AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೊದಲ ಸಿನಿಮಾದಿಂದ ಕಿತ್ತುಹಾಕ್ತೀನಿ’: ಇಮ್ರಾನ್​ ಹಷ್ಮಿಗೆ ವಾರ್ನಿಂಗ್​ ನೀಡಿದ್ದ ಮಹೇಶ್​ ಭಟ್​

ಇಮ್ರಾನ್​ ಹಷ್ಮಿ ನಟನೆಯ ‘ಶೋಟೈಮ್​’ ವೆಬ್​ ಸಿರೀಸ್​ ಬಿಡುಗಡೆಗೆ ಸಿದ್ಧವಾಗಿದೆ. ಈ ಪ್ರಯುಕ್ತ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ತಮ್ಮ ಆರಂಭದ ದಿನಗಳು ಹೇಗಿತ್ತು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ. ಮೊದಲ ಸಿನಿಮಾದಲ್ಲಿ ಮಹೇಶ್​ ಭಟ್​ ನೀಡಿದ್ದ ಎಚ್ಚರಿಕೆಯ ಬಗ್ಗೆ ಇಮ್ರಾನ್​ ಹಷ್ಮಿ ಅವರು ಈಗ ಮಾತನಾಡಿದ್ದಾರೆ.

‘ಮೊದಲ ಸಿನಿಮಾದಿಂದ ಕಿತ್ತುಹಾಕ್ತೀನಿ’: ಇಮ್ರಾನ್​ ಹಷ್ಮಿಗೆ ವಾರ್ನಿಂಗ್​ ನೀಡಿದ್ದ ಮಹೇಶ್​ ಭಟ್​
ಮಹೇಶ್​ ಭಟ್​, ಇಮ್ರಾನ್​ ಹಷ್ಮಿ
ಮದನ್​ ಕುಮಾರ್​
|

Updated on: Feb 28, 2024 | 3:49 PM

Share

ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್​ ಭಟ್​ ಮೇಲೆ ಇರುವ ಆರೋಪಗಳು ಒಂದೆರಡಲ್ಲ. ಬಾಲಿವುಡ್ (Bollywood) ಮೂವೀ​ ಮಾಫಿಯಾದಲ್ಲಿ ಅವರ ಕೈವಾಡ ಇದೆ ಎಂದು ಹಲವರು ದೂರುತ್ತಾರೆ. ನೆಪೋಟಿಸಂ ಪೋಷಿಸುತ್ತಾರೆ ಎಂಬ ಆರೋಪ ಕೂಡ ಮಹೇಶ್​ ಭಟ್​ ಮೇಲಿದೆ. ಇಮ್ರಾನ್​ ಹಷ್ಮಿ (Emraan Hashmi) ಅವರಿಗೆ ಅವಕಾಶ ನೀಡಿದ್ದು ಕೂಡ ಮಹೇಶ್​ ಭಟ್​. ಅಚ್ಚರಿಯ ವಿಚಾರವೊಂದನ್ನು ಈಗ ಇಮ್ರಾನ್​ ಹಷ್ಮಿ ಅವರು ತೆರೆದಿಟ್ಟಿದ್ದಾರೆ. ಮೊದಲ ಸಿನಿಮಾದಿಂದ ಕಿತ್ತು ಹಾಕುವುದಾಗಿ ಇಮ್ರಾನ್​ ಹಷ್ಮಿಗೆ ಮಹೇಶ್​ ಭಟ್​ (Mahesh Bhatt) ಎಚ್ಚರಿಕೆ ನೀಡಿದ್ದರು. ಆ ಘಟನೆಯನ್ನು ಇಮ್ರಾನ್​ ಹಷ್ಮಿ ಈಗ ನೆನಪಿಸಿಕೊಂಡಿದ್ದಾರೆ.

ಇಮ್ರಾನ್​ ಹಷ್ಮಿ ಮತ್ತು ಮಹೇಶ್ ಭಟ್​ ಅವರು ಹತ್ತಿರದ ಸಂಬಂಧಿಗಳು. ಆ ಕಾರಣಕ್ಕಾಗಿ ‘ಫುಟ್​ಪಾತ್​’ ಸಿನಿಮಾದಲ್ಲಿ ಇಮ್ರಾನ್​ ಹಷ್ಮಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಸರಿಯಾಗಿ ನಟನೆ ಮಾಡದಿದ್ದರೆ ಖಂಡಿತಯಾಗಿಯೂ ಸಿನಿಮಾದಿಂದ ಕಿತ್ತು ಹಾಕುವುದಾಗಿ ಮಹೇಶ್​ ಭಟ್​ ವಾರ್ನಿಂಗ್​ ನೀಡಿದ್ದರು. ಅದರ ಪರಿಣಾಮದಿಂದಲೇ ತಾವು ಚೆನ್ನಾಗಿ ನಟಿಸಲು ಸಾಧ್ಯವಾಯ್ತು ಎಂದು ಇಮ್ರಾನ್​ ಹಷ್ಮಿ ಹೇಳಿದ್ದಾರೆ.

‘ಜನರು ನಿನ್ನನ್ನು ಇಷ್ಟಪಡಲಿಲ್ಲ ಎಂದರೆ, ನೀನು ಒಳ್ಳೆಯ ನಟ ಅಲ್ಲ ಎಂದರೆ ನಿನ್ನ ಮೇಲೆ ನಾವು ಹಣ ಹಾಕಲು ಸಾಧ್ಯವಿಲ್ಲ. ನಾವು ಇಲ್ಲಿ ಧರ್ಮ ಛತ್ರ ನಡೆಸುತ್ತಿಲ್ಲ’ ಎಂದು ಮಹೇಶ್​ ಭಟ್​ ಅವರು ಇಮ್ರಾನ್​ ಹಷ್ಮಿಗೆ ಖಡಕ್​ ಆಗಿ ಹೇಳಿದ್ದರು. ‘ನಾವು ಒಂದೇ ಕುಟುಂಬದವರು ಆಗಿರಬಹುದು. ಆದರೆ ಇದಕ್ಕಿಂತ ಜಾಸ್ತಿ ನಾವು ಏನೂ ಮಾಡೋಕೆ ಆಗಲಿಲ್ಲ. ಯಾಕೆಂದರೆ ಇದು ಬಿಸ್ನೆಸ್​’ ಎಂದು ಅವರು ಹೇಳಿದ್ದನ್ನು ಇಮ್ರಾನ್​ ಹಷ್ಮಿ ಈಗ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಸ್ಟಾರ್​ ನಟಿಯರಿಗೆ ಕಿಸ್​ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್​ ಹಷ್ಮಿ! ತಪ್ಪು ಒಪ್ಪಿಕೊಂಡ ನಟ

‘ನೀನು ಮೊದಲ ಶಾಟ್​ನಲ್ಲೇ ಚೆನ್ನಾಗಿ ಮಾಡದಿದ್ದರೆ ಅಥವಾ ಮುಂದಿನ ದೃಶ್ಯಗಳಲ್ಲಿ ಸರಿಯಾಗಿ ನಟಿಸದಿದ್ದರೆ ನಿನ್ನನ್ನು ಸಿನಿಮಾದಿಂದ ಕಿತ್ತು ಹಾಕುತ್ತೇವೆ’ ಎಂದು ಮಹೇಶ್​ ಭಟ್​ ಅವರು ಎಚ್ಚರಿಕೆ ನೀಡಿದ್ದರು. ‘ಫುಟ್​ಪಾತ್​’ ಸಿನಿಮಾ 2003ರಲ್ಲಿ ತೆರೆಕಂಡಿತು. ಮರುವರ್ಷ ಬಂದ ‘ಮರ್ಡರ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಸಿನಿಮಾದಿಂದ ಇಮ್ರಾನ್​ ಹಷ್ಮಿ ಅವರು ಮನೆಮಾತಾದರು. ತಮ್ಮದೇ ರೀತಿಯಲ್ಲಿ ಅವರು ಗುರುತಿಸಿಕೊಂಡರು. ಬೋಲ್ಡ್ ಪಾತ್ರಗಳನ್ನು ಮಾಡುವ ಮೂಲಕ ಇಮ್ರಾನ್​ ಹಷ್ಮಿ ಅವರು ಭಾರಿ ಪ್ರಸಿದ್ಧಿ ಪಡೆದರು. ಬಾಲಿವುಡ್​ನಲ್ಲಿ ಅವರು ಸ್ಟಾರ್​ ಆಗಿ ಬೆಳೆದರು. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡರು. ಹೀರೋ ಮಾತ್ರವಲ್ಲದೇ ವಿಲನ್​ ಪಾತ್ರಗಳನ್ನೂ ಇಮ್ರಾನ್​ ಹಷ್ಮಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?