ಈಗಾಗಲೇ ಹಿಂದಿಯಲ್ಲಿ ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಶೋ ಮತ್ತೆ ಬರುತ್ತಿದೆ. ಇದರ ಮೂರನೇ ಆವೃತ್ತಿ ಬಗ್ಗೆ ಪ್ರೇಕ್ಷಕರಲ್ಲಿ ಸಖತ್ ನಿರೀಕ್ಷೆ ಮೂಡಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ‘ಬಿಗ್ ಬಾಸ್ ಒಟಿಟಿ 3’ (Bigg Boss OTT 3) ಪ್ರಸಾರ ಆಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ವಿಶೇಷ ಏನೆಂದರೆ, ಈ ಬಾರಿ ನಿರೂಪಕರ ಬದಲಾವಣೆ ಆಗಿದೆ. ‘ಬಿಗ್ ಬಾಸ್ ಒಟಿಟಿ 3’ ಶೋಗೆ ಅನಿಲ್ ಕಪೂರ್ (Anil Kapoor) ನಿರೂಪಣೆ ಮಾಡಲಿದ್ದಾರೆ.
ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ಗೆ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. 2ನೇ ಸೀಸನ್ ಅನ್ನು ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದರು. ಈಗ ಮೂರನೇ ಸೀಸನ್ಗೆ ಆ್ಯಂಕರ್ ಬದಲಾಗಲಿದ್ದಾರೆ ಎಂಬುದನ್ನು ತಿಳಿಸಲು ಈ ಮೊದಲೇ ವಿಶೇಷ ಪ್ರೋಮೋಗಳನ್ನು ಹರಿಬಿಡಲಾಗಿತ್ತು. ಆದರೆ ಅದರಲ್ಲಿ ಅನಿಲ್ ಕಪೂರ್ ಅವರ ಮುಖ ಕಾಣಿಸಿರಲಿಲ್ಲ. ಈಗ ಅಧಿಕೃತವಾಗಿ ‘ಜಿಯೋ ಸಿನಿಮಾ’ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ‘ಬಿಗ್ ಬಾಸ್ ಒಟಿಟಿ 3’ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
🥁Presenting ‘Anil Kapoor’ as the new host for Bigg Boss OTT 3!!!🥁
From reigning on the big screen to now ruling the Bigg Boss house, @AnilKapoor is kuch extra khaas! Witness his magic in #BiggBossOTT3 starting 21 June, exclusively on JioCinema Premium. #BBOTT3onJioCinema… pic.twitter.com/6evXydwlJg
— JioCinema (@JioCinema) June 6, 2024
ಅನಿಲ್ ಕಪೂರ್ ಅವರಿಗೆ ಬಾಲಿವುಡ್ನಲ್ಲಿ ಸಖತ್ ಡಿಮ್ಯಾಂಡ್ ಇದೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿರುವ ಅವರು ಈಗಲೂ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಒಟಿಟಿ 3’ ನಿರೂಪಕನ ಸೀಟ್ಗೆ ಅವರೀಗ ಆಗಮಿಸುತ್ತಿದ್ದಾರೆ. ಈ ಹೊಸ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕಾತರರರಾಗಿದ್ದಾರೆ.
ಇದನ್ನೂ ಓದಿ: ಹುಟ್ಟೂರಿನ ಜನರಿಂದ ಬಿಗ್ ಬಾಸ್ ಸಂಗೀತಾಗೆ ಸಿಕ್ತು ಸಿಕ್ಕಾಪಟ್ಟೆ ಪ್ರೀತಿ
ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ನಡೆಸಿಕೊಡುವ ಗತ್ತೇ ಬೇರೆ. ಟಿವಿ ವರ್ಷನ್ಗೆ ಅವರೇ ನಿರೂಪಕನಾಗಿ ಮುಂದುವರಿಯಲಿದ್ದಾರೆ. ಆದರೆ ಈಗ ಅವರು ‘ಸಿಕಂದರ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಒಟಿಟಿ ವರ್ಷನ್ ನಡೆಸಿಕೊಡಲು ಸಮಯ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆ ಕಾರಣದಿಂದ ಅವರ ಸ್ಥಾನಕ್ಕೆ ಅನಿಲ್ ಕಪುರ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧಿಗಳ ಹೆಸರನ್ನು ಈಗಲೇ ಬಹಿರಂಗ ಮಾಡಿ ಎಂದು ಅನೇಕರು ಕಮೆಂಟ್ ಮೂಲಕ ಬೇಡಿಕೆ ಇಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.