ಇತ್ತ ರಾಜ್ ಕುಂದ್ರಾ ಪ್ರಕರಣದಿಂದಾಗಿ ಶಿಲ್ಪಾ ಶೆಟ್ಟಿ ಕುಟುಂಬದವರ ತಲೆನೋವು ಏನೇ ಇರಲಿ, ಅತ್ತ ಶಿಲ್ಪಾ ತಂಗಿ ಶಮಿತಾ ಶೆಟ್ಟಿ (Shamita Shetty) ಮಾತ್ರ ಬಿಗ್ ಬಾಸ್ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಕರಣ್ ಜೋಹರ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ ಓಟಿಟಿ’ ಕಾರ್ಯಕ್ರಮದಲ್ಲಿ ಶಮಿತಾ ಶೆಟ್ಟಿ ಸಖತ್ ಹೈಲೈಟ್ ಆಗುತ್ತಿದ್ದಾರೆ. ಕೆಲವೊಮ್ಮೆ ಜಗಳದಿಂದ ಅಟೆನ್ಷನ್ ಪಡೆಯುವ ಅವರು, ಮತ್ತೆ ಕೆಲವೊಮ್ಮೆ ರೊಮ್ಯಾನ್ಸ್ ಕಾರಣಕ್ಕಾಗಿ ಸುದ್ದಿ ಆಗುತ್ತಾರೆ. ಇತ್ತೀಚೆಗಂತೂ ಅವರು ರಾಕೇಶ್ ಬಾಪಟ್ ((Raqesh Bapat) ಜೊತೆ ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಾಕೇಶ್ ಅವರನ್ನು ಹತ್ತಿರ ಕರೆದು ‘ನನಗೆ ಈಗಲೇ ಮುತ್ತು ಕೊಡು’ ಎಂದು ನೇರವಾಗಿ ಕ್ಯಾಮೆರಾ ಮುಂದೆಯೇ ಕೇಳುವಷ್ಟರ ಮಟ್ಟಿಗೆ ಶಮಿತಾ ಆ್ಯಕ್ಟೀವ್ ಆಗಿದ್ದಾರೆ.
ಇತ್ತೀಚಿನ ಎಪಿಸೋಡ್ನಲ್ಲಿ ರಾಕೇಶ್ ಬಾಪಟ್ ಅಡುಗೆ ಮಾಡುತ್ತಿದ್ದರು. ‘ಅದನ್ನು ಹೆಚ್ಚು ಬಿಸಿ ಮಾಡಬೇಡ. ಗಟ್ಟಿ ಆಗಿಬಿಡುತ್ತದೆ’ ಎಂದು ಅವರಿಗೆ ಶಮಿತಾ ಸೂಚನೆ ನೀಡಿದರು. ‘ಮತ್ತೇನಾದರೂ ಹೇಳುವುದಿದೆಯೇ’ ಎಂದು ರಾಕೇಶ್ ಕೇಳಿದರು. ಈ ಪ್ರಶ್ನೆಯನ್ನು ತಪ್ಪಾಗಿ ಅರ್ಥಮಾಡಿಕೊಂಡ ಶಮಿತಾ, ‘ಇದರಿಂದ ನಿನಗೇನಾದರೂ ತೊಂದರೆ ಆಯಿತಾ’ ಎಂದು ಮರುಪ್ರಶ್ನೆ ಹಾಕಿದರು. ನಂತರ ತಾವೇ ತಪ್ಪಾಗಿ ಅರ್ಥ ಮಾಡಿಕೊಂಡಿದ್ದು ಎಂಬ ಅರಿವು ಅವರಿಗೆ ಆಯಿತು. ಕೂಡಲೇ ರಾಕೇಶ್ ಅವರನ್ನು ಪಕ್ಕಕ್ಕೆ ಕರೆದು ಮುತ್ತು ಕೊಡಿಸಿಕೊಂಡರು!
‘ಬಾ ಇಲ್ಲಿ. ಈ ಕೂಡಲೇ ನನಗೊಂದು ಮುತ್ತು ಕೊಡು’ ಎಂದು ಲೇಡಿ ಬಾಸ್ ರೀತಿಯಲ್ಲಿ ಒತ್ತಾಯ ಮಾಡಿದರು. ಅದಕ್ಕೆ ಒಪ್ಪಿದ ರಾಕೇಶ್ ಬಾಪಟ್ ಅವರು ಶಮಿತಾ ಕೆನ್ನೆಗೆ ಮುತ್ತಿಟ್ಟರು. ಇದನ್ನೆಲ್ಲ ಹತ್ತಿರದಿಂದಲೇ ನೋಡುತ್ತಿದ್ದ ಕಾಂಟ್ರವರ್ಸಿ ಗಾಯಕಿ ನೇಹಾ ಬಾಸಿನ್ ಅವರು ‘ಸೋ ಸ್ವೀಟ್’ ಎಂದು ಹೊಗಳುತ್ತಾ ನಾಚಿಕೊಂಡರು. ಅವರ ಮಾತಿಗೆ ಪ್ರತಿಕ್ರಿಯಿಸಿದ ಶಮಿತಾ, ‘ರಾಕೇಶ್ ತುಂಬ ಕ್ಯೂಟ್ ಆಗಿದ್ದಾನೆ’ ಎಂದು ಹೇಳಿ ಜಾರಿಕೊಂಡರು. ಈ ವಿಡಿಯೋ ವೈರಲ್ ಆಗುತ್ತಿದೆ. ಇಬ್ಬರ ಬಗ್ಗೆ ನೆಟ್ಟಿಗರು ತರಹೇವಾರಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಇದೇ ರೀತಿ ಆಗಿತ್ತು. ಬಿಗ್ ಬಾಸ್ ಸ್ಪರ್ಧಿಗಳನ್ನು ಎಬ್ಬಿಸಲು ಪ್ರತಿ ದಿನ ಬೆಳಗ್ಗೆ ಹಾಡು ಪ್ಲೇ ಮಾಡಲಾಗುತ್ತಿದೆ. ಈ ವೇಳೆ ಶಮಿತಾ ಶೆಟ್ಟಿ ಮಲಗಿದ್ದ ಜಾಗಕ್ಕೆ ತೆರಳಿದ್ದ ರಾಕೇಶ್ ಬಾಪಟ್ ಅವರು ಕಿಸ್ ಮಾಡಿದ್ದರು. ಅವರು ಶಮಿತಾ ಕೈಗೆ ಮುತ್ತಿಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಿಧಾನವಾಗಿ ಶಮಿತಾ ಮತ್ತು ರಾಕೇಶ್ ಬಾಪಟ್ ನಡುವೆ ಆತ್ಮೀಯತೆ ಹೆಚ್ಚುತ್ತಿರುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.
ಇದನ್ನೂ ಓದಿ:
‘ನೀನು ಡೈಪರ್ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್ ಆದೇಶ ನೀಡಿದ ಶಮಿತಾ ಶೆಟ್ಟಿ