ಪ್ರಸಿದ್ಧ ಬಾಣಸಿಗ ಕುನಾಲ್ ಕಪೂರ್ (Chef Kunal Kapoor) ಅವರು ನಡೆಸುವ ‘ಹಮ್ದರ್ದ್ ಖಾಲಿಸ್ ಮಸಾಲೆ ಫಿಲ್ಮಿ ಮಸಾಲಾ’ ಕಾರ್ಯಕ್ರಮವನ್ನು ‘ನ್ಯೂಸ್ 9 ಲೌಂಜ್’ (News9 Plus Lounge) ಹೆಮ್ಮೆಯಿಂದ ಪ್ರಸ್ತುತಪಡಿಸುತ್ತದೆ. ಇದು ಒಂದು ಸಾಮಾನ್ಯ ಅಡುಗೆ ಕಾರ್ಯಕ್ರಮವಲ್ಲ. ಇದು ಒಂದು ಬ್ಲಾಕ್‌ಬಸ್ಟರ್ ಸಂಭ್ರಮವಾಗಿದ್ದು, ಅಲ್ಲಿ ಬಾಲಿವುಡ್‌ನ ಮೋಡಿಮಾಡುವ ಜಗತ್ತು ಹಾಗೂ ಭಾರತೀಯ ಪಾಕಪದ್ಧತಿಯ ರುಚಿಕರವಾದ ಖಾದ್ಯಗಳ ಸಂಗಮ ಆಗಲಿದೆ. ‘ಹಮ್ದರ್ದ್ ಖಾಲಿಸ್ ಮಸಾಲೆ ಫಿಲ್ಮಿ ಮಸಾಲಾ’ (Hamdard Khaalis Masale Filmy Masala) ಮೂಲಕ ಪ್ರೇಕ್ಷಕರಿಗೆ ಆಹಾರ ಮತ್ತು ಸಿನಿಮಾ ಲೋಕದ ದೊಡ್ಡ ಸಮ್ಮಿಲನವನ್ನು ತೋರಿಸಲಾಗುತ್ತದೆ.
ಪ್ರತಿ ಸಂಚಿಕೆಯಲ್ಲಿ ಹೊಸ ಅಂಶಗಳು ಇರುತ್ತವೆ. ಅದನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಬೆಳ್ಳಿ ಪರದೆಯ ಮಾಯಾ ಜಗತ್ತಿನಲ್ಲಿ ಮರೆಯಲಾಗದ ಕ್ಷಣಗಳ ವಿವರ ಇರುತ್ತದೆ ಮತ್ತು ಸಾಂಪ್ರದಾಯಿಕ ಭಾರತೀಯ ಭಕ್ಷ್ಯಗಳನ್ನು ಪರಿಚಯಿಸಲಾಗುತ್ತದೆ. ತಮ್ಮ ಪಾಕಶಾಲೆಯ ಕೌಶಲ್ಯಕ್ಕೆ ಹೆಸರುವಾಸಿಯಾದ ಶೆಫ್ ಕುನಾಲ್ ಕಪೂರ್ ಅವರು ಈ ಸಾಂಪ್ರದಾಯಿಕ ಭಕ್ಷ್ಯಗಳ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲಿದ್ದಾರೆ. ಚಿತ್ರರಂಗದ ಕುರಿತ ಅನೇಕ ಘಟನೆಗಳನ್ನು ಅವರು ಹಂಚಿಕೊಳ್ಳಲಿದ್ದಾರೆ. ಇದು ವೀಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ.
‘ಹಮ್ದರ್ದ್ ಖಾಲಿಸ್ ಮಸಾಲೆ: ಫಿಲ್ಮಿ ಮಸಾಲಾ’ ಕಾರ್ಯಕ್ರವನ್ನು ನೋಡುವ ಪ್ರೇಕ್ಷಕರಿಗೆ ವಿಶೇಷ ಅನುಭವ ಆಗಲಿದೆ. ಅಡುಗೆಯ ಜೊತೆ ಬಾಲಿವುಡ್‌ನ ಸವಿ ನೆನಪುಗಳ ಪುಟ ತೆರೆದುಕೊಳ್ಳುತ್ತದೆ. ಕುನಾಲ್ ಕಪೂರ್ ಕೈಯಲ್ಲಿ ಆ ಮ್ಯಾಜಿಕ್ ಇದೆ. ಸಾಮಾನ್ಯವಾದ ಪದಾರ್ಥಗಳು ಕೂಡ ಅವರ ಕೈಯಲ್ಲಿ ಹೊಸ ರುಚಿಯನ್ನು ಪಡೆದುಕೊಳ್ಳುತ್ತವೆ. ಈ ಮೂಲಕ ಅಡುಗೆ ಕಲೆಯ ಜೊತೆಜೊತೆಗೆ ಬಾಲಿವುಡ್ ಸಂಗಮ ಇದರಲ್ಲಿ ಆಗಲಿದೆ. ಈ ಸಮಯದಲ್ಲಿ, ಹಳೇ ಡೈಲಾಗ್‌ಗಳು, ತಜ್ಞರ ಅನಿಸಿಕೆ ಮತ್ತು ಬಾಲಿವುಡ್‌ನ ತಮಾಷೆಯ ಸಂಗತಿಗಳನ್ನು ಹೇಳಲಾಗುತ್ತದೆ. ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಫಿಲ್ಮಿ ಮಸಾಸಾ’ ಎಂದರೆ ಪರಿಮಳ, ಭಾವನೆ ಮತ್ತು ಆಹ್ಲಾದಕರ ನೆನಪುಗಳಿಗೆ ಸಮಾನಾರ್ಥಕವಾಗಿದೆ.
ಶೆಫ್ ಚಿದಂಬರ ಪಾತ್ರಕ್ಕಾಗಿ ಅಡುಗೆ ಕಲಿತ ಅನಿರುದ್ಧ್
ನ್ಯೂಸ್ 9 ಪ್ಲಸ್ ಲೌಂಜ್‌ನೊಂದಿಗಿನ ಸಹಯೋಗದ ಬಗ್ಗೆ ‘ಹಮ್ದರ್ದ್ ಲ್ಯಾಬೋರೇಟರೀಸ್ ಇಂಡಿಯಾ’ದ ಮುಖ್ಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಆಫೀಸರ್ ಮನ್ಸೂರ್ ಅಲಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಕುನಾಲ್ ಕಪೂರ್ ಅವರ ‘ಹಮ್ದರ್ದ್ ಖಾಲಿಸ್ ಮಲಾಸೆ: ಫಿಲ್ಮಿ ಮಸಾಲಾ’ ಶೋ ಮೂಲಕ ನ್ಯೂಸ್ 9 ಪ್ಲಸ್ ಲೌಂಜ್‌ನೊಂದಿಗೆ ಕೈ ಜೋಡಿಸಲು ನನಗೆ ಸಂತೋಷವಾಗಿದೆ. ಹಮ್ದರ್ದ್ ಖಾಲಿಸ್ ಸ್ಪೈಸಸ್‌ನೊಂದಿಗೆ ಬಾಣಸಿಗ ಕುನಾಲ್ ಅವರು ಸಹಯೋಗ ಹೊಂದಿರುವುದರಿಂದ ಮತ್ತು ಅವರು ಅದರ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಈ ಸಂತೋಷವು ದ್ವಿಗುಣಗೊಳ್ಳುತ್ತದೆ. ಈ ಕಾರ್ಯಕ್ರಮವು ಆಹಾರದ ಮಸಾಲಾ ಮತ್ತು ಬಾಲಿವುಡ್ ಮಸಾಲಾಗಳ ಸಂಗಮವಾಗಿದೆ. ಆಹಾರದ ಕುರಿತು ಸಿದ್ಧವಾದ ಬಾಲಿವುಡ್‌ನ ಕೆಲವು ಸ್ಮರಣೀಯ ಸಿನಿಮಾಗಳ ಬಗ್ಗೆಯೂ ಇದು ತಿಳಿಸಿಕೊಡುತ್ತದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ನ್ಯೂಸ್9 ಪ್ಲಸ್ ವೆಬ್ ಸಿರೀಸ್, ಬೆದರಿದ ಪಾಕ್
ನೀವು ಆಹಾರಪ್ರಿಯರಾಗಿದ್ದರೆ, ನಿರ್ದಿಷ್ಟ ಖಾದ್ಯದ ಬಗ್ಗೆ ಉತ್ಸುಕರಾಗಿದ್ದರೆ ಅಥವಾ ಅದ್ಭುತ ಮನರಂಜನೆಗಾಗಿ ಹಂಬಲಿಸುತ್ತಿದ್ದರೆ ‘ಫಿಲ್ಮಿ ಮಸಾಲಾ’ ನಿಮಗೆ ವಿಶ್ವದಲ್ಲೇ ಅತ್ಯಂತ ಮನರಂಜನೆಯ ಅಡಿಗೆ ಕಾರ್ಯಕ್ರಮವನ್ನ ನಿಮಗಾಗಿ ಪ್ರಸ್ತುತ ಪಡಿಸುತ್ತದೆ. ‘ಹಮ್ದರ್ದ್ ಖಾಲಿಸ್ ಮಸಾಲೆ ಫಿಲ್ಮಿ ಮಸಾಲಾ’ ಶೋ ಆರಂಭ ಆಗುತ್ತಿದ್ದು ಇದರಲ್ಲಿ ಪ್ರತಿಯೊಂದು ಖಾದ್ಯವೂ ಒಂದೊಂದು ಕಹಾನಿಯನ್ನು ಹೇಳುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.