ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೋವಿಡ್, ಸೆಟ್ಗೆ ಬೆಂಕಿ, ಸತತ ಕೇಸುಗಳು, ಟೀಕೆ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ಕೊನೆಗೂ ಬಿಡುಗಡೆ ಹಂತವನ್ನು ಆದಿಪುರುಷ್ ಸಿನಿಮಾ ಬಂದು ತಲುಪಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಇಂದು (ಜೂನ್ 16) ತಿರುಪತಿಯಲ್ಲಿ ಬಹು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಪ್ರೀ ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ಆದಿಪುರುಷ್ ಸಿನಿಮಾ ನಿರ್ಮಾಪಕ ಓಂ ರಾವತ್ (Om Raut) ಸಿನಿಮಾದ ನಿರ್ಮಾಪಕರು, ವಿತರಕರಲ್ಲಿ ಮನವಿಯೊಂದನ್ನು ಮಾಡುತ್ತಾ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರು ಹಾಕಿದರು.
ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೆಚ್ಚು ಮಂದಿಗೆ ಮಾತನಾಡಲು ಅವಕಾಶ ಸಿಗಲಿಲ್ಲ, ಆದರೆ ಪ್ರಭಾಸ್ ಮಾತನಾಡುವುದಕ್ಕೆ ಮುಂಚೆ ಚುಟುಕಾಗಿ ಮಾತನಾಡಿದ ನಿರ್ದೇಶಕ ಓಂ ರಾವತ್, ವೇದಿಕೆ ಮೇಲೆಯೇ ಆದಿಪುರುಷ್ ಸಿನಿಮಾದ ನಿರ್ಮಾಪಕ ಭೂಷಣ್ ಕುಮಾರ್, ಸಹ ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್ನ ನಿರ್ಮಾಪಕರು, ವಿತರಕರಾದ ಅನಿಲ್ ತಂಡಾನಿ ಹಾಗೂ ಇನ್ನಿತರರನ್ನು ವೇದಿಕೆ ಮೇಲೆ ಕರೆಸಿ ಸಾಲಾಗಿ ನಿಲ್ಲುವಂತೆ ಹೇಳಿ ಎಲ್ಲರ ಮುಂದೆ ನಿಮ್ಮಗಳ ಮನವಿಯೊಂದು ಮಾಡಲು ಇದೆ ಎಂದು ಮಾತು ಆರಂಭಿಸಿದರು.
ನನ್ನ ತಾಯಿ ನನಗೆ ಹೇಳುತ್ತಿದ್ದರು, ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲಿಯೇ ರಾಮಾಯಣದ ನಾಟಕ ಆಡಿದರೆ ಅದರ ಯಾವುದೇ ಪ್ರದರ್ಶನ ಮಾಡಿದರೆ ಅದನ್ನು ನೋಡಲು ಸಾಕ್ಷಾತ್ ಆಂಜನೇಯ ಸ್ವಾಮಿಯೇ ಬರುತ್ತಾನಂತೆ. ಹಾಗಾಗಿ ನಿರ್ಮಾಪಕರು ಹಾಗೂ ವಿತರಕರಾದ ನಿಮ್ಮ ಬಳಿ ಮನವಿ ಮಾಡುತ್ತಿದ್ದೇನೆ, ಆದಿಪುರುಷ್ ಸಿನಿಮಾ ಎಲ್ಲೇ ಪ್ರದರ್ಶನಗೊಳ್ಳಲಿ ಆಂಜನೇಯ ಸ್ವಾಮಿಗಾಗಿ ಚಿತ್ರಮಂದಿರದಲ್ಲಿ ಒಂದು ಕುರ್ಚಿ ಖಾಲಿ ಇಡಿ ಎಂದು ಓಂ ರಾವತ್ ಮನವಿ ಮಾಡಿದರು. ಮನವಿ ಮಾಡುತ್ತಾ ಮಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಅವರನ್ನು ವೇದಿಕೆ ಮೇಲಿದ್ದವರು ಸಂತೈಸಿದರು.
ಇದನ್ನೂ ಓದಿ:ಆದಿಪುರುಷ್ ಟ್ರೈಲರ್: ರಾಮಾಯಣಕ್ಕೆ ತಂತ್ರಜ್ಞಾನದ ಮೆರುಗು, ‘ಮಾಸ್’ ಅವತಾರದಲ್ಲಿ ಶ್ರೀರಾಮ
ಆ ನಂತರ ಮಾತು ಆರಂಭಿಸಿದ ಪ್ರಭಾಸ್, ಓಂ ರಾವತ್ ಮನವಿಯನ್ನು ಪರಿಗಣಿಸುತ್ತೀರಾ ಹನುಮಂತನಿಗಾಗಿ ಒಂದು ಕುರ್ಚಿ ಬಿಡುತ್ತೀರಾ ಎಂದು ಕೇಳಿದರು. ಆಗ ನಿರ್ಮಾಪಕರು ಹಾಗೂ ವಿತರಕರು ಒಂದೇನೂ ಒಂದಕ್ಕಿಂತಲೂ ಹೆಚ್ಚು ಕುರ್ಚಿಯನ್ನು ಖಾಲಿ ಬಿಡುತ್ತೇವೆ ಎಂದರು.
”ಆದಿಪುರುಷ್ ಸಿನಿಮಾಕ್ಕಾಗಿ ಓಂ ರಾವತ್ ಬಹಳ ಕಷ್ಟಪಟ್ಟಿದ್ದಾನೆ. ಆತ ಒಬ್ಬ ಫೈಟರ್, ನನ್ನ 20 ವರ್ಷದ ವೃತ್ತಿ ಜೀವನದಲ್ಲಿ ಆ ರೀತಿಯ ಒಬ್ಬ ಫೈಟರ್ ಅನ್ನು ನಾನು ನೋಡಿಯೇ ಇಲ್ಲ. ನೀವುಗಳು ನಮ್ಮ ಟೀಸರ್ಗೆ ತೋರಿಸಿದ ಅಭಿಮಾನದಿಂದ ಫಿದಾ ಆಗಿರುವ ಓಂ, ಸಿನಿಮಾದ ಯಾವುದೇ ಅಪ್ಡೇಟ್ ಇದ್ದರೂ ಅದನ್ನು ತೆಲುಗು ಅಭಿಮಾನಿಗಳೇ ಮೊದಲು ನೋಡಬೇಕು ಎಂದು ಇಲ್ಲಿಯೇ ಪ್ರೀ ರಿಲೀಸ್ ಇವೆಂಟ್ ಮಾಡಿಸಿದ” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ