Gadar 2: 526 ಕೋಟಿ ರೂಪಾಯಿ ಗಳಿಸಿದ ‘ಗದರ್ 2’ ಚಿತ್ರ ಈಗ ಒಟಿಟಿಯಲ್ಲಿ ಲಭ್ಯ; ಇಲ್ಲಿದೆ ಮಾಹಿತಿ..
Gadar 2 OTT Release: ಒಟಿಟಿಯಲ್ಲಿ ‘ಗದರ್ 2’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುವುದು ಗ್ಯಾರಂಟಿ. ಒಟಿಟಿಯಲ್ಲಿ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ. ಸನ್ನಿ ಡಿಯೋಲ್ ಅಭಿಮಾನಿಗಳು ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಖುಷಿಪಟ್ಟಿದ್ದಾರೆ. ಈಗ ಮನೆಯಲ್ಲೇ ಕುಳಿತು ನೋಡುವ ಸಮಯ ಬಂದಿದೆ.
ಚಿತ್ರಮಂದಿರದಲ್ಲಿ ‘ಗದರ್ 2’ ಸಿನಿಮಾ (Gadar 2) ಧೂಳೆಬ್ಬಿಸಿತು. ಈ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ ಗಳಿಸಿದ್ದು ಬರೋಬ್ಬರಿ 526 ಕೋಟಿ ರೂಪಾಯಿ. ನಟ ಸನ್ನಿ ಡಿಯೋಲ್ ಅವರಿಗೆ ಬಾಲಿವುಡ್ನಲ್ಲಿ ಈ ಚಿತ್ರದಿಂದ ದೊಡ್ಡ ಸಕ್ಸಸ್ ಸಿಕ್ಕಿದೆ. ಅವರು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ. ‘ಗದರ್ 2’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ದೊಡ್ಡ ಪರದೆಯಲ್ಲಿ ಅಬ್ಬರಿಸಿದ ಈ ಸಿನಿಮಾ ಈಗ ಒಟಿಟಿಗೆ ಕಾಲಿಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ‘ಗದರ್ 2’ ಸಿನಿಮಾದ ಒಟಿಟಿ ಹಕ್ಕು ‘ಜೀ5’ (Zee5) ಸಂಸ್ಥೆಯ ಪಾಲಾಗಿದೆ. ಅಕ್ಟೋಬರ್ 6ರಿಂದ ಈ ಸಿನಿಮಾ ಒಟಿಟಿಯಲ್ಲಿ (OTT) ಸ್ಟ್ರೀಮ್ ಆಗಲಿದೆ.
‘ಗದರ್ 2’ ಸಿನಿಮಾ ಅಭೂತಪೂರ್ವ ಯಶಸ್ಸು ಗಳಿಸಲು ಕಾರಣ ಆಗಿದ್ದೇ ಏಕಪರದೆ ಚಿತ್ರಮಂದಿರಗಳು. ಮಾಸ್ ಅಂಶಗಳು ಹೆಚ್ಚಾಗಿದ್ದ ಈ ಸಿನಿಮಾವನ್ನು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಜನರು ಸಖತ್ ಎಂಜಾಯ್ ಮಾಡಿದರು. ಹಾಗೆಯೇ ಮಲ್ಟಿಪ್ಲೆಕ್ಸ್ನಲ್ಲೂ ಈ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಂಡಿತು. ಹಾಗಾಗಿ ಸಿನಿಮಾಗೆ ಈ ಪರಿ ಕಲೆಕ್ಷನ್ ಆಗಲು ಸಾಧ್ಯವಾಯ್ತು. ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗಿ ಪೈಪೋಟಿ ನೀಡಿದರೂ ಕೂಡ ‘ಗದರ್ 2’ ಜಗ್ಗಲಿಲ್ಲ.
ಇದನ್ನೂ ಓದಿ: ‘ಪಠಾಣ್’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ ‘ಗದರ್ 2’; ಏನಿದು ಲೆಕ್ಕಾಚಾರ?
ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಜಾಸ್ತಿ ಇದೆ. ಹೊಸ ಸಿನಿಮಾಗಳನ್ನು ಜನರಿಗೆ ತಲುಪಿಸಲುವಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳು ಸ್ಪರ್ಧೆಗೆ ಇಳಿದಿವೆ. ಅದರಲ್ಲೂ ‘ಗದರ್ 2’ ರೀತಿಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರೀಮ್ ಆದರೆ ಜನರು ಮುಗಿಬಿದ್ದು ನೋಡುತ್ತಾರೆ ಎಂಬ ಗ್ಯಾರಂಟಿ ಇರುತ್ತದೆ. ಒಟಿಟಿಯಲ್ಲಿ ಈ ಸಿನಿಮಾ ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುವ ನಿರೀಕ್ಷೆ ಇದೆ.
1 DAY TO GO! This news got us singing like ‘Oooo ho ho ho, Ooho Oo ho ho’
Your favourite and India’s Biggest Blockbuster #Gadar2 is coming to #ZEE5 in just a day’s wait! #Gadar2OnZEE5 pic.twitter.com/Gh4vSNws0w
— ZEE5 (@ZEE5India) October 5, 2023
‘ಗದರ್ 2’ ಸಿನಿಮಾಗೆ ಅನಿಲ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ. ಅವರಿಗೂ ಕೂಡ ಈ ಚಿತ್ರದಿಂದ ಯಶಸ್ಸು ಸಿಕ್ಕಿದೆ. ಸಿನಿಮಾ ಸೂಪರ್ ಹಿಟ್ ಆದ ಬಳಿಕ ಸನ್ನಿ ಡಿಯೋಲ್ ಅವರು ದೊಡ್ಡ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಬಾಲಿವುಡ್ನ ಅನೇಕರು ಭಾಗಿಯಾಗಿ ಸನ್ನಿ ಡಿಯೋಲ್ ಅವರಿಗೆ ಅಭಿನಂದನೆ ತಿಳಿಸಿದರು. ಈಗ ಸನ್ನಿ ಡಿಯೋಲ್ ನಟನೆಯ ಹೊಸ ಸಿನಿಮಾಗೆ ಆಮಿರ್ ಖಾನ್ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.