ನಮ್ಮದು ಮದುವೆಯೇ ಅಲ್ಲ ಎಂದಿದ್ದ ನಟಿ ಈಗ ಪ್ರೆಗ್ನೆಂಟ್​​; ಸಾಕ್ಷಿ ಒದಗಿಸಿದ ಫೋಟೋ ವೈರಲ್​

|

Updated on: Jun 12, 2021 | 11:36 AM

Nusrat Jahan: ನಿಖಿಲ್​ ಜೈನ್​ ಮತ್ತು ನುಸ್ರತ್​ ಜಹಾನ್​ ನಡುವೆ ಪದೇಪದೇ ಜಗಳ ಆಗುತ್ತಿದೆ ಎಂಬ ಗುಸುಗುಸು ಹಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದನ್ನು ಈ ದಂಪತಿ ಒಪ್ಪಿಕೊಂಡಿರಲಿಲ್ಲ.

ನಮ್ಮದು ಮದುವೆಯೇ ಅಲ್ಲ ಎಂದಿದ್ದ ನಟಿ ಈಗ ಪ್ರೆಗ್ನೆಂಟ್​​; ಸಾಕ್ಷಿ ಒದಗಿಸಿದ ಫೋಟೋ ವೈರಲ್​
ಸ್ನೇಹಿತೆಯರ ಜೊತೆ ನುಸ್ರತ್​ ಜಹಾನ್​
Follow us on

ಸೆಲೆಬ್ರಿಟಿಗಳ ಕುಟುಂಬದ ಜಗಳ ಬೀದಿಗೆ ಬಂದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಸದ್ಯ ಜನಪ್ರಿಯ ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​ ಅವರ ಸಂಸಾರದ ವಿಚಾರದಲ್ಲಿ ಹಾಗೆಯೇ ಆಗಿದೆ. ಪತಿ ನಿಖಿಲ್​ ಜೈನ್​ ಜೊತೆ ಅವರಿಗೆ ಮನಸ್ತಾಪ ಆಗಿದೆ. ಹಲವು ದಿನಗಳಿಂದ ಅವರು ಜೊತೆಯಾಗಿ ವಾಸಿಸುತ್ತಿಲ್ಲ. ಅಲ್ಲದೆ, ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮ್ಮಿಬ್ಬರ ಮದುವೆಗೆ ಭಾರತದಲ್ಲಿ ಮಾನ್ಯತೆಯೇ ಇಲ್ಲ. ಹಾಗಾಗಿ ಅದು ಮದುವೆಯೇ ಅಲ್ಲ ಎಂದು ಹೇಳಿದ್ದ ನುಸ್ರತ್​ ಈಗ ಗರ್ಭಿಣಿ ಎಂಬ ಸುದ್ದಿ ಹರಡಿದೆ. ಅದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ.

ಬೆಂಗಾಳಿ ಚಿತ್ರರಂಗದ ಇತರೆ ಸ್ನೇಹಿತೆಯರ ಜೊತೆ ನುಸ್ರತ್​ ಪೋಸ್​ ನೀಡಿರುವ ಫೋಟೋವೊಂದು ವೈರಲ್​ ಆಗಿದೆ. ಆ ಫೋಟೋ ನೋಡಿದವರೆಲ್ಲರೂ ನುಸ್ರತ್​ ಪ್ರಗ್ನೆಂಟ್​ ಎಂಬುದನ್ನು ಹೇಳಿದ್ದಾರೆ. ಅವರ ಹೊಟ್ಟೆ ಗಮನಿಸಿದರೆ ಅವರು ಗರ್ಭಿಣಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಆದರೆ ಈ ಬಗ್ಗೆ ನುಸ್ರತ್​ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಿಖಿಲ್​ ಜೈನ್​ ಮತ್ತು ನುಸ್ರತ್​ ನಡುವೆ ಪದೇಪದೇ ಜಗಳ ಆಗುತ್ತಿದೆ ಎಂಬ ಗುಸಗುಸು ಹಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದನ್ನು ಈ ದಂಪತಿ ಒಪ್ಪಿಕೊಂಡಿರಲಿಲ್ಲ. ಈಗ ಇಬ್ಬರ ನಡುವೆ ಕಿರಿಕ್​ ಜಗಜ್ಜಾಹೀರಾಗಿದೆ. ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಿಂದ ನುಸ್ರತ್​ ಜಹಾನ್​ ಡಿಲೀಟ್​ ಮಾಡಿದ್ದಾರೆ. ಇಬ್ಬರ ಮದುವೆ ಮುರಿದು ಬಿದ್ದಿರುವುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ.

ನುಸ್ರತ್​ ಗರ್ಭಿಣಿ ಆಗಿದ್ದಾರೆ ಎನ್ನುವ ಮಾತು ಪತಿ ನಿಖಿಲ್​ ಕಿವಿಗೂ ಬಿದ್ದಿದೆಯಂತೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ‘ಆ ಮಗು ನನ್ನದಲ್ಲ. ನಾವಿಬ್ಬರು ಜೊತೆಯಾಗಿ ವಾಸಿಸದೇ ಆರು ತಿಂಗಳು ಕಳೆದಿದೆ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ.

2019ರ ಜೂನ್​ನಲ್ಲಿ ನುಸ್ರತ್​ ಜಹಾನ್​ ಮತ್ತು ನಿಖಿಲ್​ ಜೈನ್​ ಅವರು ಟರ್ಕಿಗೆ ತೆರಳಿ ಮದುವೆ ಆಗಿದ್ದರು. ‘ಆ ಮದುವೆ ನಡೆದಿದ್ದು ವಿದೇಶದಲ್ಲಿ. ಟರ್ಕಿ ಕಾನೂನಿನ ಪ್ರಕಾರ ಆ ಮದುವೆಗೆ ಮಾನ್ಯತೆ ಇಲ್ಲ. ಅದಕ್ಕೆ ಭಾರತದ ಸ್ಪೆಷಲ್​ ಮ್ಯಾರೇಜ್​ ಆ್ಯಕ್ಟ್​ ಪ್ರಕಾರ ಮಾನ್ಯತೆ ಸಿಗಬೇಕಿತ್ತು. ಅದು ಕೂಡ ಆಗಿಲ್ಲ. ಕಾನೂನಿನ ಪ್ರಕಾರ ಅದು ಲಿವ್​-ಇನ್​-ರಿಲೇಷನ್​ಶಿಪ್​ ಅಷ್ಟೇ. ಹಾಗಾಗಿ ವಿಚ್ಛೇದನ ಪಡೆಯುವ ಅಗತ್ಯವೇ ಇಲ್ಲ’ ಎಂದು ನುಸ್ರತ್​ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ:

ಯಶ್​ ಜೊತೆ ಆಪ್ತವಾಗಿದ್ದ ನಟಿಯ ಸಂಸಾರದಲ್ಲಿ ಬಿರುಗಾಳಿ; ಆ ಮಗು ನಂದಲ್ಲ ಎಂದ ಪತಿ ನಿಖಿಲ್​?

ಭಾರತದ ಕಾನೂನಿನ ದೃಷ್ಟಿಯಲ್ಲಿ ನನ್ನದು ಮದುವೆ ಅಲ್ಲವೇ ಅಲ್ಲ, ವಿಚ್ಛೇದನ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ: ನುಸ್ರತ್ ಜಹಾನ್