Exclusive: ಈ ಬಾರಿ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಇರುತ್ತಾ, ಇರಲ್ವಾ? ಇಲ್ಲಿದೆ ಪಕ್ಕಾ ಮಾಹಿತಿ

ಕಳೆದ ವರ್ಷ ಬಿಗ್ ಬಾಸ್ ಒಟಿಟಿ ಆರಂಭ ಆಗಿತ್ತು. ಟಿವಿ ಸೀಸನ್ ಆರಂಭ ಆಗುವುದಕ್ಕೂ ಮೊದಲು ಈ ಸೀಸನ್ ಪ್ರದರ್ಶನ ಕಂಡಿತ್ತು. ಕೇವಲ ವೂಟ್ ಆ್ಯಪ್​ನಲ್ಲಿ ಮಾತ್ರ ಇದನ್ನು ನೋಡಲು ಅವಕಾಶ ಇತ್ತು. ಒಟಿಟಿ ಸೀಸನ್ ಪೂರ್ಣಗೊಂಡ ಒಂದು ವಾರ ಗ್ಯಾಪ್ ಬಳಿಕ ಟಿವಿ ಸೀಸನ್ ಆರಂಭಗೊಂಡಿತು.

Exclusive: ಈ ಬಾರಿ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಇರುತ್ತಾ, ಇರಲ್ವಾ? ಇಲ್ಲಿದೆ ಪಕ್ಕಾ ಮಾಹಿತಿ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Aug 23, 2023 | 10:45 AM

‘ಬಿಗ್​ ಬಾಸ್’ (Bigg Boss) ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕರ ವರ್ಗ ಇದೆ. ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಈ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ 9 ಸೀಸನ್ ಪೂರ್ಣಗೊಂಡಿದೆ. 10ನೇ ಸೀಸನ್​ಗೆ ಸಿದ್ಧತೆ ನಡೆದಿದೆ. ಕಳೆದ ವರ್ಷ ಒಟಿಟಿ ಸೀಸನ್ (Bigg Boss OTT Season) ಇತ್ತು. 45 ದಿನಗಳ ಕಾಲ ಈ ಸೀಸನ್ ಪ್ರಸಾರ ಕಂಡಿತ್ತು. ಈ ಬಾರಿ ಒಟಿಟಿ ಸೀಸನ್ ಇರುತ್ತದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಆ ಬಗ್ಗೆ ಪಕ್ಕಾ ಮಾಹಿತಿ ಇಲ್ಲಿದೆ.

ಕಳೆದ ವರ್ಷ ಬಿಗ್ ಬಾಸ್ ಒಟಿಟಿ ಆರಂಭ ಆಗಿತ್ತು. ಟಿವಿ ಸೀಸನ್ ಆರಂಭ ಆಗುವುದಕ್ಕೂ ಮೊದಲು ಈ ಸೀಸನ್ ಪ್ರದರ್ಶನ ಕಂಡಿತ್ತು. ಕೇವಲ ವೂಟ್ ಆ್ಯಪ್​ನಲ್ಲಿ ಮಾತ್ರ ಇದನ್ನು ನೋಡಲು ಅವಕಾಶ ಇತ್ತು. ಒಟಿಟಿ ಸೀಸನ್ ಪೂರ್ಣಗೊಂಡ ಒಂದು ವಾರ ಗ್ಯಾಪ್ ಬಳಿಕ ಟಿವಿ ಸೀಸನ್ ಆರಂಭಗೊಂಡಿತು. ಆದರೆ, ಈ ಬಾರಿ ಒಟಿಟಿ ಸೀಸನ್ ಇರುವುದಿಲ್ಲ! ಈ ವಿಚಾರವನ್ನು ಮೂಲಗಳು ಖಚಿತಪಡಿಸಿವೆ.

10ನೇ ಸೀಸನ್ ಎಂದಾಗ ಒಂದು ವಿಶೇಷ ಭಾವನೆ ಇರುತ್ತದೆ. ಈ ಕಾರಣದಿಂದಲೇ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸಖತ್ ವಿಶೇಷ ಎನಿಸಿಕೊಂಡಿದೆ. ಹೀಗಾಗಿ ಸಖತ್ ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಬರಲಿದೆ. ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಆರಂಭ  ಆಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಹೊಸ ಸೀಸನ್​ನಲ್ಲಿ ಇರಲಿದೆ ಹಲವು ಸರ್​ಪ್ರೈಸ್; ಉಲ್ಟಾ-ಪಲ್ಟಾ ಆಗಿದೆ ಪ್ರೋಮೋ

ಬಿಗ್ ಬಾಸ್ ಎಂದಾಕ್ಷಣ ನೆನಪಾಗೋದು ಕಿಚ್ಚ ಸುದೀಪ್. ಅವರ ಉಡುಗೆ, ಅವರ ಸ್ಟೈಲ್, ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳೋ ರೀತಿ, ಅವರನ್ನು ನಗಿಸುವ ವಿಧಾನ, ಸ್ಪರ್ಧಿಗಳನ್ನು ಮನೆಯವರೆಂದು ಟ್ರೀಟ್ ಮಾಡುವ ರೀತಿ, ಅವರಿಗೋಸ್ಕರ ಅಡುಗೆ ಮಾಡಿ ಕೊಡೋದೂ.. ಹೀಗೆ ಎಲ್ಲವೂ ಇಷ್ಟವಾಗುತ್ತದೆ. ಕಳೆದ ಒಂಭತ್ತು ಸೀಸನ್​ಗಳನ್ನು ಅವರು ಮುನ್ನಡೆಸಿಕೊಟ್ಟಿದ್ದಾರೆ. 10ನೇ ಸೀಸನ್ ಕೂಡ ಅವರ ಸಾರಥ್ಯದಲ್ಲೇ ಸಾಗಲಿದೆ. ಸುದೀಪ್​ಗೋಸ್ಕರ ಈ ರಿಯಾಲಿಟಿ ಶೋ ವೀಕ್ಷಿಸುವ ಅನೇಕರಿದ್ದಾರೆ. ಈ ವಿಚಾರ ಕೇಳಿ ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶೀಘ್ರದಲ್ಲೇ ಇದರ ಪ್ರೋಮೋ ಶೂಟ್ ನಡೆಯೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು