ಕಾಫಿ ವಿತ್ ಕರಣ್ 8ನೇ ಸೀಸನ್​ನ ಮೊದಲ ಅತಿಥಿಗಳು ಇವರೇ

|

Updated on: Oct 04, 2023 | 11:41 PM

ಕರಣ್ ಜೋಹರ್ 'ಕಾಫಿ ವಿತ್ ಕರಣ್' ಶೋನ ಹೊಸ ಸೀಸನ್ ಘೋಷಣೆ ಮಾಡುತ್ತಲೇ ಅಭಿಮಾನಿಗಳು, ಈ ಬಾರಿ ಶೋಗೆ ಯಾರ್ಯಾರು ಅತಿಥಿಗಳಾಗಿ ಬರಲಿದ್ದಾರೆ ಎಂಬ ಊಹೆ ಪ್ರಾರಂಭಾಗಿರುವ ಬೆನ್ನಲ್ಲೆ, ಪ್ರಶ್ನೆಗೆ ಉತ್ತರವೂ ದೊರಕಿದೆ.

ಕಾಫಿ ವಿತ್ ಕರಣ್ 8ನೇ ಸೀಸನ್​ನ ಮೊದಲ ಅತಿಥಿಗಳು ಇವರೇ
ಕಾಫಿ ವಿತ್ ಕರಣ್
Follow us on

ಹಿಂದಿ ಕಿರುತೆರೆಯ (Tv) ಜನಪ್ರಿಯ ಜೊತೆಗೆ ವಿವಾದಾತ್ಮಕ ರಿಯಾಲಿಟಿ ಶೋ (Reality Show) ಆಗಿದ್ದ ‘ಕಾಫಿ ವಿತ್ ಕರಣ್‘ (Koffee With Karan) ಇದೀಗ ಒಟಿಟಿಗೆ ವರ್ಗಾವಣೆಗೊಂಡಿದ್ದು, ಇಂದಷ್ಟೆ (ಅಕ್ಟೋಬರ್ 04) ಶೋನ ನಿರೂಪಕ ಕರಣ್ ಜೋಹರ್ ಹೊಸ ಸೀಸನ್​ನ ಘೋಷಣೆ ಮಾಡಿದ್ದಾರೆ. ಕಳೆದ ಸೀಸನ್ ಅನ್ನು ವಿಮರ್ಶೆ, ವ್ಯಂಗ್ಯ ಮಾಡುತ್ತಲೇ ಹೊಸ ಸೀಸನ್ ಬಹಳ ಭಿನ್ನವಾಗಿರಲಿದೆ ಎಂದಿದ್ದಾರೆ ಕರಣ್.

ಕರಣ್ ಜೋಹರ್ ‘ಕಾಫಿ ವಿತ್ ಕರಣ್’ ಶೋನ ಹೊಸ ಸೀಸನ್ ಘೋಷಣೆ ಮಾಡುತ್ತಲೇ ಅಭಿಮಾನಿಗಳು, ಈ ಬಾರಿ ಶೋಗೆ ಯಾರ್ಯಾರು ಅತಿಥಿಗಳಾಗಿ ಬರಲಿದ್ದಾರೆ ಎಂಬ ಲೆಕ್ಕಾಚಾರ ಪ್ರಾರಂಭಿಸಿದ್ದಾರೆ. ಆದರೆ ಇದಕ್ಕೆ ಇಂದೇ ಉತ್ತರ ಸಿಕ್ಕಿದೆ. ‘ಕಾಫಿ ವಿತ್ ಕರಣ್’ ಶೋಗೆ ಮೊದಲ ಅತಿಥಿಗಳಾಗಿ ನಟ ಅಜಯ್ ದೇವಗನ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಬರಲಿದ್ದಾರೆ ಎನ್ನಲಾಗುತ್ತಿದೆ.

ಹೌದು, ಅಜಯ್ ದೇವಗನ್ ಹಾಗೂ ರೋಹಿತ್ ಶೆಟ್ಟಿ ಅವರುಗಳು ಕಾಫಿ ವಿತ್ ಕರಣ್ ಸೀಸನ್ 8ರ ಮೊದಲ ಅತಿಥಿಗಳಾಗಿ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ. ಆದರೆ ಇವರ ಎಪಿಸೋಡ್ ಮೊದಲು ಪ್ರಸಾರವಾಗುತ್ತದೆಯೇ ಇಲ್ಲವೇ ಎಂಬ ಅನುಮಾನ ಇದೆಯಾದರೂ ಶೂಟಿಂಗ್ ಎದುರಿಸುತ್ತಿರುವ 8ನೇ ಸೀಸನ್​ನ ಮೊದಲ ಅತಿಥಿಗಳು ಅಜಯ್ ಹಾಗೂ ರೋಹಿತ್ ಅವರುಗಳೇ ಆಗಿದ್ದಾರೆ.

ಇದನ್ನೂ ಓದಿ:Alia Bhatt: ಕಾಫಿ ವಿತ್ ಕರಣ್ ಹೊಸ ಸೀಸನ್​ಗೆ ಆಲಿಯಾ ಭಟ್ ರಣಬೀರ್ ಕಪೂರ್​ ಮೊದಲ ಅತಿಥಿ?

ಅಜಯ್ ದೇವಗನ್​ಗೆ ಕಾಫಿ ವಿತ್ ಕರಣ್ ಹೊಸದೇನೂ ಅಲ್ಲ. ಈ ಹಿಂದೆ ಈ ಶೋಗೆ ಬಂದಾಗ ತಮ್ಮ ಗಂಭೀರ ಜೋಕ್​ಗಳು, ಕಾಲೆಳೆಯುವ ಉತ್ತರಗಳಿಂದ ಅಜಯ್ ಗಮನ ಸೆಳೆದಿದ್ದರು. ಆದರೆ ರೋಹಿತ್ ಶೆಟ್ಟಿ ಇದೇ ಮೊದಲ ಬಾರಿಗೆ ಈ ಶೋಗೆ ಆಗಮಿಸುತ್ತಿದ್ದಾರೆ. ಈ ಇಬ್ಬರೂ ‘ಸಿಂಘಂ’ ಸರಣಿಯ ಮತ್ತೊಂದು ಸಿನಿಮಾವನ್ನ ಇತ್ತೀಚೆಗಷ್ಟೆ ಘೋಶಿಸಿದ್ದು ಚಿತ್ರೀಕರಣ ಸಹ ಆರಂಭವಾಗಿದೆ.

ಕಳೆದ ‘ಕಾಫಿ ವಿತ್ ಕರಣ್’ ಎಪಿಸೋಡ್​ನಲ್ಲಿ ದಕ್ಷಿಣ ಭಾರತದ ಕೆಲ ತಾರೆಯರು ಸಹ ಭಾಗಿಯಾಗಿದ್ದರು. ಸಮಂತಾ, ವಿಜಯ್ ದೇವರಕೊಂಡ ಅವರುಗಳು ಕಾಫಿ ವಿತ್ ಕರಣ್ ನಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದರು. ಈ ಬಾರಿ ರಾಮ್ ಚರಣ್, ಜೂ ಎನ್​ಟಿಆರ್, ರಾಜಮೌಳಿ ಅವರುಗಳು ಭಾಗಿಯಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಸಾರಾ ಅಲಿ ಖಾನ್, ಜಾನ್ಹವಿ ಕಪೂರ್ ಅವರ ಶೋ ತುಸು ವಿವಾದ ಎಬ್ಬಿಸಿತ್ತು, ಸಾರಾ ಹಾಗೂ ಜಾನ್ಹವಿ, ವಿಜಯ್ ಅನ್ನು ಚೀಸ್​ಗೆ ಹೋಲಿಸಿದ್ದು ಬಹಳ ಚರ್ಚೆಯಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ