‘ಬಾಹುಬಲಿ’ ಹೊಸ ಕಥೆ; ‘ಕ್ರೌನ್​ ಆಫ್​ ಬ್ಲಡ್​’ ಟ್ರೇಲರ್​ನಲ್ಲಿದೆ ಝಲಕ್​

|

Updated on: May 03, 2024 | 7:17 PM

ಮಾಹಿಷ್ಮತಿ ಸಮ್ರಾಜ್ಯದ ಕಥೆ ಸಣ್ಣದಲ್ಲ. ‘ಬಾಹುಬಲಿ 1’ ಸಿನಿಮಾದಲ್ಲಿ ತೋರಿಸಿದ ಕಥೆಗಿಂತಲೂ ಮುನ್ನ ಆ ಸಾಮ್ರಾಜ್ಯದಲ್ಲಿ ಏನೆಲ್ಲ ಆಗಿತ್ತು ಎಂಬುದು ಯಾರಿಗೂ ತಿಳಿದಿಲ್ಲ. ಆ ಕಹಾನಿಯನ್ನು ತಿಳಿಸಲು ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ‘ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌’ ಮೂಲಕ ಮೇ 17ರಿಂದ ಇದು ಪ್ರಸಾರ ಆರಂಭಿಸಲಿದೆ.

‘ಬಾಹುಬಲಿ’ ಹೊಸ ಕಥೆ; ‘ಕ್ರೌನ್​ ಆಫ್​ ಬ್ಲಡ್​’ ಟ್ರೇಲರ್​ನಲ್ಲಿದೆ ಝಲಕ್​
ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​
Follow us on

ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಈ ಸಿನಿಮಾಗಳ ಕಥೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಅಚ್ಚರಿ ಏನೆಂದರೆ, ಈಗ ಇದೇ ಬಾಹುಬಲಿ’ (Baahubali) ಸಿನಿಮಾದ ಪಾತ್ರಗಳನ್ನು ಇಟ್ಟುಕೊಂಡು ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ಇದಕ್ಕೆ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ (Baahubali Crown of Blood) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಿಗೆ ಝಲಕ್​ ತೋರಿಸಲಾಗಿದೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ (Disney plus Hotstar) ಮೂಲಕ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಪ್ರಸಾರ ಆಗಲಿದೆ.

‘ಬಾಹುಬಲಿ’ ಸಿನಿಮಾದಲ್ಲಿ ನಟ ಪ್ರಭಾಸ್​ ಅವರು ಬಾಹುಬಲಿ ಪಾತ್ರ ಮಾಡಿದ್ದರು. ಭಲ್ಲಾಳದೇವನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಮಿಂಚಿದ್ದರು. ರಾಜಮಾತೆ ಶಿವಗಾಮಿ ಪಾತ್ರದಲ್ಲಿ ರಮ್ಯಾ ಕೃಷ್ಣ ಗಮನ ಸೆಳೆದಿದ್ದರು. ಸತ್ಯರಾಜ್​ ಮಾಡಿದ್ದ ಕಟ್ಟಪ್ಪನ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಈಗ ಈ ಎಲ್ಲ ಪಾತ್ರಗಳನ್ನು ಇಟ್ಟುಕೊಂಡು ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಆ್ಯನಿಮೇಟೆಡ್​ ಸೀರಿಸ್​ ನಿರ್ಮಾಣ ಆಗಿದೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್​, ಆಮಿರ್​, ಸಲ್ಮಾನ್​; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು

ಆ್ಯನಿಮೇಟೆಡ್​ ಸೀರಿಸ್​ಗಳು ಮಕ್ಕಳಿಗೆ ಮಾತ್ರವಲ್ಲ. ಎಲ್ಲ ವರ್ಗದ ಪ್ರೇಕ್ಷಕರಿಗೂ ಆಸಕ್ತಿ ಮೂಡಿಸುವಂತೆ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷಿ ಒದಗಿಸುತ್ತಿದೆ. ‘ಗ್ರಾಫಿಕ್ ಇಂಡಿಯಾ’ ಮತ್ತು ‘ಆರ್ಕ ಮೀಡಿಯಾ ವರ್ಕ್ಸ್’ ಸಂಸ್ಥೆಗಳ ಮೂಲಕ ರಾಜಮೌಳಿ, ಶೋಭು ಯರ್ಲಗಡ್ಡ, ದೇವರಾಜನ್ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಜೀವನ್ ಜೆ. ಕಾಂಗ್ ಹಾಗೂ ನವೀನ್ ಜಾನ್ ಅವರ ನಿರ್ದೇಶನ ಈ ಸೀರಿಸ್​ಗೆ ಇದೆ.

ಕನ್ನಡ, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಆ್ಯನಿಮೇಟೆಡ್​ ಸೀರಿಸ್​ ಸಿದ್ಧವಾಗಿದೆ. ಮೇ 17ರಿಂದ ‘ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌’ ಒಟಿಟಿ ಮೂಲಕ ಇದರ ಪ್ರಸಾರ ಆಗಲಿದೆ. ಅಷ್ಟಕ್ಕೂ ಇದರಲ್ಲಿ ಕಥೆ ಏನು? ಈಗಾಗಲೇ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾ ನೋಡಿರುವವರಿಗೆ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಆ್ಯನಿಮೇಟೆಡ್​ ಸೀರಿಸ್​ನಲ್ಲಿ ಹೊಸದೇನು ಸಿಗಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಟ್ರೇಲರ್​ನಲ್ಲಿ ಉತ್ತರ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.