‘ಆ್ಯಸಿಡ್​ ಹಾಕಲು ಮಾಜಿ ಪ್ರಿಯಕರ ನನ್ನನ್ನು ದಾರಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ; ಕರಾಳ ಸತ್ಯ ಬಿಚ್ಚಿಟ್ಟ ಬಿಗ್​ ಬಾಸ್​ ಸ್ಪರ್ಧಿ

| Updated By: ರಾಜೇಶ್ ದುಗ್ಗುಮನೆ

Updated on: Sep 13, 2021 | 3:07 PM

ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಅಕ್ಷರಾ ಸಿಂಗ್​ ಕಾಣಿಸಿಕೊಂಡಿದ್ದರು. ಆದರೆ, ಅವರು ಅಷ್ಟು ಹೈಲೈಟ್​ ಆಗಿಲ್ಲ. ಈಗ ಅವರು ಮನೆ ಇಂದ ಹೊರ ಬಂದಿದ್ದು, ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ.

‘ಆ್ಯಸಿಡ್​ ಹಾಕಲು ಮಾಜಿ ಪ್ರಿಯಕರ ನನ್ನನ್ನು ದಾರಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದ; ಕರಾಳ ಸತ್ಯ ಬಿಚ್ಚಿಟ್ಟ ಬಿಗ್​ ಬಾಸ್​ ಸ್ಪರ್ಧಿ
‘ಆ್ಸಸಿಡ್​ ಹಾಕಲು ಮಾಜಿ ಪ್ರಿಯಕರ ನನ್ನನ್ನು ದಾರಿಯಲ್ಲಿ ಅಟ್ಟಡಿಸಿಕೊಂಡು ಹೋಗಿದ್ದ; ಕರಾಳ ಸತ್ಯ ಬಿಚ್ಚಿಟ್ಟ ಬಿಗ್​ ಬಾಸ್​ ಸ್ಪರ್ಧಿ
Follow us on

ನಟ-ನಟಿಯರ ಜೀವನ ಅಷ್ಟು ಸುಲಭವಲ್ಲ. ಖಾಸಗಿ ಜೀವನದ ಬಗ್ಗೆ ಹೊರಗೆ ಹೇಳಿಕೊಳ್ಳೋಕೆ ಅನೇಕರು ಹಿಂಜರಿಯುತ್ತಾರೆ. ಆದರೆ, ಕೆಲ ನಟ-ನಟಿಯರು ಈ ಬಗ್ಗೆ ಎಲ್ಲವನ್ನೂ ಓಪನ್​ ಆಗಿ ಹೇಳಿಕೊಳ್ಳುತ್ತಾರೆ. ಭೋಜ್​ಪುರಿ ನಟಿ ಅಕ್ಷರಾ ಸಿಂಗ್​ ತಮ್ಮ ಮಾಜಿ ಪ್ರಿಯಕರ ನೀಡಿದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ಬಿಗ್​ ಬಾಸ್​ ಒಟಿಟಿ ಶೋನಲ್ಲಿ ಅಕ್ಷರಾ ಸಿಂಗ್​ ಕಾಣಿಸಿಕೊಂಡಿದ್ದರು. ಆದರೆ, ಅವರು ಅಷ್ಟು ಹೈಲೈಟ್​ ಆಗಿಲ್ಲ. ಈಗ ಅವರು ಮನೆ ಇಂದ ಹೊರ ಬಂದಿದ್ದು, ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಜೀವನದಲ್ಲಾದ ಕಹಿ ಘಟನೆ ಒಂದನ್ನು ಹೇಳಿಕೊಂಡಿದ್ದಾರೆ. ಅವರು ಈ ಮೊದಲು ಪ್ರೀತಿ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ಅವರ ಲವ್​ ಲೈಫ್​ ಮುರಿದು ಬಿದ್ದಿತ್ತು. ಆದರೆ, ಇಲ್ಲಿಗೆ ಮುಗಿದಿಲ್ಲ. ಅವರು ಪ್ರೀತಿಸಿದ್ದ ಹುಡುಗ ಈ ನಟಿಗೆ ತುಂಬಾನೇ ತೊಂದರೆ ಕೊಟ್ಟಿದ್ದ.

‘ಬ್ರೇಕಪ್​ ಆದ ನಂತರ ವೃತ್ತಿ ಜೀವನವನ್ನು ನಾಶ ಮಾಡುತ್ತೇನೆ, ಕೊಲೆ ಮಾಡುತ್ತೇನೆ ಎನ್ನುವ ಬೆದರಿಕೆ ಬಂತು. ಈ ಬಗ್ಗೆ ನನ್ನ ತಂದೆ ಜತೆ ನಾನು ಮಾತನಾಡಿದ್ದೆ. ಅವರು ನನಗೆ ಸ್ಫೂರ್ತಿ ನೀಡಿದ್ದರು. ನೀನು ನನ್ನ ಕೊಲೆ ಮಾಡುತ್ತೀಯಾ ಎಂದರೆ ಮಾಡು ಎಂದು ನಾನು ಮಾಜಿ ಪ್ರಿಯಕರನಿಗೆ ಹೇಳಿದ್ದೆ. ಏಕೆಂದರೆ, ಸಾವಿನ ಬಗ್ಗೆ ಇದ್ದ ಭಯ ಹೋಗಿತ್ತು. ನನ್ನ ಮಾಜಿ ಪ್ರಿಯಕರ ನನ್ನ ಮೇಲೆ ಆಸಿಡ್​ ದಾಳಿಗೆ ಪ್ರಯತ್ನಿಸಿದ್ದ. ಆತನ ಗೆಳೆಯರಿಗೆ ಆ್ಯಸಿಡ್​ ಬಾಟಲಿ ಕೊಟ್ಟು ಕಳಿಸಿದ್ದ’ ಎಂದಿದ್ದಾರೆ ಅವರು.

‘ಆ್ಯಸಿಡ್​ ಹಾಕೋಕೆ ಬಂದಾಗ ನಾನು ದಾರಿಯಲ್ಲಿ ಓಡಿದ್ದೆ. ಈ ರೀತಿ ಯಾವುದೇ ಮಹಿಳೆಗೂ ಆಗದಿರಲಿ ಎಂದು ದೇವರ ಬಳಿ ಕೇಳಿಕೊಂಡಿದ್ದೆ. ನಂತರ ನನ್ನ ಪ್ರಿಯಕರ ಮತ್ತು ಗೆಳೆಯರಿಂದ ತಪ್ಪಿಸಿಕೊಂಡೆ. ಇದಾದ ನಂತರ ನಾನು ಖಿನ್ನತೆಗೆ ಒಳಗಾಗಿದ್ದೆ’ ಎಂದಿದ್ದಾರೆ ಅಕ್ಷರಾ.

ಅಕ್ಷರಾ ಇತ್ತೀಚೆಗೆ ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆಗಿದ್ದರು. ಶಮಿತಾ ಶೆಟ್ಟಿ ಹಾಗೂ ಮೂಸೆ ಜಟ್ಟಾನ ಜತೆ ಇವರು ಹೆಚ್ಚು ಕಾಣಿಸಿಕೊಂಡಿದ್ದರು. ಆದರೆ, ಅವರು ಹೈಲೈಟ್​ ಆಗಿಲ್ಲ.

ಇದನ್ನೂ ಓದಿ: ಮೊದಲ ಬಾಯ್​ಫ್ರೆಂಡ್​ ಮೃತಪಟ್ಟಿದ್ದು ಹೇಗೆ? ಅಳುತ್ತಲೇ ಶಮಿತಾ ಶೆಟ್ಟಿ ಬಿಚ್ಚಿಟ್ರು ಶಾಕಿಂಗ್​ ವಿಚಾರ

ಮತ್ತೊಂದು ಹುಡುಗಿ ಜತೆ ಆಪ್ತತೆ; ಮುರಿದು ಬಿತ್ತು ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಸಂಬಂಧ