‘ಕುಬೇರ’ ಸಿನಿಮಾ ನಿರ್ಮಾಪಕರಿಗೆ ಅಮೆಜಾನ್ ಪ್ರೈಂ ಬೆದರಿಕೆ?

Kubera movie: ಧನುಶ್ ನಟನೆಯ ‘ಕುಬೇರ’ ಸಿನಿಮಾ ಇದೇ ತಿಂಗಳು 20ನೇ ತಾರೀಖು ಬಿಡುಗಡೆ ಆಗುವುದಾಗಿ ಈಗಾಗಲೇ ಘೋಷಣೆ ಆಗಿದೆ. ಆದರೆ ಈ ತಿಂಗಳು ಬಿಡುಗಡೆ ಆಗಬೇಕಿದ್ದ ಇತರೆ ಸಿನಿಮಾಗಳ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಧನುಶ್ ಸಿನಿಮಾ ಸಹ ಬಿಡುಗಡೆ ಮುಂದಕ್ಕೆ ಹಾಕಿಕೊಳ್ಳುವ ಯೋಜನೆಯಲ್ಲಿದ್ದಾರೆ ನಿರ್ಮಾಪಕರು. ಆದರೆ ಇದೇ ವಿಷಯವಾಗಿ ನಿರ್ಮಾಪಕರಿಗೆ ಅಮೆಜಾನ್ ಪ್ರೈಂ ಬೆದರಿಕೆ ಹಾಕಿದೆ ಎನ್ನಲಾಗುತ್ತಿದೆ.

‘ಕುಬೇರ’ ಸಿನಿಮಾ ನಿರ್ಮಾಪಕರಿಗೆ ಅಮೆಜಾನ್ ಪ್ರೈಂ ಬೆದರಿಕೆ?
Kubera Movie

Updated on: Jun 10, 2025 | 10:55 AM

ತೆಲುಗು ಚಿತ್ರರಂಗದಲ್ಲಿ (Tollywood) ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈ ತಿಂಗಳಲ್ಲಿ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ. ಅದರ ಜೊತೆಗೆ ಆಂಧ್ರ-ತೆಲಂಗಾಣದ ಚಿತ್ರಮಂದಿರ ಮಾಲೀಕರ ಪ್ರತಿಭಟನೆ ವಿಷಯ ಪೂರ್ಣವಾಗಿ ತಣ್ಣಗಾಗಿಲ್ಲ. ದೊಡ್ಡ ಬಜೆಟ್​ ಸಿನಿಮಾಗಳು ಬರುತ್ತಿರುವ ಕಾರಣ ಸಿನಿಮಾ ಬಿಡುಗಡೆ ದಿನಾಂಕದ ಗೊಂದಲವೂ ದೊಡ್ಡದಾಗಿದೆ. ‘ಹರಿ ಹರ ವೀರ ಮಲ್ಲು’ ಸಿನಿಮಾ ಈಗಾಗಲೇ ಬಿಡುಗಡೆ ಮುಂದೂಡಿದೆ. ಅದರ ಬೆನ್ನಲ್ಲೆ ವಿಜಯ್ ದೇವರಕೊಂಡ ನಟನೆಯ ‘ಕಿಂಗ್​ಡಮ್’ ಸಿನಿಮಾದ ಬಿಡುಗಡೆಯೂ ಮುಂದೂಡಲ್ಪಟ್ಟಿದೆ. ಇದೀಗ ಧನುಶ್ ನಟನೆಯ ‘ಕುಬೇರ’ ಸಿನಿಮಾದ ಬಿಡುಗಡೆ ಬಗ್ಗೆಯೂ ಗೊಂದಲ ಮೂಡಿದೆ. ಅದರ ಬೆನ್ನಲ್ಲೆ ಅಮೆಜಾನ್ ಪ್ರೈಂ ‘ಕುಬೇರ’ ಸಿನಿಮಾದ ನಿರ್ಮಾಪಕರಿಗೆ ಅಮೆಜಾನ್ ಪ್ರೈಂ ಬೆದರಿಕೆ ಒಡ್ಡಿದೆ ಎನ್ನಲಾಗುತ್ತಿದೆ.

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ, ಜಿಮ್ ಸರ್ಬ್ ಇನ್ನೂ ಕೆಲವರು ಪ್ರಮುಖ ನಟರು ನಟಿಸಿರುವ ‘ಕುಬೇರ’ ಸಿನಿಮಾವನ್ನು ತೆಲುಗಿನ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಇದು ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾ ಜುಲೈ 20 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲು ನಿರ್ಮಾಪಕರು ಆಲೋಚನೆ ಮಾಡಿದ್ದಾರೆ. ಆದರೆ ಇದು ಅಮೆಜಾನ್ ಪ್ರೈಂಗೆ ಇಷ್ಟವಾಗಿಲ್ಲ.

ಇದನ್ನೂ ಓದಿ:‘ಕುಬೇರ’ ಟೀಸರ್: ಪಕ್ಕಾ ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ; ಗ್ಲಾಮರ್ ಮಾಯ

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ‘ಕುಬೇರ’ ಸಿನಿಮಾ ನಿರ್ಮಾಪಕ ಸುನಿಲ್ ನಾರಂಗ್, ‘ನಾವು ಸಿನಿಮಾದ ಬಿಡುಗಡೆಯನ್ನು ಮುಂದೂಡುವ ಬಗ್ಗೆ ಯೋಚನೆ ಮಾಡಿದ್ದೆವು. ಆದರೆ ಅಮೆಜಾನ್ ಪ್ರೈಂ ನಮ್ಮ ಮೇಲೆ ಒತ್ತಡ ಹೇರುತ್ತಿದ್ದು, ಈ ಹಿಂದೆ ಘೋಷಣೆ ಮಾಡಿದ್ದಂತೆ ಜೂನ್ 20ಕ್ಕೆ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿದೆ’ ಎಂದಿದ್ದಾರೆ.

‘ನಾವು ಸಿನಿಮಾದ ಬಿಡುಗಡೆಯನ್ನು ತಡ ಮಾಡಿದರೆ ಈಗ ಮಾಡಿಕೊಂಡಿರುವ ಒಪ್ಪಂದಕ್ಕಿಂತಲೂ 10 ಕೋಟಿ ರೂಪಾಯಿ ಕಡಿಮೆ ಮೊತ್ತವನ್ನು ಪಾವತಿಸುತ್ತೇವೆ’ ಎಂದು ಅಮೆಜಾನ್ ಬೆದರಿಕೆ ಹಾಕುತ್ತಿದೆ’ ಎಂದಿದ್ದಾರೆ. ಡಿಜಿಟಲ್ ಹಕ್ಕುಗಳನ್ನು ನಾವು ಅಮೆಜಾನ್ ಪ್ರೈಂಗೆ ಮಾರಾಟ ಮಾಡಿದ್ದಾಗಿದೆ. ಈಗ ನಾವು ಏನೂ ಮಾಡದ ಪರಿಸ್ಥಿತಿಯಲ್ಲಿದ್ದೇವೆ. ನಾನು ಪ್ರೈಂ ಅವರ ಬಳಿ ಈ ಬಗ್ಗೆ ಮನವಿ ಮಾಡಿಕೊಂಡೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ತಡವಾಗಿದೆ ಕೆಲವು ವಾರಗಳ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದೆ. ಆದರೆ ಅದಕ್ಕೆ ಅವರು ಒಪ್ಪಿಲ್ಲ’ ಎಂದಿದ್ದಾರೆ.

ಈಗ ಜೂನ್ 10ಕ್ಕೆ ‘ಕುಬೇರ’ ಸಿನಿಮಾ ಅನ್ನು ಚಿತ್ರಮಂದಿರಗಳಿಗೆ ಬಿಡುಗಡೆ ಮಾಡದೇ ಇದ್ದಲ್ಲಿ, 10 ಕೋಟಿ ರೂಪಾಯಿ ಹಣವನ್ನು ನಿರ್ಮಾಪಕರು ಕಳೆದುಕೊಳ್ಳಲಿದ್ದಾರೆ. ಇದು ನಿರ್ಮಾಪಕರಿಗೆ ದೊಡ್ಡ ಹೊಡೆತವೇ ಆಗಿದೆ. ಈ ತಿಂಗಳು ಬಿಡುಗಡೆ ಆಗಬೇಕಿದ್ದ ಮೂರು ತೆಲುಗು ಸಿನಿಮಾಗಳು ಸಹ ಒಂದರ ಹಿಂದೊಂದರಂತೆ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿವೆ. ಆದರೆ ಆಗಸ್ಟ್ ತಿಂಗಳಲ್ಲೂ ಸಹ ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು, ಚಿತ್ರಮಂದಿರಗಳ ಸಮಸ್ಯೆ ತೆಲುಗು ಚಿತ್ರರಂಗವನ್ನು ಕಾಡುವುದು ಪಕ್ಕಾ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ