‘ಛಾವಾ’ ಪ್ರಭಾವ, ಕೋಟೆ ಅಗಿದು ನಿಧಿಗಾಗಿ ಹುಡುಕಿದ ಜನ
Chhaava movie: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆ ಬಳಿಕ ಸಂಬಾಜಿ ಮಹಾರಾಜರ ಕತೆ ಪಠ್ಯ ಮಾಡುವಂತೆ ಬೇಡಿಕೆ ಹೆಚ್ಚಾಗಿದೆ. ಕೆಲವೆಡೆ ಸಂಬಾಜಿಯ ಪ್ರತಿಮೆ ಸ್ಥಾಪಿಸಲಾಗಿದೆ. ಸಾಕಷ್ಟು ಪ್ರಭಾವವನ್ನು ಈ ಸಿನಿಮಾ ಬೀರಿದೆ. ಆದರೆ ಇದೀಗ ಇದೇ ಸಿನಿಮಾದಿಂದ ಪ್ರಭಾವಿತರಾಗಿ ಕೆಲ ಜನ ಐತಿಹಾಸಿಕ ಕೋಟೆಯೊಂದರ ಮೇಲೆ ದಾಳಿ ಮಾಡಿ, ನೆಲ ಅಗೆದು ಚಿನ್ನ ಹುಡುಕುವ ಯತ್ನ ಮಾಡಿದ್ದಾರೆ.

ವಿಕ್ಕಿ ಕೌಶಲ್ (vicky kaushal), ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಈಗಾಗಲೇ ವಿಶ್ವದಾದ್ಯಂತ 700 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾದ ಕಲೆಕ್ಷನ್ ಆದಷ್ಟು ಶೀಘ್ರದಲ್ಲೇ 1000 ಕೋಟಿ ಕಲೆಕ್ಷನ್ ದಾಟುವ ಸಾಧ್ಯತೆ ಇದೆ. ‘ಛಾವಾ’ ಸಿನಿಮಾ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಮಹರಾಜ್ ಕುರಿತಾದದ್ದಾಗಿದ್ದು, ಸಿನಿಮಾ ಬಿಡುಗಡೆ ಬಳಿಕ ಸಾಂಬಾಜಿಯ ಇತಿಹಾಸವನ್ನು ಪಠ್ಯಕ್ಕೆ ಸೇರಿಸುವಂತೆ ಬೇಡಿಕೆ ಎದ್ದಿದೆ. ಕೆಲವೆಡೆ ಸಂಬಾಜಿಯ ಮೂರ್ತಿಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದೆಲ್ಲದರ ನಡುವೆ ‘ಛಾವಾ’ ಸಿನಿಮಾ ನೋಡಿ ಕೆಲ ಜನ ಕೋಟೆಗಳನ್ನು ಕೊರೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.
‘ಛಾವಾ’ ಸಿನಿಮಾನಲ್ಲಿ ಬರುವ ಕತೆ, ದೃಶ್ಯಗಳನ್ನು ನಂಬಿಕೊಂಡು ಮಧ್ಯ ಪ್ರದೇಶ ರಾಜ್ಯದ ಅಸಿರ್ಘಡ ಕೋಟೆ ಬಳಿಯ ಹಳ್ಳಿಗರು ಅಸಿರ್ಘಡ ಕೋಟೆಗೆ ಮುತ್ತಿಗೆ ಹಾಕಿ, ಕೋಟೆಯ ಸುತ್ತಲೂ ಅಗಿದು ಮೊಘಲರು ಬಚ್ಚಿಟ್ಟಿದ್ದ ಚಿನ್ನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ‘ಛಾವಾ’ ಸಿನಿಮಾನಲ್ಲಿ ಮೊಘಲರು ಲೂಟಿ ಹೊಡೆದ ಚಿನ್ನದ ಬಗ್ಗೆ ಉಲ್ಲೇಖ ಇದೆಯೆನ್ನಲಾಗುತ್ತಿದೆ. ಅಲ್ಲದೆ ಅಸಿರ್ಘಡ ಕೋಟೆಗೂ, ಮೊಘಲರ ಇತಿಹಾಸಕ್ಕೂ ಗಾಢ ಬಂಧ ಇರುವ ಕಾರಣ, ಸ್ಥಳೀಯ ಹಳ್ಳಿಗರು ಚಿನ್ನಕ್ಕಾಗಿ ಅಸಿರ್ಘಡ ಕೋಟೆಗೆ ಮುತ್ತಿಗೆ ಹಾಕಿದ್ದರು. ‘ಛಾವಾ’ ಸಿನಿಮಾದ ಕತೆ ಮಾತ್ರವೇ ಅಲ್ಲದೆ, ಸ್ಥಳೀಯ ಜನಪದ ಕತೆಗಳಲ್ಲಿಯೂ ಸಹ ಮೊಘಲರ ಚಿನ್ನದ ಬಗ್ಗೆ ಉಲ್ಲೇಖಗಳು ಇವೆ. ಹಾಗಾಗಿ ಜನ ಒಟ್ಟೊಟ್ಟಿಗೆ ತಂಡೋಪತಂಡವಾಗಿ ಕೋಟೆಗೆ ಮುತ್ತಿಗೆ ಹಾಕಿ ಚಿನ್ನದ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ:ಬಾಕ್ಸ್ ಆಫೀಸ್ ಕಲೆಕ್ಷನ್: 16 ದಿನಕ್ಕೆ ‘ಛಾವಾ’ ಗಳಿಸಿದ್ದೆಷ್ಟು?
ಜನ, ಕೊಡಲಿ, ಗಡಾರ, ಸಲಿಕೆಗಳು, ಟಾರ್ಚ್ ಲೈಟು ಇನ್ನಿತರೆಗಳನ್ನು ಹಿಡಿದುಕೊಂಡು ದೊಡ್ಡ ಸಂಖ್ಯೆಯಲ್ಲಿ ಕೋಟೆಯ ಸುತ್ತ ಅಗೆಯಲು ಆರಂಭಿಸಿದ್ದರು. ಕೆಲ ದಿನದ ಹಿಂದೆ ಈ ಕಾರ್ಯ ನಡೆದಿದ್ದು, ಸುಮಾರು ನೂರಕ್ಕೂ ಹೆಚ್ಚು ಜನ ಕೋಟೆಯ ಸುತ್ತ ಅಗಿಯಲು ಆರಂಭಿಸಿದ್ದರು. ರಾತ್ರಿ ಏಳರಿಂದ ಮಧ್ಯ ರಾತ್ರಿ 3 ಗಂಟೆ ವರೆಗೆ ಜನ ಚಿನ್ನಕ್ಕಾಗಿ ಕೋಟೆಯ ಸುತ್ತ ಹಳ್ಳಗಳನ್ನು ಅಗೆದಿದ್ದರು. ಆದರೆ ಜನ ನಿಧಿಗಾಗಿ ನೆಲ ಅಗೆಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದರು. ಪೊಲೀಸರು ಆಗಮಿಸುತ್ತಿದ್ದಂತೆ ನಿಧಿ ಅಗೆಯಲು ಬಂದಿದ್ದ ಜನ ಅಲ್ಲಿಂದ ಪರಾರಿ ಆದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಒಟ್ಟಾರೆ ‘ಛಾವಾ’ ಸಿನಿಮಾದಿಂದಾಗಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆ. ಜನ ನಿಧಿಗಾಗಿ ಕೋಟೆ ಅಗೆದರೆ ಕೆಲ ದಿನದ ಹಿಂದೆ ವ್ಯಕ್ತಿಯೊಬ್ಬ ‘ಛಾವಾ’ ಸಿನಿಮಾ ವೀಕ್ಷಿಸಲು ಕುದುರೆ ಮೇಲೆ ಸಿನಿಮಾ ಪ್ರದರ್ಶನ ಆಗುತ್ತಿದ್ದ ಹಾಲ್ಗೆ ಬಂದಿದ್ದ.
After watching bollywood film #Chhava, villagers near Asirgarh Fort in Burhanpur, (MP) launched a gold hunt after the dawn.
With flashlights & metal detectors, they’ve been digging fields, chasing rumors of Mughal-era treasure !
The gold diggers ran away when Police arrived. pic.twitter.com/LXBsugE1cG
— काश/if Kakvi (@KashifKakvi) March 7, 2025
‘ಛಾವಾ’ ಸಿನಿಮಾ, ಸಂಬಾಜಿ ಮಹಾರಾಜನ ಜೀವನದ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್, ಸಂಬಾಜಿ ಮಹಾರಾಜನ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ, ಯೆಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಔರಂಗಾಜೇಬನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶಕ ಮಾಡಿರುವುದು ಲಕ್ಷ್ಮಣ ಉಠೇಕರ್. ಸಿನಿಮಾ ಈಗಾಗಲೇ 700 ಕೋಟಿಗೂ ಹೆಚ್ಚು ಹಣ ಗಳಿಸಿದ್ದು, ಈ ವರ್ಷದ ಈ ವರೆಗಿನ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ