿಂಗ್ ಎನಿಸಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇನ್ನಷ್ಟೇ ಬರಬೇಕಿದೆ.

ಶಂಶಾಬಾದ್​ನಲ್ಲಿ ‘ದಿ ಇಂಡಿಯನ್ ಹೌಸ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಶೂಟ್​ಗಾಗಿ ದೊಡ್ಡ ಟ್ಯಾಂಕರ್ ನಿರ್ಮಾಣ ಮಾಡಲಾಗಿತ್ತು. ಈ ಟ್ಯಾಂಕರ್ ಏಕಾಏಕಿ ಒಡೆದಿದೆ. ನೀರನ ಒತ್ತಡದಿಂದ ಟ್ಯಾಂಕರ್ ಒಡೆದಿರಬಹುದು ಎಂದು ಊಹಿಸಲಾಗಿದೆ. ಘಟನೆಯಲ್ಲಿ ಸಹಾಯಕ ಕ್ಯಾಮೆರಾಮನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ
ಕೆಲಸದವರನ್ನು ಗೌರಿ ಖಾನ್ ಎಷ್ಟು ಉತ್ತಮವಾಗಿ ನೋಡಿಕೊಳ್ತಾರೆ ನೋಡಿ..
ನನಗೆ ಮಾರ್ಗದರ್ಶನ ನೀಡಿದ್ದರೆ; ಡ್ರಗ್ಸ್ ಪಾರ್ಟಿ ಬಗ್ಗೆ ಮೌನ ಮುರಿದ ಮಂಗ್ಲಿ
‘ಸಿತಾರೆ ಜಮೀನ್ ​ಪರ್’ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ

ಟ್ಯಾಂಕ್​ನಿಂದ ನೀರು ಏಕಾಏಕಿ ಬಂದಿದ್ದರಿಂದ ಸಾಕಷ್ಟು ತೊಂದರೆಗಳು ಉಂಟಾದವು. ಸೆಟ್ ಪೂರ್ತಿ ನಾಶವಾಗಿದೆ. ಸಹಾಯಕ ಕ್ಯಾಮೆರಾಮೆನ್​ ಜೊತೆಗೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ. ನಟ ನಿಖಿಲ್ ಕೂಡ ಸೆಟ್​ನಲ್ಲಿ ಇದ್ದರು. ಆದರೆ, ಅವರಿಗೆ ಯಾವುದೇ ತೊಂದರೆ ಆಗಿಲ್ಲ.


‘ದಿ ಇಂಡಿಯನ್ ಹೌಸ್’ ಚಿತ್ರದ ಕಥೆ ಸ್ವಾತಂತ್ರ್ಯಪೂರ್ವ ವಿಚಾರವನ್ನು ಹೊಂದಿದೆ. ಲಂಡನ್​ನಲ್ಲಿ ಇದ್ದ ಇಂಡಿಯನ್ ಹೌಸ್​ನಲ್ಲಿ ನಡೆಯೋ ಲವ್​ ಸ್ಟೋರಿಯ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಈ ಸಿನಿಮಾಗೆ ರಾಮ್ ವಂಶಿ ಕೃಷ್ಣ ನಿರ್ದೇಶನ ಮಾಡಿದ್ದಾರೆ.  ಈ ಚಿತ್ರವನ್ನು ಅಭಿಷೇಕ್ ಅಗರ್​ವಾಲ್ ಹಾಗೂ ತೇಜ್ ನಾರಾಯಣ್ ಅಗರ್​ವಾಲ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ರಾಮ್ ಚರಣ್ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಥಗ್ ಲೈಫ್’ ಸೋಲಿನಿಂದ ರಾಮ್ ಚರಣ್ ಚಿತ್ರಕ್ಕೂ ಶುರವಾಗಿದೆ ಭಯ; ಏನಿದು ನಂಟು?

ಸಾಮಾನ್ಯವಾಗಿ ಸಿನಿಮಾ ಮಾಡುವಾಗ ಉಂಟಾಗುವ ಅವಘಡಗಳಿಂದ ಕೆಲವೊಮ್ಮೆ ಪ್ರಾಣ ಹಾನಿ ಆದ ಉದಾಹರಣೆಯೂ ಇದೆ. ಈ ಬಗ್ಗೆ ಹೆಚ್ಚಿನ ಎಚ್ಚರಿಕೆ ಬೇಕು ಎಂಬ ಸೂಚನೆ ಇದ್ದರೂ ಕೆಲವು ನಿರ್ಲಕ್ಷ್ಯದಿಂದ ಈ ರೀತಿಯ ತೊಂದರೆ ಉಂಟಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.