‘ಜವಾನ್’ ಕಲೆಕ್ಷನ್ ಫೇಕ್ ಎಂದವನಿಗೆ ಗದರಿದ ಶಾರುಖ್ ಖಾನ್
‘ಜವಾನ್’ ಸಿನಿಮಾ ಯಶಸ್ಸನ್ನು ಕೆಲವರಿಂದ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣದಿಂದಲೋ ಏನೋ ಅನೇಕರು ‘ಜವಾನ್’ ಚಿತ್ರದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ‘ಜವಾನ್’ ಚಿತ್ರದ ಕಲೆಕ್ಷನ್ ಫೇಕ್ ಎಂದು ಕೆಲವರು ಹೇಳಿದ್ದರು. ಇದನ್ನು ಶಾರುಖ್ ಖಾನ್ ಒಪ್ಪಿಲ್ಲ. ಅವರು ನೇರವಾಗಿಯೇ ಇದಕ್ಕೆ ಉತ್ತರ ನೀಡಿದ್ದಾರೆ.
‘ಜವಾನ್’ ಸಿನಿಮಾ (Jawan Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದಿಂದ ಶಾರುಖ್ ಖಾನ್ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಒಂದೇ ವರ್ಷ ಎರಡು ಗೆಲುವು ಕಂಡು ಶಾರುಖ್ ಖಾನ್ ಬೀಗಿದ್ದಾರೆ. ಈ ಚಿತ್ರದ ಗಳಿಕೆ ಲೆಕ್ಕಾಚಾರ ಸುಳ್ಳು ಎಂಬುದು ಕೆಲವರ ಆರೋಪ. ಈ ಆರೋಪಕ್ಕೆ ಸಂಬಂಧಿಸಿ ಶಾರುಖ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಹೇಳಿದ ಅಭಿಮಾನಿಯನ್ನು ಶಾರುಖ್ (Shah Rukh Khan) ಗದರಿದ್ದಾನೆ.
‘ಜವಾನ್’ ಸಿನಿಮಾ ಯಶಸ್ಸನ್ನು ಕೆಲವರಿಂದ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಕಾರಣದಿಂದಲೋ ಏನೋ ಅನೇಕರು ‘ಜವಾನ್’ ಚಿತ್ರದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ‘ಜವಾನ್’ ಚಿತ್ರದ ಕಲೆಕ್ಷನ್ ಫೇಕ್ ಎಂದು ಕೆಲವರು ಹೇಳಿದ್ದರು. ಇದನ್ನು ಶಾರುಖ್ ಖಾನ್ ಒಪ್ಪಿಲ್ಲ. ಅವರು ನೇರವಾಗಿಯೇ ಇದಕ್ಕೆ ಉತ್ತರ ನೀಡಿದ್ದಾರೆ.
ಶಾರುಖ್ ಖಾನ್ ಅವರು ಆಗಾಗ ‘AskSRK’ ಸೆಷನ್ ನಡೆಸುತ್ತಾರೆ. ಇತ್ತೀಚೆಗೆ ಅವರು ಟ್ವಿಟರ್ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಹೇಳಿದ್ದರು. ‘ಜವಾನ್ ಚಿತ್ರದ ಗಳಿಕೆಯಲ್ಲಿ ನಕಲಿ ಎಷ್ಟು? ಫೇಕ್ ಕಲೆಕ್ಷನ್ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ’ ಎಂದು ವ್ಯಕ್ತಿಯೋರ್ವ ಬರೆದುಕೊಂಡಿದ್ದ. ಇದಕ್ಕೆ ಶಾರುಖ್ ಖಾನ್ ಅವರು ಉತ್ತರ ನೀಡಿದ್ದಾರೆ. ‘ಸುಮ್ಮನೆ ಕುಳಿತುಕೊಳ್ಳಿ ಅಥವಾ ಎಣಿಸುತ್ತಾ ಕೂರಿ. ಕೌಂಟಿಂಗ್ ಮಾಡುವಾಗ ಡಿಸ್ಟ್ರ್ಯಾಕ್ಟ್ ಆಗಬೇಡಿ’ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮೊದಲಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟಾಗಬಹುದು ಎನ್ನುವ ಕುತೂಹಲ ಇದೆ.
ಇದನ್ನೂ ಓದಿ: ಪ್ರಭಾಸ್, ಶಾರುಖ್ ಖಾನ್ ಅಭಿಮಾನಿಗಳಿಂದ ವಿವೇಕ್ ಅಗ್ನಿಹೋತ್ರಿಗೆ ನಿಂದನೆ; ಬೇಸರ ಹೊರಹಾಕಿದ ನಿರ್ದೇಶಕ
ಶಾರುಖ್ ಖಾನ್ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ರಾಜ್ಕುಮಾರ್ ಹಿರಾನಿ ನಿರ್ದೇಶನ ಇದೆ. ಈ ಚಿತ್ರಕ್ಕೆ ‘ಸಲಾರ್’ ಸಿನಿಮಾ ಪೈಪೋಟಿ ನೀಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ