‘ಪುಷ್ಪ 2’ ಘಟನೆಯಿಂದ ಎಚ್ಚೆತ್ತ ಸರ್ಕಾರ; ‘ಗೇಮ್ ಚೇಂಜರ್’ ಚಿತ್ರಕ್ಕೆ ಸಂಕಷ್ಟ

|

Updated on: Jan 09, 2025 | 8:48 AM

ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರಕ್ಕೆ ತೆಲಂಗಾಣ ಸರ್ಕಾರದಿಂದ ಹಿನ್ನಡೆ ಎದುರಾಗಿದೆ. ‘ಪುಷ್ಪ 2’ ಪ್ರೀಮಿಯರ್‌ನಲ್ಲಿ ನಡೆದ ಘಟನೆಗಳಿಂದಾಗಿ, ಹೆಚ್ಚುವರಿ ಶೋಗಳು ಮತ್ತು ಟಿಕೆಟ್ ದರ ಏರಿಕೆಗೆ ಅನುಮತಿ ನಿರಾಕರಿಸಿದೆ. ಆದಾಗ್ಯೂ, ಹೈದರಾಬಾದ್‌ನಲ್ಲಿ ಸೀಮಿತ ಸಂಖ್ಯೆಯ ವಿಶೇಷ ಪ್ರದರ್ಶನಗಳಿಗೆ ಅನುಮತಿ ನೀಡಲಾಗಿದೆ.

‘ಪುಷ್ಪ 2’ ಘಟನೆಯಿಂದ ಎಚ್ಚೆತ್ತ ಸರ್ಕಾರ; ‘ಗೇಮ್ ಚೇಂಜರ್’ ಚಿತ್ರಕ್ಕೆ ಸಂಕಷ್ಟ
ರಾಮ್ ಚರಣ್
Follow us on

ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ಜನವರಿ 10ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಈ ಚಿತ್ರಕ್ಕೆ ಈಗ ದೊಡ್ಡ ಹಿನ್ನಡೆ ಆಗಿದೆ. ಇದಕ್ಕೆ ಕಾರಣ ಆಗಿರೋದು ‘ಪುಷ್ಪ 2’ ಪ್ರೀಮಿಯರ್ ದಿನ ನಡೆದ ಘಟನೆ. ಈ ಚಿತ್ರದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತದ ಬಳಿಕ ತೆಲಂಗಾಣ ಸರ್ಕಾರ ಎಚ್ಚೆತುಕೊಂಡಿದ್ದು, ವಿಶೇಷ ಶೋ ಕೊಡಲು ನಿರಾಕರಿಸಿದೆ.

‘ಗೇಮ್ ಚೇಂಜರ್’ ಬರೋಬ್ಬರಿ 450 ಕೋಟಿ ರೂಪಾಯಿ ಬಜೆಟ್​ನಲ್ಲಿ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಚಿತ್ರಕ್ಕೆ ಹೆಚ್ಚುವರಿ ಶೋ ಕೊಡಲು, ಟಿಕೆಟ್ ಹೈಕ್ ಮಾಡಲು ಹಾಗೂ ಬೆನಿಫಿಟ್ ಶೋ ಗಾಗಿ (ಮುಂಜಾನೆ ಫ್ಯಾನ್​ ಶೋ) ಮನವಿ ಮಾಡಿದ್ದರು. ಆದರೆ, ‘ಪುಷ್ಪ 2’ ವಿವಾದ ತಣ್ಣಗಾಗದ ಕಾರಣ ‘ಗೇಮ್ ಚೇಂಜರ್’ ಚಿತ್ರಕ್ಕೆ ಅನುಮತಿ ನಿರಾಕರಿಸಿದೆ.

ಜನವರಿ 10ರ ಮುಂಜಾನೆ 1 ಗಂಟೆಗೆ ಬೆನಿಫಿಟ್ ಶೋ ಆಯೋಜನೆಗೆ ಮನವಿ ಮಾಡಲಾಗಿತ್ತು. ಆದರೆ, ಇದಕ್ಕೆ ಸರ್ಕಾರ ನಿರಾಕರಿಸಿದೆ. ಆದರೆ, ಹೈದರಾಬಾದ್​ನಲ್ಲಿ ಬೆಳಿಗ್ಗೆ 4 ಗಂಟೆಗೆ ಆರು ಕಡೆಗಳಲ್ಲಿ ಮಾತ್ರ ವಿಶೇಷ ಶೋ ಪ್ರದರ್ಶನ ಮಾಡಲು ಅನುಮತಿ ನೀಡಿದೆ. ಮಲ್ಟಿಪ್ಲೆಕ್ಸ್​ನಲ್ಲಿ 150 ರೂಪಾಯಿ ಹಾಗೂ ಸಿಂಗ್​ಸ್ಕ್ರೀನ್ ಥಿಯೇಟರ್​ಗಳಲ್ಲಿ 100 ರೂಪಾಯಿ ಏರಿಕೆಗೆ ಅವಕಾಶ ನೀಡಿದೆ. ಇದು ಮೊದಲ ದಿನ ಮಾತ್ರ. ಜನವರಿ 11ರಿಂದ ಮಲ್ಟಿಪ್ಲೆಕ್ಸ್​ನಲ್ಲಿ 100 ರೂಪಾಯಿ ಹಾಗೂ ಥಿಯೇಟರ್​ಗಳಲ್ಲಿ 50 ರೂಪಾಯಿ ಏರಿಕೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಮಗಳ ಮುಖ ತೋರಿಸುವುದು ಯಾವಾಗ? ಉತ್ತರ ಕೊಟ್ಟ ರಾಮ್ ಚರಣ್

ದಿಲ್ ರಾಜು ಅವರು ‘ಗೇಮ್ ಚೇಂಜರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಿಗ್ ಬಜೆಟ್ ಎಂಬ ಕಾರಣಕ್ಕೆ ಸಿನಿಮಾಗೆ ದೊಡ್ಡ ಮಟ್ಟದ ಗಳಿಕೆ ಮಾಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ನಿರ್ಮಾಣ ಸಂಸ್ಥೆ ನಾನಾ ರೀತಿಯ ಸರ್ಕಸ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.