‘ಬಿಗ್ ಬಾಸ್’ ಹೊಸ ಸೀಸನ್​ನಲ್ಲಿ ಇರಲಿದೆ ಹಲವು ಸರ್​ಪ್ರೈಸ್; ಉಲ್ಟಾ-ಪಲ್ಟಾ ಆಗಿದೆ ಪ್ರೋಮೋ

Bigg Boss Telugu Season 7: ‘ಯಾರೂ ಊಹಿಸದ ಹೊಸ ಸೀಸನ್ ಬಿಗ್ ಬಾಸ್ ಸೀಸನ್ 7. ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ’ ಎಂದು ಡೈಲಾಗ್ ಹೊಡೆಯುತ್ತಾರೆ ಅಕ್ಕಿನೇನಿ ನಾಗಾರ್ಜುನ. ‘ಸ್ಟಾರ್ ಮಾ’ ಹಾಗೂ ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​ನಲ್ಲಿ (ಒಟಿಟಿ) ‘ಬಿಗ್ ಬಾಸ್ ತೆಲುಗು ಸೀಸನ್ 7’ ಆರಂಭ ಆಗಲಿದೆ.

‘ಬಿಗ್ ಬಾಸ್’ ಹೊಸ ಸೀಸನ್​ನಲ್ಲಿ ಇರಲಿದೆ ಹಲವು ಸರ್​ಪ್ರೈಸ್; ಉಲ್ಟಾ-ಪಲ್ಟಾ ಆಗಿದೆ ಪ್ರೋಮೋ
ಅಕ್ಕಿನೇನೇನಿ ನಾಗಾರ್ಜುನ
Follow us
ರಾಜೇಶ್ ದುಗ್ಗುಮನೆ
|

Updated on:Aug 11, 2023 | 2:39 PM

‘ಬಿಗ್ ಬಾಸ್’ ರಿಯಾಲಿಟಿ ಶೋಗೆ ಭರ್ಜರಿ ಬೇಡಿಕೆ ಇದೆ. ಹಲವು ಭಾಷೆಗಳಲ್ಲಿ ಪ್ರಸಾರ ಆಗುತ್ತಿರುವ ಈ ಶೋಗೆ ದೊಡ್ಡ ಪ್ರೇಕ್ಷಕರ ವರ್ಗ ಇದೆ. ಈಗ ‘ತೆಲುಗು ಬಿಗ್ ಬಾಸ್ ಸೀಸನ್ 7’ರ (Bigg Bosss Telugu Season 7) ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಇದರ ಪ್ರೋಮೋ ರಿವೀಲ್ ಆಗಿದೆ. ಈ ಬಾರಿ ಸಾಕಷ್ಟು ಸರ್​ಪ್ರೈಸ್​ಗಳೊಂದಿಗೆ ನಿಮ್ಮ ಮುಂದೆ ಬರುವುದಾಗಿ ಅಕ್ಕಿನೇನಿ ನಾಗಾರ್ಜುನ ಭರವಸೆ ನೀಡಿದ್ದಾರೆ. ಆದರೆ, ಈ ರಿಯಾಲಿಟಿ ಶೋ ಆರಂಭ ಆಗುವ ದಿನಾಂಕವನ್ನು ವಾಹಿನಿಯವರು ರಿವೀಲ್ ಮಾಡಿಲ್ಲ.

‘ತೆಲುಗು ಬಿಗ್ ಬಾಸ್’ ಈಗಾಗಲೇ ಆರು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೊಸ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಹೀಗಿರುವಾಗಲೇ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಓರ್ವ ಹುಡುಗ ಕಂದಕದಲ್ಲಿ ಬೀಳುವವನಿರುತ್ತಾನೆ. ಆತನ ರಕ್ಷಣೆ ಮಾಡಲು ಹುಡುಗಿ ನಿಂತಿರುತ್ತಾಳೆ. ಆದರೆ, ಆತನ ಬದುಕಿಸೋಕೆ ಆಕೆಗೆ ಆಗುವುದೇ ಇಲ್ಲ. ‘ಇಲ್ಲಿಗೆ ದಿ ಎಂಡ್ ಅಲ್ಲ! ಇಲ್ಲಿಂದಲೇ ಆರಂಭ’ ಎನ್ನುತ್ತಾರೆ ಅಕ್ಕಿನೇನಿ ನಾಗಾರ್ಜುನ. ಈ ರೀತಿಯಲ್ಲಿ ‘ತೆಲುಗು ಬಿಗ್ ಬಾಸ್ ಸೀಸನ್​ 7’ ಪ್ರೋಮೋ ಮೂಡಿ ಬಂದಿದೆ. ಪ್ರೋಮೋ ಸಖತ್ ಫನ್ನಿ ಆಗಿದೆ.

‘ಯಾರೂ ಊಹಿಸದ ಹೊಸ ಸೀಸನ್ ಬಿಗ್ ಬಾಸ್ ಸೀಸನ್ 7. ಇಲ್ಲಿ ಎಲ್ಲವೂ ಉಲ್ಟಾ ಪಲ್ಟಾ’ ಎಂದು ಡೈಲಾಗ್ ಹೊಡೆಯುತ್ತಾರೆ ಅಕ್ಕಿನೇನಿ ನಾಗಾರ್ಜುನ. ‘ಸ್ಟಾರ್ ಮಾ’ ಹಾಗೂ ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​ನಲ್ಲಿ (ಒಟಿಟಿ) ‘ಬಿಗ್ ಬಾಸ್ ತೆಲುಗು ಸೀಸನ್ 7’ ಆರಂಭ ಆಗಲಿದೆ. ಈ ಸೀಸಿನ್ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇದನ್ನೂ ಓದಿ: ‘ಬಿಗ್ ಬಾಸ್​’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್​ಗೆ ಬೇಸರ ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ ಬಗ್ಗೆ ಸುದ್ದಿ ಒಂದು ಹರಿದಾಡಿತ್ತು. ನಿರೂಪಣೆಯಿಂದ ಅವರನ್ನು ಕಿತ್ತೆಸೆದು ಹೊಸ ನಟರನ್ನು ತರಲು ಪ್ಲ್ಯಾನ್ ನಡೆದಿದೆ ಎಂದು ಅನೇಕರು ಹೇಳಿದ್ದರು. ಆದರೆ, ಅದು ಸುಳ್ಳಾಗಿದೆ. ಅವರೇ ಹೊಸ ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದಲ್ಲೂ ಶೀಘ್ರವೇ ಬಿಗ್ ಬಾಸ್ ಆರಂಭ ಆಗಲಿದೆ ಎನ್ನಲಾಗಿದೆ. ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಶುರುವಾಗಲಿದೆ. ಸುದೀಪ್ ‘K46’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಬಳಿಕ ಬಿಗ್ ಬಾಸ್ ಆರಂಭ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:34 pm, Fri, 11 August 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ