NTR 31: ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್ ಚಿತ್ರದ ಶೂಟಿಂಗ್ ಆರಂಭ ಯಾವಾಗ? ಕೊನೆಗೂ ಸಿಕ್ತು ಮಾಹಿತಿ

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್ ಚಿತ್ರಕ್ಕೆ ತಾತ್ಕಾಲಿಕವಾಗಿ ‘NTR 31’ ಎಂದು ಶೀರ್ಷಿಕೆ ಇಡಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಪ್​​ಡೇಟ್ ಸಿಕ್ಕಿರಲಿಲ್ಲ. ಈಗ ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ.

NTR 31: ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್ ಚಿತ್ರದ ಶೂಟಿಂಗ್ ಆರಂಭ ಯಾವಾಗ? ಕೊನೆಗೂ ಸಿಕ್ತು ಮಾಹಿತಿ
ಜೂನಿಯರ್​ ಎನ್​ಟಿಆರ್​-ಪ್ರಶಾಂತ್ ನೀಲ್

Updated on: May 20, 2023 | 1:21 PM

ಇಂದು (ಮೇ 20) ಜೂನಿಯರ್ ಎನ್​ಟಿಆರ್​ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನಕ್ಕೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ 30ನೇ ಸಿನಿಮಾಗೆ ‘ದೇವರ’ (Devara Movie) ಎನ್ನುವ ಟೈಟಲ್ ಇಡಲಾಗಿದೆ. ಅವರ ಬರ್ತ್​ಡೇ ದಿನ ‘NTR 31’ ಚಿತ್ರದ ಬಗ್ಗೆ ಅಪ್​ಡೇಟ್ ಸಿಕ್ಕಿದೆ. ಈ ಚಿತ್ರದ ಶೂಟಿಂಗ್ ಯಾವಾಗಿನಿಂದ ಆರಂಭ ಆಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಆದರೆ, ಚಿತ್ರದ ಟೈಟಲ್ ಏನು ಎಂಬುದು ಸೀಕ್ರೆಟ್ ಆಗಿಯೇ ಇದೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್​ ಬಂಡವಾಳ ಹೂಡುತ್ತಿದೆ.

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್ ಕೈ ಜೋಡಿಸುತ್ತಾರೆ ಎಂಬ ವಿಚಾರ ಈ ಮೊದಲೇ ಅಧಿಕೃತ ಆಗಿತ್ತು. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘NTR 31’ ಎಂದು ಶೀರ್ಷಿಕೆ ಇಡಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಪ್​​ಡೇಟ್ ಸಿಕ್ಕಿರಲಿಲ್ಲ. ಈಗ ಚಿತ್ರತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ಜೂನಿಯರ್​ ಎನ್​ಟಿಆರ್ ಬರ್ತ್​ಡೇ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. 2024ರ ಮಾರ್ಚ್​​ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ ಎಂದು ಪೋಸ್ಟರ್​​ನಲ್ಲಿ ತಿಳಿಸಲಾಗಿದೆ.

ಸದ್ಯ ಪ್ರಶಾಂತ್ ನೀಲ್ ಅವರು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಿವೆ. ಈ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂಬುದು ಈ ಮೊದಲೇ ಘೋಷಣೆ ಆಗಿದೆ. ಈ ಚಿತ್ರ ರಿಲೀಸ್ ಆದ ಬಳಿಕ ಐದು ತಿಂಗಳ ಗ್ಯಾಪ್ ಸಿಗಲಿದೆ. ಆಗ ಪ್ರಶಾಂತ್ ನೀಲ್ ಅವರು ಹೊಸ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ.

ಇದನ್ನೂ ಓದಿ: ಯಶ್ ಮಾತ್ರವಲ್ಲ ಪ್ರಭಾಸ್ ಜೊತೆಗೂ ದಿಲ್ ರಾಜು ಸಿನಿಮಾ, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾ ಹೆಸರು ಘೋಷಣೆ

ಪ್ರಶಾಂತ್ ನೀಲ್ ಕಸುಬುದಾರಿಕೆ ಬಗ್ಗೆ ಜನರಿಗೆ ಅರ್ಥವಾಗಿದೆ. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಮೂಲಕ ಅವರು ಮೋಡಿ ಮಾಡಿದ್ದಾರೆ. ಈಗ ‘ಸಲಾರ್’ ಮೂಲಕ ಅವರು ಪ್ರೇಕ್ಷಕರು ಎದುರು ಬರಲು ರೆಡಿ ಆಗುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಬಂದ ಬಳಿಕ ಅವರ ಖ್ಯಾತಿ ಹೆಚ್ಚೋದು ಪಕ್ಕಾ ಎನ್ನಲಾಗುತ್ತಿದೆ. ಆ ಬಳಿಕ ಅವರು ಜೂನಿಯರ್ ಎನ್​ಟಿಆರ್ ಜೊತೆ ಕೈ ಜೋಡಿಸಲಿದ್ದಾರೆ. ಈ ಚಿತ್ರ ಸಖತ್ ಆ್ಯಕ್ಷನ್​ನಿಂದ ಕೂಡಿರಲಿದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ