ನೆಟ್ಫ್ಲಿಕ್ಸ್, ಪ್ರೈಮ್ ಬಳಕೆದಾರರಿಗೆ ಸಿಹಿ ಸುದ್ದಿ; ಮುಂದಿನ ತಿಂಗಳಿಂದ ಬರ್ತಿದೆ ಹೊಸ ನಿಯಮ
ನೆಟ್ಫ್ಲಿಕ್ಸ್ ಹಾಗೂ ಮೊದಲಾದ ಪ್ಲಾಟ್ಫಾರ್ಮ್ಗಳ ಸಬ್ಸ್ಕ್ರಿಪ್ಶನ್ ಪಡೆಯುವಾಗ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ. ಇದರಲ್ಲಿ ಆಟೋ ಪೇಮೆಂಟ್ ಆಯ್ಕೆ ಕೂಡ ಇದೆ.
ನೀವು ನೆಟ್ಫ್ಲಿಕ್ಸ್, ಹಾಟ್ಸ್ಟಾರ್, ಅಮೇಜಾನ್ ಪ್ರೈಮ್ ಮೊದಲಾದ ಒಟಿಟಿ ಪ್ಲಾಟ್ಫಾರ್ಮ್ಗಳನ್ನು ಬಳಕೆ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಸಿಹಿ ಸುದ್ದಿ ಇದೆ. ಆರ್ಬಿಐ ಮುಂದಿನ ತಿಂಗಳಿಂದ ಹೊಸ ನಿಯಮ ಜಾರಿಗೆ ತರುತ್ತಿದೆ. ಇದರಿಂದ ಗ್ರಾಹಕರಿಗೆ ಒಂದಷ್ಟು ಲಾಭಗಳು ಸಿಗಲಿವೆ.
ನೆಟ್ಫ್ಲಿಕ್ಸ್ ಹಾಗೂ ಮೊದಲಾದ ಪ್ಲಾಟ್ಫಾರ್ಮ್ಗಳ ಸಬ್ಸ್ಕ್ರಿಪ್ಶನ್ ಪಡೆಯುವಾಗ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ. ಇದರಲ್ಲಿ ಆಟೋ ಪೇಮೆಂಟ್ ಆಯ್ಕೆ ಕೂಡ ಇದೆ. ಅಂದರೆ, ನಿಮ್ಮ ಸಬ್ಸ್ಕ್ರಿಪ್ಶನ್ ಅವಧಿ ಮುಗಿದ ಕೂಡಲೇ ಬ್ಯಾಂಕ್ನಿಂದ ಸ್ವಯಂಚಾಲಿತವಾಗಿ ಹಣ ಕಟ್ ಆಗುತ್ತದೆ ಮತ್ತು ನಿಮ್ಮ ಸಬ್ಸ್ಕ್ರಿಪ್ಶನ್ ಅವಧಿ ಮುಂದುವರಿಯುತ್ತದೆ. ಇದರಿಂದ ಗ್ರಾಹಕರಿಗೆ ತೊಂದರೆ ಕೂಡ ಇದೆ.
ಉದಾಹರಣೆಗೆ ನಿಮಗೆ ನೆಟ್ಫ್ಲಿಕ್ಸ್ನಲ್ಲಿ ಮುಂದುವರಿಯೋಕೆ ಇಷ್ಟವಿಲ್ಲ. ಆದರೆ, ಆಟೋ ಪೇಮೆಂಟ್ನಿಂದ ಹಣ ಕಟ್ ಆಗಿ, ನಿಮ್ಮ ಸಬ್ಸ್ಕ್ರಿಪ್ಶನ್ ಅವಧಿ ಮುಂದುವರಿಯುತ್ತದೆ. ಇದರಿಂದ ಅನೇಕ ಗ್ರಾಹಕರು ಅಸಮಾಧಾನ ಹೊರ ಹಾಕಿದ ಉದಾಹರಣೆ ಇದೆ. ಆದರೆ, ಇನ್ನುಮುಂದೆ ಈ ಆಯ್ಕೆ ಇರುವುದಿಲ್ಲ.
ಬ್ಯಾಂಕಿಗ್ ವ್ಯವಸ್ಥೆಯಲ್ಲಿ ಭದ್ರತೆಗೆ ಹೆಚ್ಚು ಆದ್ಯತೆ ನೀಡಲು ಆರ್ಬಿಐ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಆರ್ಬಿಐ ಮಾರ್ಚ್ 2021ರಲ್ಲಿ ಆದೇಶವೊಂದನ್ನು ಹೊರಡಿಸಿತ್ತು. ಇದರ ಪ್ರಕಾರ ಆಟೋ ಪೇಮೆಂಟ್ ಸೇರಿ ಸಾಕಷ್ಟು ಆಯ್ಕೆಗಳಿಗೆ ಬ್ರೇಕ್ ಹಾಕುವುದಾಗಿ ತಿಳಿಸಿತ್ತು. ಇದಕ್ಕೆ ಆರು ತಿಂಗಳು ಗಡವು ಕೂಡ ನೀಡಲಾಗಿತ್ತು. ಈ ಗಡವು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳಿಂದ ಹೊಸ ನಿಯಮ ಜಾರಿಗೆ ಬರಲಿದೆ.
‘ಫ್ರಾಡ್ಗಳನ್ನು ತಡೆಯುವುದು, ಗ್ರಾಹಕರ ಹಿತಾಸಕ್ತಿ ಕಾಯುವುದು ಹೊಸ ನಿಯಮದ ಉದ್ದೇಶ. ಒಂದೊಮ್ಮೆ ಈ ರೀತಿ ಸ್ವಯಂಚಾಲಿತವಾಗಿ ಬಿಲ್ ಪೇ ಆಗುತ್ತದೆ ಎಂದರೆ 24 ಗಂಟೆ ಮೊದಲು ಗ್ರಾಹಕರಿಗೆ ಮಾಹಿತಿ ನೀಡಬೇಕು. ಈ ಅವಧಿಯಲ್ಲಿ ಆಟೋಪೇಮೆಂಟ್ ಆಯ್ಕೆಯಿಂದ ಹೊರಬರಲು ಗ್ರಾಹಕರಿಗೆ ಅವಕಾಶವಿದೆ. 5,000 ರೂಪಾಯಿಗಿಂತ ಹೆಚ್ಚಿನ ಹಣ ಆಟೋಪೇಮೆಂಟ್ ಇದ್ದರೆ ಒಟಿಪಿ ನೀಡೋದು ಕಡ್ಡಾಯವಾಗಿದೆ ’ ಎಂದು ಆರ್ಬಿಐ ತಿಳಿಸಿದೆ. ಹೊಸ ನಿಯಮದಿಂದ ಗ್ರಾಹಕರಿಗೆ ಸಾಕಷ್ಟು ಸಹಕಾರಿ ಆಗಲಿದೆ.
ಇದನ್ನೂ ಓದಿ: Money Heist 5: ‘ಮನಿ ಹೈಸ್ಟ್ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್: ನಾಯಿ ಜೊತೆಗಿನ ವಿಡಿಯೋ ವೈರಲ್
Money Heist 5: ಉದ್ಯೋಗಿಗಳಿಗೆ ನೆಟ್ಫ್ಲಿಕ್ಸ್ ಸಬ್ಸ್ಕ್ರಿಪ್ಶನ್ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ