‘ಪಠಾಣ್​’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದ ‘ಗದರ್​ 2’; ಏನಿದು ಲೆಕ್ಕಾಚಾರ?

ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ‘ಗದರ್​ 2’ ಚಿತ್ರಕ್ಕಿದೆ. ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾವನ್ನೂ ಈ ಚಿತ್ರ ಮೀರಿಸಿದೆ. ಆ ಬಗ್ಗೆ ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ‘ಗದರ್​ 2’ ಪ್ರದರ್ಶನ ಆಗುತ್ತಿದೆ.

‘ಪಠಾಣ್​’ ಚಿತ್ರಕ್ಕಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದ ‘ಗದರ್​ 2’; ಏನಿದು ಲೆಕ್ಕಾಚಾರ?
ಸನ್ನಿ ಡಿಯೋಲ್​, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Sep 28, 2023 | 6:02 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಬಾಕ್ಸ್​ ಆಫೀಸ್​ ಕಿಂಗ್​ ಎಂಬುದು ಸಾಬೀತಾಗಿದೆ. ಈ ವರ್ಷ ಅವರ ಎರಡು ಸಿನಿಮಾಗಳು (ಪಠಾಣ್​, ಜವಾನ್​) ಬ್ಲಾಕ್​ ಬಸ್ಟರ್​ ಹಿಟ್​ ಆಗಿವೆ. ಹಾಗಂತ ಅವರೊಬ್ಬರೇ ಇಂಥ ಸಾಧನೆ ಮಾಡಿರುವುದಲ್ಲ. ಬಾಲಿವುಡ್​ ನಟ ಸನ್ನಿ ಡಿಯೋಲ್​ ಕೂಡ ಈ ವರ್ಷ ತಮ್ಮ ಸಾಮರ್ಥ್ಯ ಏನು ಎಂಬುದು ತೋರಿಸಿದ್ದಾರೆ. ಅವರು ನಟಿಸಿದ ‘ಗದರ್​ 2’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಅಮೀಷಾ ಪಾಟೇಲ್​, ಸನ್ನಿ ಡಿಯೋಲ್​ (Sunny Deol) ನಟನೆಯ ಈ ಸಿನಿಮಾಗೆ ಜನರು ಮನ ಸೋತಿದ್ದಾರೆ. ‘ಜವಾನ್​’ ಸಿನಿಮಾದ ಅಬ್ಬರದ ನಡುವೆಯೂ ‘ಗದರ್ 2’ ಹವಾ ಮುಂದುವರಿದಿದೆ. ಅಚ್ಚರಿ ಎಂದರೆ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ‘ಗದರ್​ 2’ (Gadar 2) ಚಿತ್ರಕ್ಕಿದೆ. ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾವನ್ನೂ ಈ ಚಿತ್ರ ಮೀರಿಸಿದೆ. ಆ ಬಗ್ಗೆ ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದ ಬಾಕ್ಸ್​ ಆಫೀಸ್​ನಲ್ಲಿ ‘ಪಠಾಣ್​’ ಸಿನಿಮಾ (ಹಿಂದಿ, ತೆಲುಗು ತಮಿಳು ವರ್ಷನ್​ ಸೇರಿ) ಒಟ್ಟು 543 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಕೇವಲ ಹಿಂದಿ ವರ್ಷನ್​ನಿಂದ ಈ ಸಿನಿಮಾ​ ಗಳಿಸಿದ್ದ 524.53 ಕೋಟಿ ರೂಪಾಯಿ. ಈ ಮೊತ್ತವನ್ನು ‘ಗದರ್​ 2’ ಸಿನಿಮಾದ ಹಿಂದಿ ವರ್ಷನ್​ ಗಳಿಕೆ ಹಿಂದಿಕ್ಕಿದೆ. ‘ಗದರ್​ 2’ ಸಿನಿಮಾಗೆ 524.75 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಕಮಾಯಿ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಇದು ಸನ್ನಿ ಡಿಯೋಲ್​ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಗದರ್​ 2’ ಸಿನಿಮಾಗೆ ಅನಿಲ್​ ಶರ್ಮಾ ನಿರ್ದೇಶನ ಮಾಡಿದ್ದಾರೆ. ಆಗಸ್ಟ್​ 11ರಂದು ಬಿಡುಗಡೆ ಆದ ಈ ಸಿನಿಮಾ ಈಗಲೂ ಕೆಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. 7ನೇ ವೀಕೆಂಡ್​ನಲ್ಲೂ ಈ ಸಿನಿಮಾ 2.75 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆ ಮೂಲಕ ಇನ್ನೂ ಜನರು ಈ ಚಿತ್ರವನ್ನು ನೋಡುತ್ತಿದ್ದಾರೆ ಎಂಬುದು ಸಾಬೀತಾಗಿದೆ. ನಟಿ ಅಮೀಷಾ ಪಟೇಲ್​ ಅವರಿಗೂ ಈ ಚಿತ್ರದಿಂದ ಭರ್ಜರಿ ಗೆಲುವು ಸಿಕ್ಕಿದೆ. ಹಲವು ವರ್ಷಗಳಿಂದ ನಿರೀಕ್ಷಿತ ಮಟ್ಟದ ಗೆಲುವು ಕಾಣದೇ ಮಂಕಾಗಿದ್ದ ಸನ್ನಿ ಡಿಯೋಲ್​ ಅವರು ಈ ಚಿತ್ರದಿಂದ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ.

ಸನ್ನಿ ಡಿಯೋಲ್​ ಬಳಿಕ ಅಬ್ಬರಿಸಲು ಸಜ್ಜಾದ ಬಾಬಿ ಡಿಯೋಲ್​; ‘ಅನಿಮಲ್​’ ಪೋಸ್ಟರ್​ ವೈರಲ್​

ಸನ್ನಿ ಡಿಯೋಲ್​ ಅವರು ಸಂಸದ ಕೂಡ ಹೌದು. ಬಹುವರ್ಷಗಳ ಬಳಿಕ ಅವರಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಕ್ಕಿರುವುದರಿಂದ ರಾಜಕೀಯಕ್ಕಿಂತಲೂ ಹೆಚ್ಚಾಗಿ ಸಿನಿಮಾದಲ್ಲಿ ತೊಡಗಿಕೊಳ್ಳಲು ಅವರು ಈಗ ನಿರ್ಧರಿಸಿದ್ದಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ. ಅವರ ಸಹೋದರ ಬಾಬಿ ಡಿಯೋಲ್​ ‘ಅನಿಮಲ್​’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದು, ಆ ಚಿತ್ರ ಡಿಸೆಂಬರ್​ 1ರಂದು ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.