ಶ್ರೀಲೀಲಾ-ನಿತಿನ್-ಡೇವಿಡ್ ವಾರ್ನರ್ ನಟನೆಯ ‘ರಾಬಿನ್​ಹುಡ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

|

Updated on: Mar 28, 2025 | 11:30 AM

Robinhood: ನಿತಿನ್, ಶ್ರೀಲೀಲಾ ಮತ್ತು ಡೇವಿಡ್ ವಾರ್ನರ್ ನಟಿಸಿರುವ ‘ರಾಬಿನ್​ಹುಡ್’ ಸಿನಿಮಾ ನೋಡಿದ ಮಂದಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಡೇವಿಡ್ ವಾರ್ನರ್ ಸಹ ನಟಿಸಿರುವ ಕಾರಣ ಸಿನಿಮಾದ ಬಗ್ಗೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇತ್ತು. ಸಿನಿಮಾ ನೋಡಿದವರಿಗೆ ಏನನ್ನಿಸಿತು? ಇಲ್ಲಿದೆ ಮಾಹಿತಿ...

ಶ್ರೀಲೀಲಾ-ನಿತಿನ್-ಡೇವಿಡ್ ವಾರ್ನರ್ ನಟನೆಯ ‘ರಾಬಿನ್​ಹುಡ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
Robinhood Movie
Follow us on

ಶ್ರೀಲೀಲಾ, ‘ಜಯಂ’ ಖ್ಯಾತಿಯ ನಟ ನಿತಿನ್ ಮತ್ತು ಕ್ರಿಕೆಟಿಗ ಡೇವಿಡ್ ವಾರ್ನರ್ ಒಟ್ಟಿಗೆ ನಟಿಸಿರುವ ‘ರಾಬಿನ್​ಹುಡ್’ ಸಿನಿಮಾ ಇಂದು (ಮಾರ್ಚ್ 28) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳು ಸಹ ಪ್ರದರ್ಶನಗೊಂಡಿದ್ದು, ಸಿನಿಮಾ ನೋಡಿದ ಮಂದಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಡೇವಿಡ್ ವಾರ್ನರ್ ಸಹ ನಟಿಸಿರುವ ಕಾರಣ ಸಿನಿಮಾದ ಬಗ್ಗೆ ನಿರೀಕ್ಷೆ ತುಸು ಹೆಚ್ಚಾಗಿಯೇ ಇತ್ತು. ಸಿನಿಮಾ ನೋಡಿದವರಿಗೆ ಏನನ್ನಿಸಿತು? ಇಲ್ಲಿದೆ ಮಾಹಿತಿ…

ತೆಲುಗು ಕಲ್ಟ್ ಎಂಬ ಟ್ವಿಟ್ಟರ್ ಖಾತೆಯಿಂದ ಮಾಡಲಾದ ಟ್ವೀಟ್​ನಲ್ಲಿ, ‘ಈ ಬೇಸಗೆ ಸೀಸನ್​ನ ಬೆಸ್ಟ್ ಎಂಟರ್ಟೈನರ್ ಸಿನಿಮಾ ‘ರಾಬಿನ್​ಹುಡ್’. ನಟ ನಿತಿನ್ ಮತ್ತು ರಾಜೇಂದ್ರ ಪ್ರಸಾದ್ ಅವರುಗಳು ಈ ಸಿನಿಮಾದ ಜೀವಾಳ. ನಿರ್ದೇಶಕ ವೆಂಕಿ ಕುಡುಮಲ ಅವರು ಸರಳವಾದ ಕತೆ ಇಟ್ಟುಕೊಂಡು ಅದಕ್ಕೆ ಹದವಾದ ಹಾಸ್ಯ ಬೆರೆಸಿ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಅತಿಥಿ ಪಾತ್ರದ ಎಂಟ್ರಿ ಸಖತ್ ಆಗಿದೆ. ಶ್ರೀಲೀಲಾ ನಟನೆಯೂ ಅದ್ಭುತವಾಗಿದೆ. ಮೈತ್ರಿ ಮೂವಿ ಮೇಕರ್ಸ್​ಗೆ ಮತ್ತೊಂದು ಜಯ ತಂದುಕೊಡಲಿದೆ ಈ ಸಿನಿಮಾ’ ಎಂದಿದ್ದಾರೆ.

ವೆಂಕಟೇಶ್ ಕಿಲಾರು ಎಂಬುವರು ಟ್ವೀಟ್ ಮಾಡಿ, ‘ರಾಬಿನ್​ಹುಡ್’ ಒಳ್ಳೆಯ ಎಂಟರ್ಟೈನ್​ಮೆಂಟ್ ಇರುವ ಸಿನಿಮಾ ಇದು. ಮೊದಲಾರ್ಧ ಚೆನ್ನಾಗಿದೆ. ದ್ವಿತೀಯಾರ್ಧ ಸಾಧಾರಣವಾಗಿದೆ. ಕತೆ ಪ್ರಧಾನವಾಗಿರುವ ಸಿನಿಮಾ ಇದಲ್ಲ, ಆದರೆ ಎಂಜಾಯ್ ಮಾಡಲು ಕುಟುಂಬದೊಂದಿಗೆ ಹೋಗಬಹುದಾದ ಸಿನಿಮಾ. ‘ರಾಬಿನ್​ಹುಡ್’ ಸರಣಿ ಮುಂದುವರೆಯಲಿದೆ. ಎರಡನೇ ಭಾಗಕ್ಕೆ ಡೇವಿಡ್ ವಾರ್ನರ್ ವಿಲನ್’ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ನಿತಿನ್ ಪಾಲಿಗೆ ಇದೊಂದು ಡಿಲೆಂಟ್ ಕಮ್​ಬ್ಯಾಕ್ ಸಿನಿಮಾ ಆಗಿದೆ. ನಿತಿನ್ ಎನರ್ಜಿ, ಶ್ರೀಲೀಲಾ ಗ್ಲಾಮರ್, ಹಿನ್ನೆಲೆ ಸಂಗೀತ, ಪ್ರೊಡಕ್ಷನ್ ಎಲ್ಲವೂ ಚೆನ್ನಾಗಿದೆ. ಡೇವಿಡ್ ವಾರ್ನರ್ ಅತಿಥಿ ಪಾತ್ರ ಸಿನಿಮಾದ ಪ್ರಮುಖ ಹೈಲೈಟ್​ಗಳಲ್ಲಿ ಒಂದು. ಇಂಟರ್ವೆಲ್, ಕ್ಲೈಮ್ಯಾಕ್ಸ್ ಎರಡೂ ಸಹ ಅದ್ಭುತವಾಗಿದೆ. ಒಳ್ಳೆಯ ಮಾಸ್ ಎಂಟರ್ಟೈನ್​ಮೆಂಟ್ ಸಿನಿಮಾ ಇದಾಗಿದೆ ಎಂದಿದೆ ಟಾಲಿವುಡ್ ಬಾಕ್ಸ್ ಆಫೀಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ