ಕೊನೆಗೂ ಹೊರಬಿತ್ತು ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ದಿನಾಂಕ; ಮನೋಜ್ ಜೊತೆ ಮತ್ತೋರ್ವ ಸ್ಟಾರ್ ಹೀರೋ
‘ಫ್ಯಾಮಿಲಿ ಮ್ಯಾನ್ ಸೀಸನ್ 3’ ಯಾವಾಗ ಬಿಡುಗಡೆಯಾಗಲಿದೆ ಎಂದು ಮನೋಜ್ ಬಾಜ್‌ಪೇಯಿ ಮಾಹಿತಿ ನಿಡಿದ್ದಾರೆ. ಜೈದೀಪ್ ಅಹ್ಲಾವತ್ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀಸನ್ 2ರ ಅಂತ್ಯದಲ್ಲಿ ಸೂಚಿಸಿದಂತೆ, ಈ ಸೀಸನ್‌ನಲ್ಲಿ ವೈರಸ್ ಮೂಲಕ ದಾಳಿ ನಡೆಯಲಿದೆ. ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸೀಸನ್ ದೊಡ್ಡ ಪ್ರಮಾಣದಲ್ಲಿ ಮೂಡಿ ಬಂದಿದೆ.

‘ಫ್ಯಾಮಿಲಿ ಮ್ಯಾನ್ 2’ (The Family Man Season 2) ಹಲ್ಚಲ್ ಎಬ್ಬಿಸಿದ ಬಳಿಕ ಎರಡನೇ ಸೀಸನ್ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು. ಈ ವೆಬ್ ಸೀರಿಸ್ನ ಮೂರನೇ ಸರಣಿ ಯಾವಾಗ ಬರಲಿದೆ ಎಂಬ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇದ್ದವು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕಾರ್ಯಕ್ರಮ ಒಂದರಲ್ಲಿ ಈ ವೆಬ್ ಸೀರಿಸ್ ನಾಯಕ ಮನೋಜ್ ಬಾಜ್ಪಾಯಿ ಅವರು ಉತ್ತರಿಸಿದ್ದಾರೆ. ಇನ್ನೂ ಕೆಲವು ತಿಂಗಳು ಈ ಸರಣಿಗಾಗಿ ಕಾಯಬೇಕು. ಅವರು ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಿದ್ದಾರೆ.
‘ಫ್ಯಾಮಿಲಿ ಮ್ಯಾನ್ ಸೀಸನ್ 2’ರಲ್ಲಿ ಸಮಂತಾ ವಿಲನ್ ಪಾತ್ರ ಮಾಡಿದ್ದರು. ಈ ಪಾತ್ರವನ್ನು ಕಥಾ ನಾಯಕ ಮನೋಜ್ ಕೊನೆ ಮಾಡುತ್ತಾರೆ. ಈ ಸೀಸನ್ ಪೂರ್ಣಗೊಳ್ಳುವುದಕ್ಕೂ ಮೊದಲು ಮೂರನೇ ಸೀಸನ್ಗೆ ಲಿಂಕ್ ನೀಡಲಾಗಿತ್ತು. ಅಲ್ಲದೆ, ಮೂರನೇ ಸೀಸನ್‌ನಲ್ಲಿ ಬಾಂಬ್ ಅಲ್ಲ, ವೈರಸ್ ಮೂಲಕ ಶತ್ರುಗಳು ದಾಳಿ ಮಾಡುತ್ತಾರೆ ಎಂಬ ರೀತಿಯಲ್ಲಿ ತೋರಿಸಲಾಗಿತ್ತು.
View this post on Instagram
ಮನೋಜ್ ಅವರು ಹೇಳಿರುವ ಪ್ರಕಾರ, ಫ್ಯಾಮಿಲಿ ಮ್ಯಾನ್ ಸೀಸನ್ 3 ನವೆಂಬರ್ನಲ್ಲಿ ರಿಲೀಸ್ ಆಗಲಿದೆ. ‘ನವೆಂಬರ್ನಲ್ಲಿ ಹೊಸ ಸೀಸನ್ ಬರಲಿದೆ. ಈ ಸರಣಿಗೆ ಹೊಸ ನಟ ಸೇರ್ಪಡೆ ಆಗಿದ್ದಾರೆ ಎಂಬ ಸುದ್ದಿಯನ್ನು ನೀವು ಕೇಳಿರಬಹುದು. ಅದುವೇ ಜೈದೀಪ್ ಅಹ್ಲಾವತ್. ಎರಡು ವರ್ಷಗಳ ಹಿಂದೆಯೇ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಪಾತಾಳ್ ಲೋಕ್ ಸೀಸನ್ 2ನಲ್ಲಿ ಒಳ್ಳೆಯ ನಟನೆ ಮಾಡಿದ್ದಾರೆ. ನಮ್ಮ ಅದೃಷ್ಟ, ಅವರು ಫ್ಯಾಮಿಲಿಮ್ಯಾನ್ ಸೀಸನ್ 3ಗೆ ಸಿಕ್ಕರು. ಈ ಸೀಸನ್ ದೊಡ್ಡದಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದೆ’ ಎಂದು ಮನೋಜ್ ಹೇಳಿದ್ದಾರೆ.
ಇದನ್ನೂ ಓದಿ: ‘ಬನ್ಸಾಲಿ ರೀತಿಯ ನಿರ್ದೇಶಕರು ನನಗೆ ಚಾನ್ಸ್ ಕೊಡಲ್ಲ’; ಮನೋಜ್ ಬಾಜ್ಪಾಯಿ ನೇರಮಾತು
ರಾಜ್ ಹಾಗೂ ಡಿಕೆ ಅವರು ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ನ ನಿರ್ದೇಶನ ಮಾಡುತ್ತಾ ಇದ್ದಾರೆ. ಅವರು ಈ ಮೊದಲು ‘ಫರ್ಜಿ’, ‘ಸಿಟಾಡೆಲ್: ಹನಿ ಬನಿ’ ರೀತಿಯ ಸರಣಿಗಳಲ್ಲಿ ಬ್ಯುಸಿ ಇದ್ದರು. ಈ ಕಾರಣಕ್ಕೆ ಹೊಸ ಸೀಸನ್ ಶೂಟ್ ಮಾಡಲು ಸಾಧ್ಯ ಆಗಿರಲಿಲ್ಲ. ಈಗ ಸಮಯ ಮಾಡಿಕೊಂಡು ಅವರು ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ ಶೂಟ್ ಆರಂಭಿಸಿದ್ದಾರೆ. ಪ್ರಿಯಾಮಣಿ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Fri, 28 March 25