Hanuman OTT Release: ಕಡೆಗೂ ಒಟಿಟಿಗೆ ಬಂತು ‘ಹನುಮಾನ್​’ ಸಿನಿಮಾ; ಎಲ್ಲಿ ವೀಕ್ಷಣೆ?

|

Updated on: Mar 17, 2024 | 4:37 PM

ಸದ್ದು ಗದ್ದಲ ಇಲ್ಲದೇ ‘ಹನುಮಾನ್​’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವೇ ದಿನಗಳ ಹಿಂದೆ ರಿಲೀಸ್​ ಡೇಟ್​ ಬಗ್ಗೆ ಯಾವುದೇ ಅಪ್​ಡೇಟ್​ ಇಲ್ಲ ಎಂದು ಹೇಳಿದ್ದ ಒಟಿಟಿ ಸಂಸ್ಥೆಯೇ ಈಗ ಈ ಸಿನಿಮಾದ ಸ್ಟ್ರೀಮಿಂಗ್​ ಆರಂಭಿಸಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ತೇಜ ಸಜ್ಜಾ ಅವರು ಸೂಪರ್​ ಹೀರೋ ಆಗಿ ನಟಿಸಿದ್ದಾರೆ.

Hanuman OTT Release: ಕಡೆಗೂ ಒಟಿಟಿಗೆ ಬಂತು ‘ಹನುಮಾನ್​’ ಸಿನಿಮಾ; ಎಲ್ಲಿ ವೀಕ್ಷಣೆ?
ತೇಜ ಸಜ್ಜಾ
Follow us on

ಈ ವರ್ಷದ ಆರಂಭದಲ್ಲಿ ತೆರೆಕಂಡು ಬ್ಲಾಕ್​ ಬಸ್ಟರ್​ ಹಿಟ್​ ಎನಿಸಿಕೊಂಡ ‘ಹನುಮಾನ್​’ (Hanuman Movie) ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಫ್ಯಾನ್ಸ್ ಕಾಯುತ್ತಿದ್ದರು. ಅವರ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಕಡೆಗೂ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜೀ 5’ ಒಟಿಟಿ (Zee5 OTT) ಮೂಲಕ ‘ಹನುಮಾನ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಈ ಚಿತ್ರದಲ್ಲಿ ತೇಜ ಸಜ್ಜಾ (Teja Sajja) ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಅಮೃತಾ ಅಯ್ಯರ್​ ನಟಿಸಿದ್ದಾರೆ. ಪ್ರಶಾಂತ್​ ವರ್ಮಾ ನಿರ್ದೇಶನ ಮಾಡಿರುವ ‘ಹನುಮಾನ್​’ ಸಿನಿಮಾದಲ್ಲಿ ಸೂಪರ್​ ಹೀರೋ ಕಥೆ ಇದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರದಲ್ಲಿ ‘ಹನುಮಾನ್​’ ಸಿನಿಮಾ ಬಿಡುಗಡೆ ಆಗಿತ್ತು. ಅದೇ ಸಂದರ್ಭದಲ್ಲಿ ಸ್ಟಾರ್​ ನಟರ ಅನೇಕ ಸಿನಿಮಾಗಳು ತೆರೆಕಂಡಿದ್ದವು. ಬೇರೆಲ್ಲ ಸಿನಿಮಾಗಳಿಗೆ ಪೈಪೋಟಿ ನೀಡಿದ ‘ಹನುಮಾನ್​’ ಚಿತ್ರ ಸೂಪರ್​ ಹಿಟ್​ ಆಯಿತು. ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಈಗ ಈ ಸಿನಿಮಾ ಒಟಿಟಿಯಲ್ಲಿ ಧೂಳೆಬ್ಬಿಸಲು ಬಂದಿದೆ.

ಇದನ್ನೂ ಓದಿ: ‘ಹನುಮಾನ್​’ ಸಿನಿಮಾದ ಹೀರೋ ತೇಜ ಸಜ್ಜಾ ಸಂಭಾವನೆಯಲ್ಲಿ ಏರಿಕೆ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಹನುಮಾನ್​’ ತೆರೆಕಂಡಿತ್ತು. ಸದ್ಯಕ್ಕೆ ‘ಜೀ 5’ ಒಟಿಟಿಯಲ್ಲಿ ತೆಲುಗು ವರ್ಷನ್​ ಮಾತ್ರ ಲಭ್ಯವಾಗಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್​ಗಾಗಿ ಪ್ರೇಕ್ಷಕರು ಕಾದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ‘ಹನುಮಾನ್​’ ಸಿನಿಮಾದ ಹಿಂದಿ ವರ್ಷನ್​ ವೀಕ್ಷಿಸಬಹುದು. ಆಂಜನೇಯನ ಕೃಪೆಯಿಂದ ಸೂಪರ್​ ಪವರ್​ ಪಡೆಯುವ ಯುವಕನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರೇಕ್ಷಕರಿಗೆ ಅದು ತುಂಬ ಇಷ್ಟ ಆಗಿದೆ.

ತೇಜ ಸಜ್ಜಾ, ಅಮೃತಾ ಅಯ್ಯರ್​ ಜೊತೆ ಕನ್ನಡದ ರಾಜ್​ ದೀಪಕ್​ ಶೆಟ್ಟಿ, ವಿನಯ್ ರೈ, ವರಲಕ್ಷ್ಮೀ ಶರತ್​ಕುಮಾರ್​ ಮುಂತಾದವರು ‘ಹನುಮಾನ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ‘ಹನುಮಾನ್​’ ಚಿತ್ರತಂಡದವರು ಭೇಟಿ ಆಗಿದ್ದರು. ಈ ಸಿನಿಮಾವನ್ನು ಅಮಿತ್​ ಶಾ ಹೊಗಳಿದ್ದರು. ಅವರಿಗೆ ಚಿತ್ರತಂಡದವರು ಸ್ಮರಣಿಕೆ ನೀಡಿದ್ದರು. ಈಗ ಈ ಸಿನಿಮಾಗೆ ಸೀಕ್ವೆಲ್​ ಕೂಡ ಸಿದ್ಧವಾಗುತ್ತಿದೆ. ಅದಕ್ಕೆ ‘ಜೈ ಹನುಮಾನ್​’ ಎಂದು ಹೆಸರು ಇಡಲಾಗಿದೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.