Alia Bhatt: ಕೂದಲು ಯಾವುದು? ಕೋಟ್​ ಯಾವುದು? ಆಲಿಯಾ ಭಟ್​ ಹೊಸ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ

|

Updated on: Jul 18, 2023 | 4:13 PM

ಹಾಲಿವುಡ್​ನ ‘ಹಾರ್ಟ್​ ಆಫ್​ ಸ್ಟೋನ್​’ ಸಿನಿಮಾದಲ್ಲಿ ಆಲಿಯಾ ಭಟ್​ ಅವರು ಕಿಯಾ ಧವನ್​ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರದಿಂದ ಅವರ ಖ್ಯಾತಿ ಜಾಗತಿಕ ಮಟ್ಟದಲ್ಲಿ ಹಬ್ಬಲಿದೆ.

Alia Bhatt: ಕೂದಲು ಯಾವುದು? ಕೋಟ್​ ಯಾವುದು? ಆಲಿಯಾ ಭಟ್​ ಹೊಸ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿ
ಆಲಿಯಾ ಭಟ್​
Follow us on

ನಟಿ ಆಲಿಯಾ ಭಟ್​ (Alia Bhatt) ಅವರು ಈಗ ಕೇವಲ ಬಾಲಿವುಡ್​ಗೆ ಸೀಮಿತವಾಗಿಲ್ಲ. ಹಾಲಿವುಡ್​ನಲ್ಲಿ ಮಿಂಚಲು ಅವರು ಸಿದ್ಧರಾಗಿದ್ದಾರೆ. ಅವರು ನಟಿಸಿರುವ ‘ಹಾರ್ಟ್​ ಆಫ್​ ಸ್ಟೋನ್​’ (Heart of Stone) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್​ 11ರಂದು ಈ ಚಿತ್ರ ನೇರವಾಗಿ ನೆಟ್​ಫ್ಲಿಕ್ಸ್​ (Netflix) ಒಟಿಟಿ ಮೂಲಕ ಪ್ರಸಾರ ಆರಂಭಿಸಲಿದೆ. ‘ಹಾರ್ಟ್​ ಆಫ್​ ಸ್ಟೋನ್​’ ಸಿನಿಮಾ ಬಗ್ಗೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಈಗ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ಆಲಿಯಾ ಭಟ್​ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ತಲೆ ಕೂದಲು ಯಾವುದು? ಧರಿಸಿದ ಕೋಟ್​ ಯಾವುದು ಎಂಬ ವ್ಯತ್ಯಾಸವೇ ತಿಳಿಯದ ರೀತಿಯಲ್ಲಿ ಅವರ ಗೆಟಪ್​ ಇದೆ.

‘ಹಾರ್ಟ್​ ಆಫ್​ ಸ್ಟೋನ್​’ ಸಿನಿಮಾದಲ್ಲಿ ಆಲಿಯಾ ಭಟ್​ ಅವರು ಕಿಯಾ ಧವನ್​ ಎಂಬ ಪಾತ್ರ ಮಾಡಿದ್ದಾರೆ. ಈ ಸಿನಿಮಾದಿಂದ ಅವರ ಖ್ಯಾತಿ ಜಾಗತಿಕ ಮಟ್ಟದಲ್ಲಿ ಹಬ್ಬಲಿದೆ. ಹಾಲಿವುಡ್​ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದ ಭಾರತೀಯ ಕಲಾವಿದರ ಸಂಖ್ಯೆ ಬಹಳ ಕಡಿಮೆ. ಇರ್ಫಾನ್​ ಖಾನ್​, ಡಿಂಪಲ್​ ಕಪಾಡಿಯಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಅಂಥ ಚಾನ್ಸ್ ಪಡೆದುಕೊಂಡಿದ್ದರು. ಈಗ ಆಲಿಯಾ ಭಟ್​ ಕೂಡ ಹಾಲಿವುಡ್​ನಲ್ಲಿ ತಮ್ಮ ಛಾಪು ಮೂಡಿಸಲು ತಯಾರಾಗಿದ್ದಾರೆ.

ಆಲಿಯಾ ಭಟ್​ ಅವರ ಅಭಿಮಾನಿಗಳಿಗೆ ಈಗ ಬ್ಯಾಕ್​ ಟು ಬ್ಯಾಕ್​ ಮನರಂಜನೆ ಸಿಗಲಿದೆ. ಜುಲೈ 28ರಂದು ಹಿಂದಿಯಲ್ಲಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ರಣವೀರ್​ ಸಿಂಗ್​ ನಟಿಸಿದ್ದಾರೆ. ಬಹು ವರ್ಷಗಳ ಬಳಿಕ ಕರಣ್​ ಜೋಹರ್​ ಅವರು ನಿರ್ದೇಶನ ಮಾಡಿರುವುದರಿಂದ ಬಹಳ ನಿರೀಕ್ಷೆ ಮೂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Alia Bhatt: ‘ಪ್ರಚಾರಕ್ಕಾಗಿ ಏನೆಲ್ಲ ಮಾಡ್ತಾರಪ್ಪ’: ಕಂಡವರ ಚಪ್ಪಲಿ ಎತ್ತಿಕೊಟ್ಟ ಆಲಿಯಾ ಭಟ್​ ಬಗ್ಗೆ ನೆಟ್ಟಿಗರ ಟೀಕೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಿದ್ದ ಆಲಿಯಾ ಭಟ್​ ಪತಿ ರಣಬೀರ್​ ಕಪೂರ್​ ನಟಿಸಿರುವ ‘ಅನಿಮಲ್​’ ಸಿನಿಮಾ ಆಗಸ್ಟ್​ 11ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದರ ರಿಲೀಸ್​ ದಿನಾಂಕ ಮುಂದಕ್ಕೆ ಹೋಯಿತು. ಇಲ್ಲದಿದ್ದರೆ ಒಂದೇ ದಿನ ಆಲಿಯಾ ಭಟ್​ ನಟನೆಯ ‘ಹಾರ್ಟ್ ಆಫ್​ ಸ್ಟೋನ್​’ ಮತ್ತು ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಬಿಡುಗಡೆ ಆಗುತ್ತಿದ್ದವು. ಈಗ ‘ಅನಿಮಲ್​’ ರಿಲೀಸ್​ ದಿನಾಂಕ ಡಿಸೆಂಬರ್​ 1ಕ್ಕೆ ಮುಂದೂಡಲ್ಪಟ್ಟಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.