‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಗೆ ಕಾಲಿಟ್ಟ ಕನ್ನಡದ ‘ಹೊಸ ದಿನಚರಿ’ ಸಿನಿಮಾ
ಪ್ರತಿಯೊಬ್ಬರ ಬದುಕಿನಲ್ಲೂ ಪ್ರೀತಿ ಎಂಬುದು ಖಂಡಿತವಾಗಿಯೂ ಇರುತ್ತದೆ. ಹಾಗಂತ, ಪ್ರೀತಿಸಿದ ವ್ಯಕ್ತಿ ನಮ್ಮ ಜೊತೆ ಕೊನೆಯ ತನಕ ಇರುತ್ತಾರಾ ಎಂಬುದು ದೊಡ್ಡ ಪ್ರಶ್ನೆ. ಈ ರೀತಿಯ ಕಾನ್ಸೆಪ್ಟ್ನಲ್ಲಿ ‘ಹೊಸ ದಿನಚರಿ’ ಸಿನಿಮಾ ಮೂಡಿಬಂದಿದೆ. ಈ ಚಿತ್ರ ಈಗ ‘ಅಮೇಜಾನ್ ಪ್ರೈಂ ವಿಡಿಯೋ’ದಲ್ಲಿ ಸ್ಟ್ರೀಮ್ ಆಗುತ್ತಿದೆ.
ಅನೇಕ ಹೊಸ ಚಿತ್ರಗಳು (New Kannada Movie) ಒಟಿಟಿಯಲ್ಲಿ ಸದ್ದು ಮಾಡುತ್ತಿವೆ. ಒಟಿಟಿಯಲ್ಲಿ ಜನರು ಇಷ್ಟಪಡುವ ಸಿನಿಮಾಗಳ ಶೈಲಿಯೇ ತುಸು ಭಿನ್ನವಾಗಿರುತ್ತವೆ. ಕನ್ನಡದ ಅನೇಕ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಾಗಿವೆ. ಈಗ ಅವುಗಳ ಸಾಲಿಗೆ ‘ಹೊಸ ದಿನಚರಿ’ ಸಿನಿಮಾ (Hosa Dinachari Movie) ಕೂಡ ಸೇರ್ಪಡೆ ಆಗಿದೆ. ಸಾಫ್ಟ್ ವೇರ್ ಕ್ಷೇತ್ರದ ಹಿನ್ನೆಲೆ ಹೊಂದಿರುವ ಕೀರ್ತಿ ಶೇಖರ್ ಮತ್ತು ವೈಶಾಖ್ ಪುಷ್ಪಲತಾ ಅವರ ಮೊದಲ ಪ್ರಯತ್ನವಾಗಿ ಈ ಸಿನಿಮಾ ಮೂಡಿಬಂದಿದೆ. ಈ ಮೊದಲು ಒಂದಷ್ಟು ಶಾರ್ಟ್ಫಿಲ್ಮ್ಗಳನ್ನು ನಿರ್ಮಿಸಿದ್ದ ಕೀರ್ತಿ ಅವರು ‘ಹೊಸ ದಿನಚರಿ’ ಸಿನಿಮಾದ ಮೂಲಕ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಕೀರ್ತಿ ಅವರಿಗೆ ವೈಶಾಖ್ ಕೂಡ ಸಾಥ್ ನೀಡಿದ್ದಾರೆ. ಇವರಿಬ್ಬರ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ.
2022ರ ಡಿಸೆಂಬರ್ನಲ್ಲಿ ಚಿತ್ರಮಂದಿರಗಳಲ್ಲಿ ‘ಹೊಸ ದಿನಚರಿ’ ಸಿನಿಮಾ ಬಿಡುಗಡೆ ಆಗಿತ್ತು. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಪ್ರಶಂಸೆ ಪಡೆದುಕೊಂಡಿದ್ದ ಈ ಸಿನಿಮಾ ಈಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಒಟಿಟಿಯಲ್ಲಿ ವೀಕ್ಷಿಸಿದ ಅನೇಕರು ಈ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಚಿತ್ರದ ಕಂಟೆಂಟ್ ಅನೇಕರಿಗೆ ಇಷ್ಟ ಆಗಿದೆ.
ಇದನ್ನೂ ಓದಿ: ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಾಣಲಿದೆ ‘ಜೈಲರ್’; ಒಟಿಟಿ ರಿಲೀಸ್ ದಿನಾಂಕ ಘೋಷಣೆ
ಗಂಗಾಧರ್ ಸಾಲಿಮಠ ಅವರು ‘ಹೊಸ ದಿನಚರಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೃತ್ಯುಂಜಯ ಶುಕ್ಲಾ ಮತ್ತು ಅಲೋಕ್ ಚೌರಾಸಿಯಾ ಅವರು ಸಹ ಈ ಸಿನಿಮಾದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಟಿಸಿದ ಬಹುತೇಕ ಎಲ್ಲ ಕಲಾವಿದರು ಹೊಸಬರು. ಚೇತನ್ ವಿಕ್ಕಿ, ದೀಪಕ್ ಸುಬ್ರಹ್ಮಣ್ಯ, ಶ್ರೀಪ್ರಿಯಾ, ಮಂದಾರಾ, ವರ್ಷಾ ಮುಂತಾದವರು ಈ ಚಿತ್ರದಲ್ಲಿ ಅಭಿನಸಿದ್ದಾರೆ. ವೈಶಾಖ್ ವರ್ಮಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶ್ವಿನ್ ಹೇಮಂತ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ರಂಜಿತ್ ಸೇತು ಅವರು ‘ಹೊಸ ದಿನಚರಿ’ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.
ಇದನ್ನೂ ಓದಿ: ಈ ಬಾರಿ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಇರುತ್ತಾ, ಇರಲ್ವಾ? ಇಲ್ಲಿದೆ ಪಕ್ಕಾ ಮಾಹಿತಿ
ಪ್ರತಿಯೊಬ್ಬರ ಬದುಕಿನಲ್ಲೂ ಪ್ರೀತಿ ಎಂಬುದು ಖಂಡಿತವಾಗಿಯೂ ಇರುತ್ತದೆ. ಹಾಗಂತ, ಪ್ರೀತಿಸಿದ ವ್ಯಕ್ತಿ ನಮ್ಮ ಜೊತೆ ಕೊನೆಯ ತನಕ ಇರುತ್ತಾರಾ ಎಂಬುದು ದೊಡ್ಡ ಪ್ರಶ್ನೆ. ಒಂದು ವೇಳೆ ಅವರು ಇಲ್ಲದೇ ಬೇರೊಬ್ಬರು ನಮ್ಮ ಜೀವನದಲ್ಲಿ ಬಂದಾಗ ಏನಾಗುತ್ತದೆ ಎನ್ನುವ ಕಥಾಹಂದರವನ್ನು ‘ಹೊಸ ದಿನಚರಿ’ ಸಿನಿಮಾ ಹೊಂದಿದೆ. ‘ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸೋಮವಾರದಿಂದ (ಸೆಪ್ಟೆಂಬರ್ 4) ಸ್ಟ್ರೀಮ್ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.