
‘ಬಿಗ್ ಬಾಸ್’ (Bigg Boss) ಭಾರತದಲ್ಲಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಮರಾಠಿಯಲ್ಲಿ ಶೋ ಜನಪ್ರಿಯತೆ ಪಡೆದಿದೆ. ಇಷ್ಟು ವರ್ಷಗಳ ಕಾಲ ಈ ಶೋ ಟಿವಿಗೆ ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಒಟಿಟಿಯಲ್ಲೂ ಈ ಶೋ ಪ್ರಸಾರ ಕಾಣುತ್ತಿದೆ. ಕೇವಲ ಒಟಿಟಿಗಾಗಿಯೇ ಎಕ್ಸ್ಕ್ಲೂಸಿವ್ ಆಗಿ ಶೋ ಮಾಡಿದ ಉದಾಹರಣೆಯೂ ಇದೆ. ಆದರೆ, ಈ ಬಾರಿ ಒಟಿಟಿ ಸೀಸನ್ ಬರುವುದಿಲ್ಲವಂತೆ.
ನಾವು ಮಾತನಾಡುತ್ತಿರುವುದ ಕನ್ನಡದ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಿಗೆ ಹಿಂದಿ ಬಿಗ್ ಬಾಸ್ ಬಗ್ಗೆ. ಹಿಂದಿಯಲ್ಲಿ ಈಗಾಗಲೇ ಎರಡು ಒಟಿಟಿ ಸೀಸನ್ಗಳು ಬಂದು ಹೋಗಿವೆ. ಕಳೆದ ವರ್ಷ ಒಟಿಟಿ ಸೀಸನ್ ಪ್ರಸಾರ ಕಂಡು ಜನಪ್ರಿಯತೆ ಪಡೆಯಿತು. ಕಳೆದ ವರ್ಷ ಎಲ್ವಿಶ್ ಯಾದವ್ ಗೆದ್ದು ಜನಪ್ರಿಯತೆ ಪಡೆದರು. ಅವರು ಈಗ ತಪ್ಪು ಕಾರಣಕ್ಕೆ ಸುದ್ದಿ ಆದರು. ಈ ವರ್ಷ ಒಟಿಟಿ ಸೀಸನ್ ನಡೆಸದೇ ಇರಲು ನಿರ್ಧರಿಸಲಾಗಿದೆ.
ಹಿಂದಿಯಲ್ಲಿ 2006ರಿಂದ ಬಿಗ್ ಬಾಸ್ ಶೋ ಪ್ರಸಾರ ಆಗುತ್ತಿದೆ. ಸಲ್ಮಾನ್ ಖಾನ್ ಅವರು 2010ರಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ಮೊದಲ ಒಟಿಟಿ ಸೀಸನ್ನ ಕರಣ್ ಜೋಹರ್ ಅವರು ನಡೆಸಿಕೊಟ್ಟಿದ್ದಾರೆ. ಎರಡನೇ ಒಟಿಟಿ ಸೀಸನ್ನ ಸಲ್ಮಾನ್ ಖಾನ್ ಅವರೇ ನಡೆಸಿಕೊಟ್ಟರು. ಈ ವರ್ಷ ಮೂರನೇ ಸೀಸನ್ ಬರಬೇಕಿತ್ತು. ಆದರೆ, ಹಾಗೆ ಮಾಡುತ್ತಿಲ್ಲ ಎನ್ನಲಾಗಿದೆ.
ಟಿವಿ ಸೀಸನ್ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಜನರು ಒಟಿಟಿಗೆ ನೀಡುತ್ತಿಲ್ಲ ಎನ್ನುವ ಮಾತಿದೆ. ಒಟಿಟಿ ಸೀಸನ್ಗೆ ಜನಪ್ರಿಯ ಸ್ಪರ್ಧಿಗಳು ಬಂದರೆ ಮಾತ್ರ ಪ್ರೇಕ್ಷಕರು ನೋಡುತ್ತಾರೆ. ಆದರೆ, ಎಲ್ಲಾ ಸಂದರ್ಭಗಳಲ್ಲೂ ಹಾಗೆ ಮಾಡೋಕೆ ಆಗುವುದಿಲ್ಲ. ಹೀಗಾಗಿ, ಒಟಿಟಿ ಸೀಸನ್ ಈ ವರ್ಷ ನಡೆಸದಿರಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಒಟಿಟಿ ಹೊಸ ಸೀಸನ್; ಖಾಸಗಿ ವಿಡಿಯೋ ವೈರಲ್ ಆದ ನಟಿಯರಿಗೆ ಮತ್ತೆ ಅವಕಾಶ?
ಕಳೆದ ವರ್ಷಾಂತ್ಯಕ್ಕೆ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿತು. ಆ ಬಳಿಕ ಒಟಿಟಿ ಸೀಸನ್ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಹೊಸ ಮಾಹಿತಿ ಹೊರಬಿದ್ದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ