Netflix: ‘ನವರಸ’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ನೆಟ್​ಫ್ಲಿಕ್ಸ್ ಬ್ಯಾನ್ ಮಾಡಬೇಕು ಎಂಬ ಕೂಗೆದ್ದಿರುವುದೇಕೆ?

| Updated By: shivaprasad.hs

Updated on: Aug 08, 2021 | 10:18 AM

Navarasa: ನವರಸ ಚಿತ್ರವು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ಬೆನ್ನಲ್ಲೇ ನೆಟ್​ಫ್ಲಿಕ್ಸ್ ಬ್ಯಾನ್ ಆಗಬೇಕು ಎಂಬ ಕೂಗೆದ್ದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Netflix: ‘ನವರಸ’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ನೆಟ್​ಫ್ಲಿಕ್ಸ್ ಬ್ಯಾನ್ ಮಾಡಬೇಕು ಎಂಬ ಕೂಗೆದ್ದಿರುವುದೇಕೆ?
ನವರಸ ಚಿತ್ರದ ಪೋಸ್ಟರ್(ಸಾಂದರ್ಭಿಕ ಚಿತ್ರ)
Follow us on

ಶುಕ್ರವಾರ (ಆಗಸ್ಟ್ 6)ರಂದು ನೆಟ್​ಫ್ಲಿಕ್ಸ್ 9 ಕತೆಗಳುಳ್ಳ ‘ನವರಸ’(Navarasa) ಚಿತ್ರವನ್ನು ಬಿಡುಗಡೆಗೊಳಿಸಿತ್ತು. ಖ್ಯಾತ ನಿರ್ದೇಶಕ, ನಿರ್ಮಾಪಕ ಮಣಿರತ್ನಂ ನಿರ್ಮಿಸಿರುವ ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ ಈಗ ನೆಟ್​ಫ್ಲಿಕ್ಸನ್ನೇ ಬ್ಯಾನ್ ಮಾಡಬೇಕು ಎಂಬ ಕೂಗು ಎದ್ದಿದೆ. ಟ್ವಿಟರ್​ನಲ್ಲಿ ಈ ಕುರಿತು ಬರೆದುಕೊಂಡಿರುವ ‘ರಾಜಾ ಅಕಾಡೆಮಿ’(Raza Academy) ನೆಟ್​ಫ್ಲಿಕ್ಸ್ ತಮಿಳು ಪತ್ರಿಕೆಯೊಂದಕ್ಕೆ ನೀಡಿರುವ ಜಾಹಿರಾತಿನಲ್ಲಿ ಮುಸ್ಲಿಮರ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪ ಮಾಡಿದೆ.

ನೆಟ್​ಫ್ಲಿಕ್ಸ್ ಬಿಡುಗಡೆ ಮಾಡಿರುವ ಪೋಸ್ಟರ್: 

ವಿವಾದಕ್ಕೀಡಾಗಿರುವ ‘ಇನ್ಮಯಿ’ ಚಿತ್ರದ ಪೋಸ್ಟರ್ (ಕೃಪೆ: Netflix)

ಚಿತ್ರ ಬಿಡುಗಡೆಯಾದ ಆಗಸ್ಟ್ 6ರ ಮಧ್ಯರಾತ್ರಿಯಿಂದಲೇ  #BanNetflix ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ. ಸಿದ್ಧಾರ್ಥ್ ಮತ್ತು ಪಾರ್ವತಿ ಕಾಣಿಸಿಕೊಂಡಿರುವ ‘ಇನ್ಮಯಿ’(Inmai) ಚಿತ್ರದ ಪೋಸ್ಟರ್​ನಲ್ಲಿ ಕುರಾನ್ ಅನ್ನು ಬಳಸಿಕೊಂಡು ಧಾರ್ಮಿಕ ಭಾವನೆಗಳಿಗೆ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಚಿತ್ರವನ್ನು ರತೀಂದ್ರನ್ ಆರ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಕಾರಣದಿಂದಾಗಿ, ನೆಟ್​ಫ್ಲಿಕ್ಸ್​ ಅನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಟ್ವಿಟರ್​ನಲ್ಲಿ ಜೋರಾಗಿದೆ.

‘ರಾಜಾ ಅಕಾಡೆಮಿ’ ಈ ಕುರಿತು ಟ್ವೀಟ್ ಮಾಡಿದ್ದು, ‘ನೆಟ್​ಫ್ಲಿಕ್ಸ್ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್​ಗೆ ಅವಮಾನವಾಗುವಂತೆ ಅದನ್ನು ಜಾಹಿರಾತಿನಲ್ಲಿ ಬಳಸಿಕೊಂಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ನಾವು ಆಗ್ರಹಿಸುತ್ತೇವೆ’ ಎಂದು ಟ್ವೀಟ್ ಮಾಡಿದೆ.

ಆ ಟ್ವೀಟ್ ಇಲ್ಲಿದೆ:

ಈ ಟ್ವೀಟ್​ನ ನಂತರ ಜಾಗತಿಕವಾಗಿ ಬ್ಯಾನ್ ನೆಟ್​ಫ್ಲಿಕ್ಸ್ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

ಇದನ್ನೂ ಓದಿ:

Viral Video: ವಿಡಿಯೋ ಮಾಡ್ತಾ ಮಾಡ್ತಾ ಈಜುಕೊಳಕ್ಕೆ ಬಿದ್ದ ಕ್ಯಾಮರಾ ಮ್ಯಾನ್​​; ವಧು – ವರ ಕಂಗಾಲು! ವಿಡಿಯೋ ವೈರಲ್​

(After Navarasa Movie release Ban Netflix trend in twitter here is the reason)

Published On - 10:17 am, Sun, 8 August 21