ನಟ ಇಮ್ರಾನ್ ಹಷ್ಮಿ ಮತ್ತು ನಟಿ ಮೌನಿ ರಾಯ್ (Mouni Roy) ಶೀಘ್ರದಲ್ಲೇ ‘ಶೋಟೈಮ್’ ಸೀರಿಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಶೋಟೈಮ್’ ವೆಬ್ ಸರಣಿಯ ಮೂಲಕ ಅಭಿಮಾನಿಗಳು ಮತ್ತೆ ಇಮ್ರಾನ್ ಹಷ್ಮಿ ಅವರ ಸೀರಿಯಲ್ ಕಿಸ್ಸರ್ ಅವತಾರ ನೋಡಲಿದ್ದಾರೆ. ಇದರ ಒಂದು ದೃಶ್ಯ ವೈರಲ್ ಆಗಿದೆ. ಈ ಸರಣಿಯಲ್ಲಿ ನಟಿ ಮೌನಿ ರಾಯ್ ಅವರನ್ನು ಇಮ್ರಾನ್ ಚುಂಬಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಕೆಲ ದಿನಗಳ ಹಿಂದೆ ‘ಶೋಟೈಮ್’ ಸೀರಿಸ್ನ ಟ್ರೈಲರ್ ಬಿಡುಗಡೆಯಾಗಿದೆ. ಈ ಸರಣಿಯು ಬಾಲಿವುಡ್‌ನ ಕರಾಳ ರಹಸ್ಯಗಳನ್ನು ಆಧರಿಸಿದೆ ಎನ್ನಲಾಗಿದೆ. ತೆರೆಮರೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬಂತಹ ಹಲವು ಸಂಗತಿಗಳನ್ನು ‘ಶೋಟೈಮ್’ ಸೀರಿಸ್ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಬಾಲಿವುಡ್ ತುಂಬಾ ಕರಾಳವಾಗಿದೆ ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿದೆ ಈ ಸೀರಿಸ್.
‘ಶೋಟೈಮ್ ಸೀರಿಸ್ನಲ್ಲಿ ಮೌನಿ ರಾಯ್ ಮತ್ತು ಇಮ್ರಾನ್ ಅವರ ಚುಂಬನದ ದೃಶ್ಯದ ಬಗ್ಗೆ ಚರ್ಚೆ ಆಗುತ್ತಿದೆ. ಈ ಸರಣಿಯಲ್ಲಿ ಮೌನಿ ಅವರು ಯಾಸ್ಮಿನ್ ಅಲಿ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಅಭಿಮಾನಿಗಳು ಕೂಡ ಈ ವಿಡಿಯೋಗೆ ಲೈಕ್ಸ್, ಕಮೆಂಟ್ಸ್ ಸುರಿಸುತ್ತಿದ್ದಾರೆ.
ಇಮ್ರಾನ್, ಮೌನಿ ಜೊತೆ ಮಹಿಮಾ ಮಕ್ವಾನಾ, ರಾಜೀವ್ ಖಂಡೇಲ್ವಾಲ್, ಶ್ರಿಯಾ ಶರನ್, ವಿಶಾಲ್ ವಶಿಷ್ಠ, ನೀರಜ್ ಮಾಧವ್, ವಿಜಯ್ ರಾಜ್ ಮತ್ತು ನಾಸಿರುದ್ದೀನ್ ಶಾ ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಣಿಯ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
Emraan Hashmi is back with the kiss 😍❤️🔥 #Showtime streaming this friday, 8th march only on Disney+ Hotstar 🎬@emraanhashmi #EmraanHashmi #RajeevKhandelwal #ShriyaSaran #MouniRoy #MahimaMakwana #Dharmatic #KaranJohar #MihirDesai #SonyMusicIndia #bollywood pic.twitter.com/X59fGDhOVA
— Emraan (@page_emraan) March 4, 2024
‘ಶೋಟೈಮ್’ ವೆಬ್ ಸರಣಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಈ ಸರಣಿಯನ್ನು ಮಾರ್ಚ್ 8 ರಿಂದ ವೀಕ್ಷಣೆ ಮಾಡಬಹದು. ಈ ಸರಣಿಯನ್ನು ಮಿಹಿರ್ ದೇಸಾಯಿ ಮತ್ತು ಅರ್ಚಿತ್ ಕುಮಾರ್ ನಿರ್ದೇಶಿಸಿದ್ದಾರೆ. ಅಭಿಮಾನಿಗಳು ಕೂಡ ಈ ಸರಣಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಮೊದಲ ಸಿನಿಮಾದಿಂದ ಕಿತ್ತುಹಾಕ್ತೀನಿ’: ಇಮ್ರಾನ್ ಹಷ್ಮಿಗೆ ವಾರ್ನಿಂಗ್ ನೀಡಿದ್ದ ಮಹೇಶ್ ಭಟ್
ಇಮ್ರಾನ್ ಹಲವು ವರ್ಷಗಳಿಂದ ಬಾಲಿವುಡ್‌ನಿಂದ ದೂರವಿದ್ದರು. ಮೊದಲು ಸೀರಿಯಲ್ ಕಿಸ್ಸಿಂಗ್ ಪಾತ್ರದ ಮೂಲಕ ಗಮನ ಸೆಳೆದ ಅವರು ಇತ್ತೀಚೆಗೆ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈಗ ಅವರು ಮತ್ತೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇಮ್ರಾನ್ ಹಷ್ಮಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಾಗಿದೆ. ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹಳೆಯ ಅವತಾರದಲ್ಲಿ ಕಾಣಿಸಿಕೊಳ್ಳಲೂ ಇಷ್ಟಪಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ