ಈ ಸೂಪರ್ ಹಿಟ್ ಚಿತ್ರಗಳ ಆಫರ್​ನ ರಿಜೆಕ್ಟ್ ಮಾಡಿದ್ದರು ಸಲ್ಮಾನ್ ಖಾನ್..

ಸಲ್ಮಾನ್ ಖಾನ್ ಅವರು ‘ಟೈಗರ್ 3’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಸಲ್ಮಾನ್ ಖಾನ್ ಅವರು ಕೆಲವು ಆಫರ್​ಗಳನ್ನು ರಿಜೆಕ್ಟ್ ಮಾಡಿದ್ದರು. ಆ ಬಳಿಕ ಸಿನಿಮಾ ಬೇರೆಯವರ ಕೈಸೇರಿತ್ತು. ಈ ರೀತಿ ಸಲ್ಲು ರಿಜೆಕ್ಟ್ ಮಾಡಿ ಹಿಟ್ ಆದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಈ ಸೂಪರ್ ಹಿಟ್ ಚಿತ್ರಗಳ ಆಫರ್​ನ ರಿಜೆಕ್ಟ್ ಮಾಡಿದ್ದರು ಸಲ್ಮಾನ್ ಖಾನ್..
ಈ ಸೂಪರ್ ಹಿಟ್ ಚಿತ್ರಗಳ ಆಫರ್​ನ ರಿಜೆಕ್ಟ್ ಮಾಡಿದ್ದರು ಸಲ್ಮಾನ್ ಖಾನ್..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 29, 2023 | 8:59 AM

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ ಅವರು ಸ್ಟಾರ್ ಹೀರೋ ಆಗಿ ಬೆಳೆದಿದ್ದಾರೆ. ಅವರ ಪ್ರತಿ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತವೆ. ಸದ್ಯ ಸಲ್ಮಾನ್ ಖಾನ್ (Salman Khan) ಅವರು ‘ಟೈಗರ್ 3’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಸಲ್ಮಾನ್ ಖಾನ್ ಅವರು ಕೆಲವು ಆಫರ್​ಗಳನ್ನು ರಿಜೆಕ್ಟ್ ಮಾಡಿದ್ದರು. ಆ ಬಳಿಕ ಸಿನಿಮಾ ಬೇರೆಯವರ ಕೈಸೇರಿತ್ತು. ಈ ರೀತಿ ಸಲ್ಲು ರಿಜೆಕ್ಟ್ ಮಾಡಿ ಹಿಟ್ ಆದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬಾಜಿರಾವ್ ಮಸ್ತಾನಿ

ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ತಂದ ಚಿತ್ರ ‘ಬಾಜಿರಾವ್ ಮಸ್ತಾನಿ’ ಸಿನಿಮಾ. ಮೊದಲು ಈ ಚಿತ್ರದ ಆಫರ್​ನ ಸಲ್ಮಾನ್ ಖಾನ್​ಗೆ ನೀಡಲಾಗಿತ್ತು. ಆದರೆ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು.

ಘಜನಿ

ಆಮಿರ್ ಖಾನ್ ವೃತ್ತಿಜೀವನದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಘಜನಿ’ ಚಿತ್ರಕ್ಕೂ ಸ್ಥಾನ ಇದೆ. ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರದ ಆಫರ್ ಮೊದಲು ಸಲ್ಮಾನ್ ಖಾನ್ ಕೈ ಸೇರಿತ್ತು. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ಆಮಿರ್ ಖಾನ್ ಕಥೆ ಕೇಳಿ ಸಿನಿಮಾ ಒಪ್ಪಿಕೊಂಡರು.

ಕಲ್ ಹೋ ನ ಹೋ

ಬಾಲಿವುಡ್​ನ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ‘ಕಲ್​ ಹೋ ನ ಹೋ’ ಚಿತ್ರಕ್ಕೂ ಸ್ಥಾನ ಇದೆ. ಶಾರುಖ್ ಖಾನ್, ಪ್ರೀತಿ ಜಿಂಟಾ, ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಮಾಡಿದ ಪಾತ್ರದ ಆಫರ್ ಮೊದಲು ಹೋಗಿದ್ದು ಸಲ್ಲುಗೆ. ಅವರು ರಿಜೆಕ್ಟ್ ಮಾಡಿದ ಬಳಿಕ ಸೈಫ್​ಗೆ ನೀಡಲಾಯಿತು.

ಚಾಂಪಿಯನ್ಸ್

ಆಮಿರ್ ಖಾನ್ ನಟನೆಯ ‘ಚಾಂಪಿಯನ್ಸ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ನಟಿಸಬೇಕಿತ್ತು. ಆಮಿರ್ ಜೊತೆ ಕೆಲಸ ಮಾಡಬೇಕು ಎಂಬುದು ಸಲ್ಲು ಆಸೆಗಳಲ್ಲಿ ಒಂದಾಗಿತ್ತು. ಆದರೆ, ಸಲ್ಲುನೇ ಈ ಆಫರ್ ರಿಜೆಕ್ಟ್ ಮಾಡಿದ್ದರು. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ ಎನ್ನಲಾಗಿದೆ.

ಜೋಶ್

ಸಲ್ಮಾನ್ ಖಾನ್ ಅವರು ‘ಜೋಶ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ಸಹೋದರನ ಪಾತ್ರದಲ್ಲಿ ನಟಿಸಬೇಕಿತ್ತು. ಐಶ್ವರ್ಯಾ ರೈ ಸಹೋದರನಾಗಿ ನಟಿಸಬೇಕು ಎಂಬ ಕಾರಣಕ್ಕೋ ಏನೋ ಇದನ್ನು ಅವರು ರಿಜೆಕ್ಟ್ ಮಾಡಿದರು. ಆ ಬಳಿಕ ಪಾತ್ರ ಆಮಿರ್ ಖಾನ್ ಅವರ ಬಳಿ ಹೋಯಿತು. ಅವರೂ ಇದನ್ನು ತಿರಸ್ಕರಿಸಿದರು. ಕೊನೆಯಲ್ಲಿ ಈ ಸಿನಿಮಾ ಸೇರಿದ್ದು ಶಾರುಖ್ ಖಾನ್ ಬಳಿ.

ಡಿಡಿಎಲ್​ಜೆ

ಡಿಡಿಎಲ್​ಜೆ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಲ್ಲು ಬಣ್ಣ ಹಚ್ಚಬೇಕಿತ್ತು. ಆದರೆ, ಚಿತ್ರವನ್ನು ಅವರು ರಿಜೆಕ್ಟ್ ಮಾಡಿದ್ದರು.

ಬಾಜಿಗರ್

ಅಬ್ಬಾಸ್ ಹಾಗೂ ಮುಸ್ತಾನ್ ನಿರ್ದೇಶನದ ‘ಬಾಜಿಗರ್’ ಚಿತ್ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಅಬ್ಬಾಸ್ ಹಾಗೂ ಮುಸ್ತಾನ್ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದರು. ಆದರೆ, ಈ ಆಫರ್​ನ ಅವರು ತಿರಸ್ಕರಿಸಿದ ಬಳಿಕ ಶಾರುಖ್ ಖಾನ್ ಬಳಿ ಹೋಯಿತು.

ಇದನ್ನೂ ಓದಿ: ಯಾರೇ ಬಂದರೂ ‘ಡಂಕಿ’ ಕ್ರಿಸ್​​ಮಸ್ ರಿಲೀಸ್ ಫಿಕ್ಸ್; ಸ್ಪಷ್ಟನೆ ನೀಡಿದ ಶಾರುಖ್ ಖಾನ್

ಚಕ್ ದೇ ಇಂಡಿಯಾ

ಶಾರುಖ್ ಖಾನ್ ಅವರು ‘ಚಕ್​ ದೇ ಇಂಡಿಯಾ’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಬೇಕಿತ್ತು. ಈ ಚಿತ್ರದ ಆಫರ್​ನ ಅವರು ರಿಜೆಕ್ಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:15 am, Fri, 29 September 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ