ಅನುಷ್ಕಾ ಶರ್ಮಾ (Anushka Sharma) ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟನೆಯಿಂದ ದೂರವೇ ಉಳಿದರೂ ಚಿತ್ರರಂಗದ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ (Clean Slate Filmz
) ಬ್ಯಾನರ್ ಸ್ಥಾಪಿಸಿ ಅದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗ ಅವರು 8 ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ 8 ಸಿನಿಮಾಗಳಿಂದ ಅವರು ಬರೋಬ್ಬರಿ 405 ಕೋಟಿ ರೂಪಾಯಿ ಬಾಚಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅನುಷ್ಕಾ ಶರ್ಮಾ ಅವರು ನಟನೆಯಿಂದ ದೂರವೇ ಉಳಿದರೂ ನಿರ್ಮಾಣದಲ್ಲಿ ಸಖತ್ ಬ್ಯುಸಿ. ಅವರ ನಿರ್ಮಾಣದ ಹಲವು ಸಿನಿಮಾಗಳು ಒಟಿಟಿಯಲ್ಲಿ ತೆರೆಗೆ ಬಂದಿವೆ. ‘ಪಾತಾಳ್ ಲೋಕ್’ ವೆಬ್ ಸರಣಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದನ್ನು ಅನುಷ್ಕಾ ಅವರೇ ನಿರ್ಮಾಣ ಮಾಡಿದ್ದರು. ಈಗ ಅನುಷ್ಕಾ ನಿರ್ಮಾಣದಲ್ಲಿ ಹೆಚ್ಚು ಸಮಯ ಕಳೆಯೋಕೆ ನಿರ್ಧರಿಸಿದಂತಿದೆ.
ಅನುಷ್ಕಾ ಹಾಗೂ ಅವರ ಸಹೋದರ ಕರ್ಣೇಶ್ ಶರ್ಮಾ ಇಬ್ಬರೂ ಒಟ್ಟಾಗಿ 2013ರಲ್ಲಿ ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಇಬ್ಬರೂ ಸೇರಿ ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕರ್ಣೇಶ್ ಕೂಡ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ 8 ಸಿನಿಮಾಗಳನ್ನು ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಅಮೇಜಾನ್ ಪ್ರೈಮ್ ಹಾಗೂ ನೆಟ್ಫ್ಲಿಕ್ಸ್ ಸಂಸ್ಥೆ ಜತೆ ಒಪ್ಪಂದ ಏರ್ಪಟ್ಟಿದೆ. ಮುಂದಿನ 18 ತಿಂಗಳಲ್ಲಿ ಒಟ್ಟು ಎಂಟು ಸಿನಿಮಾಗಳನ್ನು ಮಾಡಿಕೊಡಲು ಒಪ್ಪಂದ ಆಗಿದೆ. ಇದಕ್ಕೆ ಪ್ರತಿಯಾಗಿ ಅನುಷ್ಕಾ ಅವರು 405 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಅನುಷ್ಕಾ ಶರ್ಮಾ ಅವರು ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟರ್ ಝುಲನ್ ಗೋಸ್ವಾಮಿ ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ಅಡಿಯಲ್ಲಿ ‘ಎನ್ಎಚ್10’, ‘ಪರಿ’, ‘ಪಾತಾಳ್ ಲೋಕ್’, ‘ಬುಲ್ಬುಲ್’ ಮೊದಲಾದವು ಪ್ರಾಜೆಕ್ಟ್ಗಳು ನಿರ್ಮಾಣ ಆಗಿದೆ.
ವೈರಲ್ ಆಗಿತ್ತು ವಮಿಕಾ ಫೋಟೋ
ಮಗಳು ವಮಿಕಾ ವಿಚಾರದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಅವರು ತುಂಬ ಖಾಸಗಿತನ ಬಯಸುತ್ತಿದ್ದಾರೆ. ಈ ಸೆಲೆಬ್ರಿಟಿ ಜೋಡಿಗೆ ಹೆಣ್ಣು ಮಗು ಜನಿಸಿ ಒಂದು ವರ್ಷ ಕಳೆದಿದೆ. ಈವರೆಗೂ ತಮ್ಮ ಪುತ್ರಿಯ ಮುಖವನ್ನು ಜಗತ್ತಿಗೆ ತೋರಿಸಿರಲಿಲ್ಲ. ಆದರೆ ಜ.23 ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದ ವೇಳೆ ಒಂದು ಅಚಾತುರ್ಯ ನಡೆದು ಹೋಯಿತು. ಮಗಳ ಜೊತೆ ಅನುಷ್ಕಾ ಶರ್ಮಾ ಮ್ಯಾಚ್ ನೋಡುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ಆದರೂ ಕೂಡ ಮಗಳ ಮುಖ ತೋರಿಸಬಾರದು ಎಂಬ ತಮ್ಮ ನಿರ್ಧಾರ ಈಗಲೂ ಬದಲಾಗಿಲ್ಲ ಎಂದು ಅನುಷ್ಕಾ ಶರ್ಮಾ ಹೇಳಿದ್ದರು.
‘ಎಲ್ಲರಿಗೂ ಹಾಯ್.. ನಿನ್ನೆ ಸ್ಟೇಡಿಯಂನಲ್ಲಿ ನಮ್ಮ ಮಗಳ ಪೋಟೋವನ್ನು ಸೆರೆಹಿಡಿಯಲಾಯಿತು ಮತ್ತು ಅದನ್ನು ವೈರಲ್ ಮಾಡಲಾಗಿದೆ ಎಂಬುದು ನಮಗೆ ತಿಳಿದುಬಂದಿದೆ. ನಮಗೆ ಗೊತ್ತಿಲ್ಲದಂತೆಯೇ ಅದನ್ನು ಚಿತ್ರಿಸಲಾಗಿದೆ. ನಮ್ಮನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ ಮತ್ತು ಮನವಿ ಮೊದಲಿನಂತೆಯೇ ಇರಲಿದೆ. ವಮಿಕಾಳ ಫೋಟೋ ಕ್ಲಿಕ್ ಮಾಡದಿದ್ದರೆ, ಪ್ರಕಟ ಮಾಡದಿದ್ದರೆ ಅದಕ್ಕಾಗಿ ಧನ್ಯವಾದಗಳು’ ಎಂದು ಅನುಷ್ಕಾ ಶರ್ಮಾ ಬರೆದುಕೊಂಡಿದ್ದರು.
ಇದನ್ನೂ ಓದಿ: ‘ಕಲಬೆರಕೆಯಿಲ್ಲದ ಉದ್ದೇಶ ನಿಮ್ಮದು, ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ’; ವಿರಾಟ್ ಬಗ್ಗೆ ಅನುಷ್ಕಾ ಭಾವನಾತ್ಮಕ ಪತ್ರ
ವಮಿಕಾ ಫೋಟೋ ರಿವೀಲ್ ಮಾಡಿದ ಸ್ಟಾರ್ ಸ್ಟೋರ್ಟ್ಸ್; ಪಂದ್ಯ ನಡೆಯುವಾಗ ಕೊಹ್ಲಿ ಮಗಳನ್ನು ತೋರಿಸಿದ ಕ್ಯಾಮೆರಾಪರ್ಸನ್
Published On - 3:38 pm, Tue, 25 January 22