ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. ‘ಟೈಟಾನಿಕ್’, ‘ಅವತಾರ್’, ‘ಅವತಾರ್ 2’ ಮುಂತಾದ ಚಿತ್ರಗಳ ಮೂಲಕ ಅವರು ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. 2022ರ ಡಿಸೆಂಬರ್ 16ರಂದು ‘ಅವತಾರ್: ದಿ ವೇ ಆಫ್ ವಾಟರ್’ (Avatar: The Way of Water) ಸಿನಿಮಾ ಬಿಡುಗಡೆ ಆಯಿತು. ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಹಾಲಿವುಡ್ ಸಿನಿಮಾಗೆ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಫಿದಾ ಆಗಿದ್ದಾರೆ. ಥಿಯೇಟರ್ನಲ್ಲಿ ‘ಅವತಾರ್ 2’ ಚಿತ್ರವನ್ನು ಮಿಸ್ ಮಾಡಿಕೊಂಡವರು ಈಗ ಮನೆಯಲ್ಲೇ ನೋಡಿ ಎಂಜಾಯ್ ಮಾಡಬಹುದು. ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಾಗುವ ಸಮಯ ಬಂದಿದೆ. ಮಾರ್ಚ್ 28ರಂದು ವಿವಿಧ ಒಟಿಟಿಗಳಲ್ಲಿ ‘ಅವತಾರ್ 2’ (Avatar 2) ಚಿತ್ರದ ಸ್ಟ್ರೀಮಿಂಗ್ ಆರಂಭ ಆಗಲಿದೆ.
ದೃಶ್ಯ ವೈಭವ ಇರುವಂತಹ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ನೋಡಿದರೆ ಅದರ ಅನುಭವವೇ ಬೇರೆ. ಅಂಥ ಪ್ರಕಾರಕ್ಕೆ ಸೇರುವ ಸಿನಿಮಾ ‘ಅವತಾರ್: ದಿ ವೇ ಆಫ್ ವಾಟರ್’. ಥಿಯೇಟರ್ನಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಮೂಲಕ ನೋಡಬಹುದು. ಅಮೇಜಾನ್ ಪ್ರೈಂ ವಿಡಿಯೋ, ಆಪಲ್ ಟಿವಿ, ಮೂವೀಸ್ ಎನಿವೇರ್ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ.
Avatar 3: ಗೆದ್ದು ಬೀಗಿದ ‘ಅವತಾರ್ 2’: ಇನ್ನುಳಿದ ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್ ಕ್ಯಾಮೆರಾನ್
ಹಲವು ಭಾಷೆಗಳಿಗೆ ‘ಅವತಾರ್ 2’ ಸಿನಿಮಾ ಡಬ್ ಆಗಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಜೇಮ್ಸ್ ಕ್ಯಾಮೆರಾನ್ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿರುತ್ತಾರೆ. ಒಟಿಟಿಯಲ್ಲಿ ‘ಅವತಾರ್ 2’ ಸಿನಿಮಾ ವೀಕ್ಷಿಸುವುದರ ಜೊತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದು.
Avatar 2: 1650 ರೂ. ದಾಟಿದ ‘ಅವತಾರ್ 2’ ಟಿಕೆಟ್ ಬೆಲೆ; ಆದ್ರೂ ಮುಗಿಬಿದ್ದು ಬುಕ್ ಮಾಡುತ್ತಿರುವ ಪ್ರೇಕ್ಷಕರು
ಹೆಚ್ಚು ಡಿಮ್ಯಾಂಡ್ ಇರುವ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಾದರೂ ಸಹ ಕೆಲವೊಮ್ಮೆ ಉಚಿತವಾಗಿ ನೋಡಲು ಸಾಧ್ಯವಾಗುವುದಿಲ್ಲ. ಚಂದಾದಾರರಾಗಿದ್ದರೂ ಕೂಡ ಪ್ರತಿ ಬಾರಿ ವೀಕ್ಷಿಸುವಾಗ ಹಣ ಪಾವತಿ ಮಾಡಬೇಕು ಎಂಬ ಷರತ್ತು ಇರುತ್ತದೆ. ‘ಅವತಾರ್: ದಿ ವೇ ಆಫ್ ವಾಟರ್’ ಸಹ ಅದೇ ಮಾರ್ಗ ಅನುಸರಿಸಲಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
Return to Pandora whenever you want at home, only on Digital March 28. Get access to over three hours of never-before-seen extras when you add #AvatarTheWayOfWater to your movie collection. pic.twitter.com/4dOhyjMU9l
— Avatar (@officialavatar) March 7, 2023
2009ರಲ್ಲಿ ಮೊದಲ ‘ಅವತಾರ್’ ಚಿತ್ರ ರಿಲೀಸ್ ಆಗಿತ್ತು. ಬರೋಬ್ಬರಿ 13 ವರ್ಷಗಳ ಬಳಿಕ ‘ಅವತಾರ್ 2’ ಬಿಡುಗಡೆಯಾಗಿ ಯಶಸ್ಸು ಕಂಡಿತು. ಈಗ ‘ಅವತಾರ್ 3’ ಸಿನಿಮಾದ ಕೆಲಸಗಳಲ್ಲಿ ಜೇಮ್ಸ್ ಕ್ಯಾಮೆರಾನ್ ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Wed, 8 March 23