Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್​’ ಸಿನಿಮಾದ ಹೀರೋ ತೇಜ ಸಜ್ಜಾ ಸಂಭಾವನೆಯಲ್ಲಿ ಏರಿಕೆ

ಸೂಪರ್ ಹೀರೋ ಕಥಾಹಂದರದ ‘ಹನುಮಾನ್​’ ಸಿನಿಮಾ ಭರ್ಜರಿ ಹಿಟ್​ ಆಗಿರುವುದರಿಂದ ನಟ ತೇಜ ಸಜ್ಜಾ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಆದ್ದರಿಂದ ಅವರು ನಟಿಸಲಿರುವ ಹೊಸ ಸಿನಿಮಾಗಳು ಸಹ ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಸಿದ್ಧಗೊಳ್ಳಲಿವೆ. ಅದಕ್ಕೆ ತಕ್ಕಂತೆಯೇ ಅವರು ಸಂಭಾವನೆ ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

‘ಹನುಮಾನ್​’ ಸಿನಿಮಾದ ಹೀರೋ ತೇಜ ಸಜ್ಜಾ ಸಂಭಾವನೆಯಲ್ಲಿ ಏರಿಕೆ
ತೇಜ ಸಜ್ಜಾ
Follow us
ಮದನ್​ ಕುಮಾರ್​
|

Updated on: Feb 09, 2024 | 4:54 PM

ಈಗ ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಚಾಲ್ತಿಯಲ್ಲಿದೆ. ಈಗಾಗಲೇ ಸ್ಟಾರ್ ಪಟ್ಟ ಪಡೆದಿರುವ ಕಲಾವಿದರು ಇಂಥ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಆದರೆ ಹೊಸ ನಟರು ಸ್ವಲ್ಪ ಹಿಂದೇಟು ಹಾಕುತ್ತಾರೆ. ಯಾಕೆಂದರೆ, ಹೊಸಬರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗೆಲುವು ಸಿಗುವುದು ಅಷ್ಟು ಸುಲಭವಲ್ಲ. ಟಾಲಿವುಡ್​ನ ಯುವ ನಟ ತೇಜ ಸಜ್ಜಾ (Teja Sajja) ಅವರು ಅಂಥ ಅಸಾಧಾರಣ ಗೆಲುವು ದಾಖಲಿಸಿದ್ದಾರೆ. ಅವರು ನಟಿಸಿದ ‘ಹನುಮಾನ್​’ ಸಿನಿಮಾ (Hanuman Movie) ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ಪ್ರಶಾಂತ್​ ವರ್ಮಾ ನಿರ್ದೇಶನ ಮಾಡಿರುವ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಆ ಬಳಿಕ ತೇಜ ಸಜ್ಜಾ ಅವರ ಸಂಭಾವನೆಯಲ್ಲೂ (Teja Sajja Remuneration) ಏರಿಕೆ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ.

ತೆಲುಗಿನ ‘ಹನುಮಾನ್​’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು. ಈ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ತೆರೆಕಂಡ ಈ ಸಿನಿಮಾ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗೂ ಡಬ್​ ಆಗಿದೆ. ಎಲ್ಲ ರಾಜ್ಯಗಳಲ್ಲೂ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ವಿದೇಶದಲ್ಲೂ ‘ಹನುಮಾನ್​’ ಸಿನಿಮಾ ಅಬ್ಬರಿಸಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರದ ಒಟ್ಟು ಗಳಿಕೆ 300 ಕೋಟಿ ರೂಪಾಯಿ ಮುಟ್ಟಿದೆ.

ಇಷ್ಟು ದೊಡ್ಡ ಗೆಲುವು ಸಿಕ್ಕರೆ ಹೀರೋಗಳು ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಹಜ. ‘ಹನುಮಾನ್’ ಸಿನಿಮಾಗೆ ತೇಜ ಸಜ್ಜಾ ಅವರು ಒಂದು ಕೋಟಿ ರೂಪಾಯಿಗಿಂತಲೂ ಕಡಿಮೆ ಸಂಭಾವನೆ ಪಡೆದಿದ್ದರು. ಆದರೆ ಈಗ ಈ ಸಿನಿಮಾ ಮುನ್ನೂರು ಕೋಟಿ ರೂಪಾಯಿ ಕ್ಲಬ್​ ಸೇರಿರುವುದರಿಂದ ಸಹಜವಾಗಿಯೇ ತೇಜ ಸಜ್ಜಾ ಅವರಿಗೆ ಇರುವ ಡಿಮ್ಯಾಂಡ್​ ಹೆಚ್ಚಾಗಿದೆ. ಅವರ ಜೊತೆ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಮುಂದೆಬರುತ್ತಿದ್ದಾರೆ.

ಇದನ್ನೂ ಓದಿ: ‘ಹನುಮಾನ್​’ ಚಿತ್ರಕ್ಕಾಗಿ 75 ಸಿನಿಮಾಗಳ ಅವಕಾಶ ಕೈಚೆಲ್ಲಿದ್ದ ನಟ ತೇಜ ಸಜ್ಜಾ

ವರದಿಗಳ ಪ್ರಕಾರ, ತೇಜ ಸಜ್ಜಾ ಅವರು ಪ್ರತಿ ಸಿನಿಮಾಗೆ 5ರಿಂದ 10 ಕೋಟಿ ರೂಪಾಯಿ ಸಂಭಾವನೆ ಕೇಳಲು ನಿರ್ಧರಿಸಿದ್ದಾರೆ. ಆದರೆ ಈ ಬಗ್ಗೆ ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯಕ್ಕಂತೂ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಹಾಗಾಗಿ ಅವರು ಮಾಡಲಿರುವ ಹೊಸ ಸಿನಿಮಾಗಳು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಸಿದ್ಧಗೊಳ್ಳಲಿವೆ. ಹೀಗಿರುವಾಗ ಅವರು ಇಷ್ಟು ಸಂಭಾವನೆ ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: 25 ದಿನಗಳಲ್ಲಿ 300 ಕೋಟಿ ರೂಪಾಯಿ ಗಳಿಸಿದ ‘ಹನುಮಾನ್​’ ಸಿನಿಮಾ

ಸೂಪರ್​ ಹೀರೋ ಕಾನ್ಸೆಪ್ಟ್​ ಇರುವ ‘ಹನುಮಾನ್​’ ಗೆದ್ದಿದ್ದರಿಂದ ಆ ಚಿತ್ರಕ್ಕೆ ‘ಜೈ ಹನುಮಾನ್​’ ಶೀರ್ಷಿಕೆಯಲ್ಲಿ ಸೀಕ್ವೆಲ್​ ಸಿದ್ಧವಾಗುತ್ತಿದೆ. ಇದರಲ್ಲೂ ತೇಜ ಸಜ್ಜಾ ಅವರೇ ಪ್ರಮುಖ ಪಾತ್ರ ಮಾಡಲಿದ್ದಾರೆ. ಹನುಮಂತನ ಆಶೀರ್ವಾದದಿಂದ ಸೂಪರ್​ ಪವರ್​ ಪಡೆದುಕೊಳ್ಳುವ ಸಾಮಾನ್ಯ ಹುಡುಗನ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಬಾರಿ ಸೀಕ್ವೆಲ್​ನಲ್ಲಿ ಪಾತ್ರವರ್ಗ ದೊಡ್ಡದಾಗಲಿದೆ. ಪಾತ್ರವರ್ಗಕ್ಕೆ ಸ್ಟಾರ್​ ಕಲಾವಿದರು ಎಂಟ್ರಿ ನೀಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ