
‘ಛಾವಾ’ (Chhaava) ಎಂದರೆ ಸಿಂಹದ ಮರಿ, ಹೆಸರಿಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಅಬ್ಬರಿಸಿದೆ ವಿಕ್ಕಿ ಕೌಶಲ್ (Vicky kaushal), ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ಹಿಂದಿ ಸಿನಿಮಾ ‘ಛಾವಾ’. ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಜೀವನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಮೊಘಲರ ವಿರುದ್ಧ ಸಾಂಬಾಜಿ ಮಾಡಿದ ಹೋರಾಟದ ಕತೆಯನ್ನು ತೋರಿಸಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸುಮಾರು 800 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವದಾದ್ಯಂತ ಕಲೆ ಹಾಕಿದೆ. ಭಾರತದಲ್ಲಿ ಮಾತ್ರವೇ ಈ ಸಿನಿಮಾ 600 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.
ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಂಡಿರುವ ‘ಛಾವಾ’ ಸಿನಿಮಾ ಸುಮಾರು ಎರಡು ತಿಂಗಳ ಬಳಿಕ ಒಟಿಟಿಗೆ ಕಾಲಿಡುತ್ತಿವೆ. ಪ್ರೇಮಿಗಳ ದಿನ (ಫೆಬ್ರವರಿ 14) ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ‘ಛಾವಾ’ ಸಿನಿಮಾ, ಏಪ್ರಿಲ್ 11 ರಂದು ಒಟಿಟಿಗೆ ಬರಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 12 ರಂದು ‘ಛಾವಾ’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಹಿಂದಿ ಮತ್ತು ತೆಲುಗಿನಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ‘ಛಾವಾ’ ಸಿನಿಮಾ ಒಟಿಟಿಯಲ್ಲಿ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ.
ಚಿತ್ರಮಂದಿರದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ರೀತಿಯಲ್ಲಿಯೇ ಒಟಿಟಿಯಲ್ಲಿಯೂ ಈ ಸಿನಿಮಾ ದಾಖಲೆ ಬರೆಯಲಿದೆ ಎನ್ನುವ ನಿರೀಕ್ಷೆ ಚಿತ್ರತಂಡದ್ದು. ಈ ಮೊದಲು, ‘ಛಾವಾ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ಛಾವಾ’ ಪ್ರಭಾವ, ಕೋಟೆ ಅಗಿದು ನಿಧಿಗಾಗಿ ಹುಡುಕಿದ ಜನ
‘ಛಾವಾ’ ಸಿನಿಮಾನಲ್ಲಿ ವಿಕ್ಕಿ ಕೌಶಲ್ ಸಾಂಬಾಜಿ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್ ನಟನೆ ಮತ್ತು ಪಾತ್ರಕ್ಕಾಗಿ ದೇಹವನ್ನು ಮಾರ್ಪಾಡು ಮಾಡಿಕೊಂಡಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಶ್ಮಿಕಾ ಮಂದಣ್ಣ, ಸಾಂಬಾಜಿಯ ಪತ್ನಿ ಯಶೋಭಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಔರಂಗಾಜೇಬನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಆದಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಿನಿಮಾದ ಕಾರಣಕ್ಕೆ ಔರಂಗಾಜೇಬನ ಸಮಾಧಿಯ ಸುತ್ತ ರಾಜಕೀಯವೂ ಸಹ ಮಹಾರಾಷ್ಟ್ರದಲ್ಲಿ ಶುರುವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ