ರಾಜಿಯಲ್ಲೇ ಮುಗಿದೋಯ್ತು ಹಲ್ಲೆ ಪ್ರಕರಣ? ದೂರನ್ನೇ ದಾಖಲಿಸಿಲ್ಲ ರವೀನಾ ಟಂಡನ್

| Updated By: ರಾಜೇಶ್ ದುಗ್ಗುಮನೆ

Updated on: Jun 03, 2024 | 10:22 AM

ಜೋನ್ 9ರ ಡಿಸಿಪಿ ರಾಜ್ ತಿಲಕ್ ರೋಷನ್ ಅವರು ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ‘ರವೀನಾ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಅವರ ಕಾರನ್ನು ರಿವರ್ಸ್ ತೆಗೆದುಕೊಳ್ಳಲಾಗುತ್ತಿತ್ತು. ಯಾರಿಗೂ ಕಾರು ಟಚ್ ಮಾಡಿಲ್ಲ. ಆದಾಗ್ಯೂ ಮಾತಿನ ಚಕಮಕಿ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಿಯಲ್ಲೇ ಮುಗಿದೋಯ್ತು ಹಲ್ಲೆ ಪ್ರಕರಣ? ದೂರನ್ನೇ ದಾಖಲಿಸಿಲ್ಲ ರವೀನಾ ಟಂಡನ್
ರವೀನಾ
Follow us on

ರವೀನಾ ಟಂಡನ್ (Raveena Tondon) ಮೇಲೆ ಕೆಲವರು ದಾಳಿ ಮಾಡಿದ್ದಾರೆ. ಕಾರು ಹಿಂದಕ್ಕೆ ತೆಗೆಯುವಾಗ ನಡೆದ ಕಿರಿಕ್​ನಲ್ಲಿ ರವೀನಾಗೆ ಕೆಲವರು ತೊಂದರೆ ಕೊಟ್ಟಿದ್ದಾರೆ. ‘ನನಗೆ ಹೊಡೆಯಬೇಡಿ’ ಎಂದು ರವೀನಾ ಬೇಡಿಕೊಂಡಿರೋದು ವಿಡಿಯೋದಲ್ಲಿದೆ. ಇದನ್ನು ಅನೇಕರು ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಅಪ್​ಡೇಟ್ ನೀಡಿದ್ದಾರೆ. ಸದ್ಯ ಈ ಪ್ರಕರಣ ಯಾವ ರೀತಿಯಲ್ಲಿ ಸಾಗಲಿದೆ ಎನ್ನುವುದನ್ನು ನೋಡಬೇಕಿದೆ. ಸೆಲೆಬ್ರಿಟಿಗಳಿಗೆ ಈ ರೀತಿ ಆದರೆ, ಜನಸಾಮಾನ್ಯರ ಸ್ಥಿತಿ ಏನಾಗಬೇಡ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಜೋನ್ 9ರ ಡಿಸಿಪಿ ರಾಜ್ ತಿಲಕ್ ರೋಷನ್ ಅವರು ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ಅವರು ಘಟನೆ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ‘ರವೀನಾ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಅವರ ಕಾರನ್ನು ರಿವರ್ಸ್ ತೆಗೆದುಕೊಳ್ಳಲಾಗುತ್ತಿತ್ತು. ಯಾರಿಗೂ ಕಾರು ಟಚ್ ಮಾಡಿಲ್ಲ. ಆದಾಗ್ಯೂ ಮಾತಿನ ಚಕಮಕಿ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ರವೀನಾ ಆಗಲಿ, ನಮ್ಮ ಮೇಲೆ ಹಲ್ಲೆ ಆಗಿದೆ ಎಂದವರಾಗಲಿ ದೂರು ದಾಖಲು ಮಾಡಿಲ್ಲ. ಹೀಗಾಗಿ ಯಾವುದೇ ಕೇಸ್ ಇಲ್ಲ. ಯಾರಿಗೂ ಹಾನಿ ಆಗಿಲ್ಲ. ಡ್ರೈವರ್ ಬಳಿ ಕೆಳಗೆ ಬರುವಂತೆ ಅಲ್ಲಿಯವರು ಒತ್ತಾಯ ಹೇರಿದ್ದರು. ರವೀನಾ ಅವರನ್ನು ಪ್ರಕರಣದಲ್ಲಿ ತರಲಾಯಿತು ಎನ್ನಲಾಗಿದೆ.

ರವೀನಾ ಅವರು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ. ಅವರು ‘ಅರಣ್ಯಕ್’ ಮೂಲಕ ಒಟಿಟಿಗೆ ಕಾಲಿಟ್ಟಿದ್ದಾರೆ. ಅವರು ‘ಕೆಜಿಎಫ್ 3’ ಸಿನಿಮಾದಲ್ಲೂ ನಟಿಸಲಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಪ್ಲೀಸ್​ ಹೊಡೆಯಬೇಡಿ’: ಕೈ ಮುಗಿದು ಬೇಡಿಕೊಂಡ ರವೀನಾ ಟಂಡನ್​

ಎದುರಿದ್ದವರು ಹೇಳೋದೇ ಬೇರೆ..

ರವೀನಾ ಟಂಡನ್​ ಅವರಿಂದ ಹಲ್ಲೆ ಆಗಿದೆ ಅನ್ನೋದು ಮೊಹಮ್ಮದ್ ಎಂಬಾತನ ಹೇಳಿಕೆ. ‘ರಿವರ್ಸ್ ತೆಗೆಯುವಾಗ ಕಾರು ತಾಯಿಗೆ ತಾಗಿದೆ, ಕಾರು ಚಾಲಕ ನನ್ನ ತಾಯಿಗೆ ಹೊಡದಿದ್ದಾನೆ’ ಎಂದು ಮೊಹಮ್ಮದ್ ಆರೋಪ ಮಾಡಿದ್ದಾರೆ. ಇನ್ನು ಪೊಲೀಸ್ ಠಾಣೆಗೆ ಹೋದರೆ ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಕೂಡ ಅವರು ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೆ ಪೊಲೀಸರು ಯಾವುದೇ ದೂರು ದಾಖಲಾಗಿಲ್ಲ ಎಂದಿದ್ದಾರೆ. ರಾಜಿಯಲ್ಲಿ ಈ ಪ್ರಕರಣ ಮುಗಿದು ಹೋಯಿತೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.