AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ರಸ್ತೆ ನಾಮಕರಣ ಕಾರ್ಯಕ್ರಮ ಫ್ಲೆಕ್ಸ್​ನಲ್ಲಿ ಅಪ್ಪು ಫೋಟೋನೇ ಇಲ್ಲ; ರಾರಾಜಿಸಿದ ರಾಜಕೀಯ ನಾಯಕರು

ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. ಇಂದು (ಫೆ.7) ಈ ರಸ್ತೆಗೆ ಪುನೀತ್ ಹೆಸರು ನಾಮಕರಣ ಆಗುತ್ತಿದೆ.

ಪುನೀತ್​ ರಸ್ತೆ ನಾಮಕರಣ ಕಾರ್ಯಕ್ರಮ ಫ್ಲೆಕ್ಸ್​ನಲ್ಲಿ ಅಪ್ಪು ಫೋಟೋನೇ ಇಲ್ಲ; ರಾರಾಜಿಸಿದ ರಾಜಕೀಯ ನಾಯಕರು
ಪುನೀತ್ ರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on:Feb 07, 2023 | 11:08 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಅಭಿಮಾನಿಗಳಿಗೆ ಇಂದು (ಫೆಬ್ರವರಿ 7) ವಿಶೇಷ ದಿನ. ಕಾರಣ, ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರನ್ನು ಇಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದಕ್ಕಾಗಿ ಹಾಕಿದ ಫ್ಲೆಕ್ಸ್​​ನಲ್ಲಿ ರಾಜಕೀಯ ನಾಯಕರ ಫೋಟೋ ರಾರಾಜಿಸಿದೆ. ಆದರೆ, ಎಲ್ಲಿಯೂ ಪುನೀತ್ ರಾಜ್​ಕುಮಾರ್ ಫೋಟೋ ಇಲ್ಲ. ಇದಕ್ಕೆ ಅಭಿಮಾನಿಗಳ ವಲಯದಿಂದ ಟೀಕೆ ವ್ಯಕ್ತವಾಗಿದೆ. ಪುನೀತ್ ಫೋಟೋವನ್ನು ಹಾಕಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.

ನಟ ಪುನೀತ್ ರಾಜ್​ಕುಮಾರ್ ನಿಧನದ ನಂತರದಲ್ಲಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ರಸ್ತೆ, ವೃತ್ತ, ಪಾರ್ಕ್​ಗೆ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. ಇಂದು (ಫೆ.7) ಈ ರಸ್ತೆಗೆ ಪುನೀತ್ ಹೆಸರು ನಾಮಕರಣ ಆಗುತ್ತಿದೆ. ಇದಕ್ಕಾಗಿ ಫ್ಲೆಕ್ಸ್ ಮಾಡಿಸಲಾಗಿದ್ದು, ಪುನೀತ್ ಫೋಟೋನೇ ಅಲ್ಲಿ ಕಾಣುತ್ತಿಲ್ಲ.

ಉದ್ಘಾಟನಾ ಸಮಾರಂಭ ಎಂದು ದೊಡ್ಡದಾಗಿ ಫ್ಲೆಕ್ಸ್ ಹಾಕಿಸಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ಫೋಟೋಗಳು ಇವೆ. ಯಾರಿಗೋಸ್ಕರ ಕಾರ್ಯಕ್ರಮ ಮಾಡಲಾಗುತ್ತಿದೆಯೋ ಅವರ ಫೋಟೋವನ್ನು ಎಲ್ಲಿಯೂ ಹಾಕಿಲ್ಲ. ಇದಕ್ಕೆ ಅಭಿಮಾನಿಗಳ ವಲಯದಿಂದ ಟೀಕೆ ವ್ಯಕ್ತವಾಗಿದೆ. ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ಹಾಕಬೇಕಿತ್ತು ಎಂದು ಅನೇಕರು ಆಗ್ರಹಿಸಿದ್ದಾರೆ.

ಕಾರ್ಯಕ್ರಮದ ವಿವರ

ಫೆಬ್ರವರಿ 7ರಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ. ‘ಬಾನದಾರಿಯಲ್ಲಿ ಪುನೀತ್ ಪಯಣ’ ಎಂದು ಕಾರ್ಯಕ್ರಮಕ್ಕೆ ಹೆಸರು ನೀಡಲಾಗಿದೆ. ಪದ್ಮನಾಭ ನಗರದ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಉದ್ಘಾಟನೆ ಬಳಿಕ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾಜೇಶ್ ಕೃಷ್ಣನ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:56 am, Tue, 7 February 23