Netflix: ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’ ಟ್ರೈಲರ್​ಗೆ ಕನ್ನಡಿಗರು ಬಹುಪರಾಕ್; ಏನು ವಿಶೇಷ? ಇಲ್ಲಿದೆ ಮಾಹಿತಿ

| Updated By: shivaprasad.hs

Updated on: Sep 14, 2021 | 1:25 PM

Crime Stories: India Detectives: ಬೆಂಗಳೂರು ಅಪರಾಧ ಜಗತ್ತಿನ 4 ಮುಖ್ಯ ಪ್ರಕರಣಗಳನ್ನು ನೆಟ್​ಫ್ಲಿಕ್ಸ್​​ನ ಈ ಹೊಸ ಸೀರೀಸ್ ತೆರೆದಿಡಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ.

Netflix: ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’  ಟ್ರೈಲರ್​ಗೆ ಕನ್ನಡಿಗರು ಬಹುಪರಾಕ್; ಏನು ವಿಶೇಷ? ಇಲ್ಲಿದೆ ಮಾಹಿತಿ
‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’ ಸೀರೀಸ್​ನ ಪೋಸ್ಟರ್
Follow us on

ಡಾಕ್ಯುಮೆಂಟರಿ ಹಾಗೂ ವೆಬ್​ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ನೆಟ್​ಫ್ಲಿಕ್ಸ್, ಇದೀಗ ಹೊಸ ಸರಣಿಯ ಮುಖಾಂತರ ವಿಶೇಷ ಕಥಾ ವಸ್ತುವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ತಯಾರಾಗಿದೆ. ಬೆಂಗಳೂರಿನ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್​ಫ್ಲಿಕ್ಸ್ ತಯಾರಾಗಿದ್ದು, ಅದರ ಬಿಡುಗಡೆಗೂ ಮುಹೂರ್ತ ನಿಗದಿ ಮಾಡಿದೆ. ವಿಶೇಷವೆಂದರೆ, ಈ ಸೀರೀಸ್ ನೈಜ ಸಾಕ್ಷ್ಯಚಿತ್ರ ಮಾದರಿಯಲ್ಲಿರಲಿದ್ದು, ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಭಾರತದ ಮೊದಲ ನೈಜ ಘಟನೆಗಳನ್ನು ಆಧರಿಸಿದ ಕ್ರೈಮ್ ಸೀರೀಸ್ ಇದಾಗಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್’(Crime Stories: India Detectives) ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ರಿಂದ ನೆಟ್​ಫ್ಲಿಕ್ಸ್​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಈ ಸಾಕ್ಷ್ಯಚಿತ್ರವು ಬೆಂಗಳೂರಿನ ಪೊಲೀಸರು ಸಂಕೀರ್ಣ ಪ್ರಕರಣಗಳ ಹಿಂದೆ ಬಿದ್ದು, ಅವನ್ನು ಭೇಧಿಸುವುದನ್ನು ಎಳೆಎಳೆಯಾಗಿ ತೆರೆದಿಡುತ್ತದೆ. ಈ ಸರಣಿಯಲ್ಲಿ ನಾಲ್ಕು ಪ್ರಮುಖ ಪ್ರಕರಣಗಳನ್ನು ಪೊಲೀಸರು ತನಿಖೆ ಮಾಡುವುದನ್ನು ತೋರಿಸಲಾಗಿದೆ. ಸೀರೀಸ್​ನ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಭಾಷೆಯಲ್ಲಿದೆ. ಇದು ವೀಕ್ಷಕರ ಸಂತಸಕ್ಕೆ ಕಾರಣವಾಗಿದ್ದು, ನೋಡುಗರಿಗೆ ಆಸಕ್ತಿ ಮೂಡಿಸುವಂತಿದೆ.

ಸೀರೀಸ್​ನ ಟ್ರೈಲರ್ ಇಲ್ಲಿದೆ:

ನೆಟ್​ಫ್ಲಿಕ್ಸ್ ಭಾರತದ ವೀಕ್ಷಕರಿಗೆ ಸೀರೀಸ್​ಗಳನ್ನು ಹೆಚ್ಚಾಗಿ ತಯಾರಿಸುತ್ತಿಲ್ಲ ಎಂಬ ಕೊರಗಿತ್ತು. ಇಂತಹ ಹಿಒಸ ಪ್ರಯತ್ನಗಳ ಮುಖಾಂತರ ನೆಟ್​ಫ್ಲಿಕ್ಸ್ ಆ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ನಡೆಸಿದೆ. ಅಷ್ಟೇ ಅಲ್ಲದೇ ಭಾರತದ ಮಟ್ಟಿಗೆ ನೈಜ ಸಾಕ್ಷ್ಯಚಿತ್ರ ಮಾದರಿಯಲ್ಲಿ ಸೀರೀಸ್ ಹೊರತರುತ್ತಿದ್ದು, ಇದು ದೃಶ್ಯಮಾಧ್ಯಮದಲ್ಲಿ ಇನ್ನಷ್ಟು ಪ್ರಯೋಗಗಳಿಗೆ ಮುನ್ನುಡಿ ಬರೆಯಲಿದೆ ಎಂದು ಸಿನಿ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ನೆಟ್​ಫ್ಲಿಕ್ಸ್ ಹಂಚಿಕೊಂಡಿರುವ ಟ್ವೀಟ್:

ಚಿತ್ರದ ಟ್ರೈಲರ್ ಇಂದು (ಸೆಪ್ಟೆಂಬರ್ 14) ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತ ಮೂಲದ ಡಾಕ್ಯುಮೆಂಟರಿಗಳಿಗೆ ಒಳ್ಳೆಯ ವಿಷಯ ವಸ್ತುಗಳಿದ್ದು, ನೆಟ್​ಫ್ಲಿಕ್ಸ್​ನ ಈ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಲವರು ಹಾರೈಸಿದ್ದಾರೆ. ಕನ್ನಡಿಗರು ನೆಟ್​ಫ್ಲಿಕ್ಸ್​ನ ಈ ಸೀರೀಸ್ ತಮ್ಮದೇ ಭಾಷೆಯಲ್ಲಿ ಬರುತ್ತಿರುವುದಕ್ಕೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದು, ಬೆಂಗಳೂರು ಪೊಲೀಸರ ಚಾಣಾಕ್ಷತೆಯನ್ನು ದೇಶ ನೋಡುವ ಸಮಯ ಬಂದಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರೀಸ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದ್ದು, ಇದೇ ತಿಂಗಳ 22ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:

ನೆಟ್​ಫ್ಲಿಕ್ಸ್​, ಪ್ರೈಮ್​ ಬಳಕೆದಾರರಿಗೆ ಸಿಹಿ ಸುದ್ದಿ; ಮುಂದಿನ ತಿಂಗಳಿಂದ ಬರ್ತಿದೆ ಹೊಸ ನಿಯಮ

Raana: ಸ್ಯಾಂಡಲ್​ವುಡ್​ಗೆ ‘ರಾಣ’ ಅದ್ದೂರಿ ಎಂಟ್ರಿ, ಟೀಸರ್ ಬಿಡುಗಡೆಗೊಳಿಸಿದ ಉಪೇಂದ್ರ

ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್​ ಡಿಮ್ಯಾಂಡ್​​

(Crime Stories India detectives will release on September 22 on Netflix and trailer got special reactions from Karnataka)