ಸ್ಥಿರವಾಗಿದೆ ‘ಆರ್ಟಿಕಲ್ 370’ ಸಿನಿಮಾ ಕಲೆಕ್ಷನ್; 2ನೇ ವೀಕೆಂಡ್ನಲ್ಲಿ ನಡೆಯುತ್ತಾ ಮ್ಯಾಜಿಕ್?
‘ಆರ್ಟಿಕಲ್ 370’ ಸಿನಿಮಾ ಹಾಫ್ ಸೆಂಚುರಿ ಬಾರಿಸುವತ್ತ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ಈ ಚಿತ್ರ 50 ಕೋಟಿ ರೂಪಾಯಿ ಗಡಿ ಮುಟ್ಟಬಹುದು ಎಂದು ಊಹಿಸಲಾಗುತ್ತಿದೆ. ಯಾಮಿ ಗೌತಮ್, ಪ್ರಿಯಾಮಣಿ ಮುಂತಾದವರು ನಟಿಸಿರುವ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ನೈಜ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ.
ಫೆಬ್ರವರಿ 23ರಂದು ಬಿಡುಗಡೆ ಆದ ‘ಆರ್ಟಿಕಲ್ 370’ (Article 370) ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾದಲ್ಲಿ ನಟಿ ಯಾಮಿ ಗೌತಮ್ (Yami Gautam) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರಿಯಾಮಣಿ ಅವರಿಗೂ ಒಂದು ಮುಖ್ಯವಾದ ಪಾತ್ರವಿದೆ. ಆದಿತ್ಯ ಸುಹಾನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ದೊಡ್ಡ ಸ್ಟಾರ್ ನಟರು ಇಲ್ಲದಿದ್ದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುವಲ್ಲಿ ‘ಆರ್ಟಿಕಲ್ 370’ ಯಶಸ್ವಿ ಆಗಿದೆ. 5 ದಿನಕ್ಕೆ ಈ ಸಿನಿಮಾ ಎಷ್ಟು ಕಲೆಕ್ಷನ್ (Article 370 Box Office Collection) ಮಾಡಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..
ಈ ಸಿನಿಮಾ ಮಾಡುವಾಗ ನಟಿ ಯಾಮಿ ಗೌತಮ್ ಮತ್ತು ಅವರ ತಂಡದವರಿಗೆ ಕೊಂಚ ಅನುಮಾನ ಇತ್ತು. ಯಾಕೆಂದರೆ, ರಾಜಕೀಯ ವಿಷಯ ಮತ್ತು ಟೆಕ್ನಿಕಲ್ ಅಂಶಗಳಿಂದ ತುಂಬಿರುವ ಈ ಸಿನಿಮಾವನ್ನು ಜನರು ಇಷ್ಟಪಡುವುದಿಲ್ಲ ಎಂದು ಕೆಲವರು ಅಪಸ್ವರ ಎತ್ತಿದ್ದರು. ಆದರೆ ಅದನ್ನು ಕಡೆಗಣಿಸಿ ಚಿತ್ರತಂಡದವರು ಸಿನಿಮಾ ನಿರ್ಮಾಣ ಮಾಡಿದರು. ತಂಡದ ನಂಬಿಕೆಯಂತೆಯೇ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗಿದೆ. 5 ದಿನಕ್ಕೆ ‘ಆರ್ಟಿಕಲ್ 370’ ಚಿತ್ರದ ಒಟ್ಟು ಕಲೆಕ್ಷನ್ 32.60 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ಆರ್ಟಿಕಲ್ 370’ ಪ್ರೊಪಗಾಂಡಾ ಸಿನಿಮಾ ಎಂದವರಿಗೆ ಪ್ರಿಯಾಮಣಿ ಉತ್ತರ
‘ಆರ್ಟಿಕಲ್ 370’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ 6.12 ಕೋಟಿ ರೂಪಾಯಿ ಗಳಿಸಿತು. 2ನೇ ದಿನ 9.08 ಕೋಟಿ ರೂಪಾಯಿ ಬಾಚಿಕೊಂಡಿತು. 3ನೇ ದಿನ 10.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 4ನೇ ದಿನ 3.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 5ನೇ ದಿನ ಕೂಡ ಅದೇ ಮಟ್ಟವನ್ನು ಕಾಯ್ದುಕೊಂಡಿದೆ. ಅಂದರೆ, 5ನೇ ದಿನವಾದ ಫೆಬ್ರವರಿ 27ರಂದು ಈ ಸಿನಿಮಾಗೆ 3.55 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಸಿನಿಮಾದಲ್ಲಿ ನರೇಂದ್ರ ಮೋದಿಯ ಪಾತ್ರವನ್ನು ‘ರಾಮಾಯಣ’ ಸೀರಿಯಲ್ ಖ್ಯಾತಿಯ ನಟ ಅರುಣ್ ಗೋವಿಲ್ ನಿಭಾಯಿಸಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಘಟನೆಯನ್ನೇ ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
‘ಆರ್ಟಿಕಲ್ 370’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ತರಣ್ ಆದರ್ಶ್ ಪೋಸ್ಟ್:
#Article370 is trending very well on weekdays… Tue is at par with Mon, says it all 👍🏻👍🏻👍🏻… Fri 6.12 cr, Sat 9.08 cr, Sun 10.25 cr, Mon 3.60 cr, Tue 3.55 cr. Total: ₹ 32.60 cr. #India biz. #Boxoffice pic.twitter.com/pWslq0YDKg
— taran adarsh (@taran_adarsh) February 28, 2024
ಚಿತ್ರಮಂದಿರಗಳಲ್ಲಿ ‘ಆರ್ಟಿಕಲ್ 370’ ಸಿನಿಮಾದ ಆಟ ಇನ್ನು ಮೂರು ದಿನಗಳ ಕಾಲ ಇದೇ ರೀತಿ ಮುಂದುವರಿದರೆ 2ನೇ ವೀಕೆಂಡ್ ಬರುತ್ತದೆ. ಈಗಾಗಲೇ ಈ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಕ್ಕಿದೆ. ಒಂದು ವೇಳೆ ಎರಡನೇ ವೀಕೆಂಡ್ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಿನಿಮಾ ನೋಡಲು ಬಂದರೆ ಮ್ಯಾಜಿಕ್ ಆಗಲಿದೆ. ಗಣನೀಯವಾಗಿ ಈ ಚಿತ್ರದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ. ಕೆಲವು ರಾಷ್ಟ್ರಗಳಲ್ಲಿ ಈ ಸಿನಿಮಾದ ಬಿಡುಗಡೆಗೆ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಆ ಸಮಸ್ಯೆ ನಿವಾರಿಸಿಕೊಂಡರೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಚಿತ್ರದ ಗಳಿಕೆ ಹೆಚ್ಚಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.