ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಮುಂಚೂಣಿಯಲ್ಲಿರುವ ಆಸ್ಕರ್ 2021 ಪ್ರಶಸ್ತಿ ಸಮಾರಂಭ ಸೋಮವಾರ (ಏಪ್ರಿಲ್ 26) ನಡೆಯಲಿದೆ. ಲಾಸ್ ಏಂಜಲೀಸ್ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಕೊರೊನಾ ವೈರಸ್ ಅಮೆರಿಕದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಿದ್ದರೂ, ಕಾರ್ಯಕ್ರಮಕ್ಕೆ ತೆರಳುವವರು ಮಾಸ್ಕ್ ಧರಿಸುವಂತಿಲ್ಲ. ಕಮರ್ಷಿಯಲ್ ಆ್ಯಡ್ ಬ್ರೇಕ್ನಲ್ಲಿ ಮಾತ್ರ ಮಾಸ್ಕ್ ಧರಿಸಬಹುದಾಗಿದೆ.
ಈ ಬಾರಿ ಯಾವ ಚಿತ್ರಗಳು ಆಸ್ಕರ್ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಇದೆ. ವಿಶೇಷ ಎಂದರೆ ನೆಟ್ಫ್ಲಿಕ್ಸ್ನ 36 ಸಿನಿಮಾಗಳು ಆಸ್ಕರ್ ಸ್ಪರ್ಧೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಮಾಂಕ್ ಹೆಸರಿನ ಸಿನಿಮಾ 10 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ.
ಭಾರತೀಯ ಕಾಲಮಾನ ಮುಂಜಾನೆ 5:30ರಿಂದ 8:30ರ ವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆಸ್ಕರ್ ಕಾರ್ಯಕ್ರಮವನ್ನು ಆಸ್ಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಸ್ಟಾರ್ ವರ್ಲ್ಡ್ ಹಾಗೂ ಸ್ಟಾರ್ ಮೂವಿಸ್ನಲ್ಲಿ ರಾತ್ರಿ 8:30ಕ್ಕೆ ಕಾರ್ಯಕ್ರಮ ರಿ ಟೆಲಿಕಾಸ್ಟ್ ಆಗಲಿದೆ. 93ನೇ ಪ್ರಶಸ್ತಿ ಸಮಾರಂಭವನ್ನು ರಿಜ್ ಅಹ್ಮದ್, ವೈಲಾ ಡೇವಿಸ್, ಬ್ರಾಡ್ ಪಿಟ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನಡೆಸಿಕೊಡುತ್ತಿದ್ದಾರೆ.
ಮಾಸ್ಕ್ ಏಕೆ ಧರಿಸುವಂತಿಲ್ಲ?
ಅಮೆರಿಕದಲ್ಲಿ ಕೊರೊನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಕೊರೊನಾ ಹೆಚ್ಚಿರುವ ರಾಷ್ಟ್ರಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿವೆ. ಆದರೆ, ಈ ಕಾರ್ಯಕ್ರಮಕ್ಕೆ ಎಂಟ್ರಿ ತೆಗೆದುಕೊಳ್ಳುವವರು ಮಾಸ್ಕ್ ಧರಿಸುವಂತಿಲ್ಲ. ಕ್ಯಾಮೆರಾ ಎದುರಿರುವಾಗ ಮಾಸ್ಕ್ ಧರಿಸಿ ಕೂತಿರುವುದು ಅಷ್ಟು ಸುಂದರವಾಗಿ ಕಾಣುವುದಿಲ್ಲ ಎಂಬುದು ಆಯೋಜಕರ ನಂಬಿಕೆ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ನಾಮಿನಿಗಳು, ಶೋ ನಡೆಸಿಕೊಡುವವರು ಹಾಗೂ ನಿಯಮಿತಿ ಗೆಸ್ಟ್ಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತಿದೆ. ಇವರು ಕೊರೊನಾ ಪರೀಕ್ಷೆ ಒಳಪಟ್ಟಿರುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Darshan: ದರ್ಶನ್ಗೆ ಆಸ್ಕರ್ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್!
Published On - 8:48 pm, Sun, 25 April 21