ಬಿಗ್​ಬಾಸ್ ಮನೆಯಲ್ಲಿ ಮೊಬೈಲ್ ಬಳಸಿದರೇ ನಟಿ ಪೂಜಾ ಭಟ್?

Bigg Boss OTT: ಹಿಂದಿ ಬಿಗ್​ಬಾಸ್ ಒಟಿಟಿ ಎರಡನೇ ಸೀಸನ್​ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ನಟಿ ಪೂಜಾ ಭಟ್, ಬಿಗ್​ಬಾಸ್ ಮನೆಯಲ್ಲಿ ಮೊಬೈಲ್ ಫೋನ್ ಬಳಸಿದ್ದಾರೆಯೇ? ಚಿತ್ರವೊಂದು ವೈರಲ್ ಆಗಿದೆ.

ಬಿಗ್​ಬಾಸ್ ಮನೆಯಲ್ಲಿ ಮೊಬೈಲ್ ಬಳಸಿದರೇ ನಟಿ ಪೂಜಾ ಭಟ್?
ಪೂಜಾ ಭಟ್
Follow us
ಮಂಜುನಾಥ ಸಿ.
|

Updated on:Aug 11, 2023 | 9:05 PM

ಮತ್ತೆ ಬಿಗ್​ಬಾಸ್ (Bigg Boss) ಸೀಸನ್ ಆರಂಭವಾಗಿದೆ ಹಿಂದಿಯಲ್ಲಿ ಬಿಗ್​ಬಾಸ್ ಒಟಿಟಿ (Bigg Boss OTT) ಎರಡನೇ ಸೀನಸ್ ಚಾಲ್ತಿಯಲ್ಲಿದೆ. ತೆಲುಗು ಬಿಗ್​ಬಾಸ್ ಪ್ರೋಮೋ ಬಿಡುಗಡೆ ಆಗಿದೆ. ಕನ್ನಡದಲ್ಲಿಯೂ ಬಿಗ್​ಬಾಸ್ ಸ್ಪರ್ಧಿಗಳ ಆಯ್ಕೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಈ ನಡುವೆ ಹಿಂದಿಯ ಬಿಗ್​ಬಾಸ್ ಒಟಿಟಿ ಸೀಸನ್ ಎರಡು ಸುದ್ದಿಯಲ್ಲಿದೆ, ಕಾರಣ ಬಿಗ್​ಬಾಸ್ ಮನೆಯ ಒಳಗಿರುವ ಸದಸ್ಯರೊಬ್ಬರು ಮೊಬೈಲ್ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು, ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರವೊಂದು ಹರಿದಾಡುತ್ತಿದೆ.

ಒಟಿಟಿ ಸೀಸನ್ ಎರಡರಲ್ಲಿ ನಟಿ ಪೂಜಾ ಭಟ್ ಸ್ಪರ್ಧಿಯಾಗಿ ಭಾಗಿಯಾಗಿದ್ದು, ಬಿಗ್​ಬಾಸ್ ಮನೆಯಲ್ಲಿ ಪೂಜಾ ಭಟ್ ಮೊಬೈಲ್ ಬಳಸಿದ್ದಾರೆ ಎನ್ನಲಾಗುತ್ತಿದ್ದು, ಪೂಜಾ ಭಟ್ ತಮ್ಮ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಂಡು ಸಹ ಸ್ಪರ್ಧಿಯೊಟ್ಟಿಗೆ ಮಾತನಾಡುತ್ತಿರುವ ಫೋಟೊ ಒಂದು ವೈರಲ್ ಆಗಿದೆ. ಹಿರಿಯ ನಿರ್ದೇಶಕ ಮಹೇಶ್ ಭಟ್ ಪುತ್ರಿ, ಆಲಿಯಾ ಭಟ್ ಸಹೋದರಿ ಆಗಿರುವ ಪೂಜಾ ಭಟ್, ಚಿತ್ರರಂಗದ ಪ್ರಭಾವಿ ಕುಟುಂಬದ ಸದಸ್ಯರಾಗಿದ್ದು, ಇದೇ ಕಾರಣಕ್ಕೆ ಪೂಜಾ ಭಟ್​ಗೆ ಬಿಗ್​ಬಾಸ್ ಮನೆಯಲ್ಲಿ ಮೊಬೈಲ್ ಬಳಸಲು ಅವಕಾಶ ಮಾಡಿಕೊಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

ಆದರೆ ಅಸಲಿ ಕತೆ ಬೇರೆಯೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೂಜಾ ಭಟ್​ರ ಮೊಬೈಲ್ ಚಿತ್ರ ನಕಲಿ ಆಗಿದೆ. ಯಾರೋ ಪೂಜಾ ಭಟ್​ರ ಚಿತ್ರವನ್ನು ಎಡಿಟ್ ಮಾಡಿ ಖಾಲಿ ಜಾಗದಲ್ಲಿ ಮೊಬೈಲ್ ಅನ್ನು ತಂತ್ರಜ್ಞಾನ ಬಳಸಿ ಕೂರಿಸಿ, ಪೂಜಾ ಭಟ್, ಬಿಗ್​ಬಾಸ್ ಮನೆಯೊಳಗೆ ಮೊಬೈಲ್ ಬಳಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬುವಂತೆ ಮಾಡಿದ್ದಾರೆ. ಈ ಬಗ್ಗೆ ಬಿಗ್​ಬಾಸ್ ಖಬ್ರಿ ಸೇರಿದಂತೆ ಇನ್ನೂ ಕೆಲವು ಸಾಮಾಜಿಕ ಜಾಲತಾಣ ಪೇಜ್​ಗಳಲ್ಲಿ ಸ್ಪಷ್ಟನೆ ನೀಡಲಾಗಿದೆ.

ಇದನ್ನೂ ಓದಿ:Bigg Boss Kannada: ಸೆಪ್ಟೆಂಬರ್​ನಲ್ಲಿ ಶುರುವಾಗಲಿದೆ ಬಿಗ್​ಬಾಸ್ ಕನ್ನಡ

ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್​ರ ಬಿಗ್​ಬಾಸ್​ ಸೆಟ್​ನಲ್ಲಿನ ಚಿತ್ರವೊಂದು ವೈರಲ್ ಆಗಿತ್ತು. ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಬಿಗ್​ಬಾಸ್​ ಸೆಟ್​ನಲ್ಲಿ ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಚಿತ್ರ ವೈರಲ್ ಆಗಿ ನೆಟ್ಟಿಗರಿಂದ ತೀವ್ರ ಟೀಕೆ ಎದುರಿಸಿತ್ತು. ಬಿಗ್​ಬಾಸ್ ಮನೆಯಲ್ಲಿರುವವರಿಗೆ ಬುದ್ಧಿವಾದ ಹೇಳುವ, ಅವರ ವರ್ತನೆಗಳನ್ನು ಟೀಕಿಸುವ, ತಿದ್ದುವ ಸಲ್ಮಾನ್ ಖಾನ್ ಸ್ವತಃ ತಾವೇ ಹೀಗೆ ನಡೆದುಕೊಳ್ಳುತ್ತಾರೆ. ಸಲ್ಮಾನ್ ಖಾನ್​ರ ನಿಜ ಬಣ್ಣ ಇದು, ಸಲ್ಮಾನ್ ಖಾನ್​ರ ಕ್ಯಾಮೆರಾ ಹಿಂದಿನ ನಿಜ ಬಣ್ಣವಿದು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಗ್​ಬಾಸ್ ಒಟಿಟಿ 2 ಜೂನ್ 17ಕ್ಕೆ ಆರಂಭವಾಗಿದೆ. 15 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಪುನೀತ್ ಸೂಪರ್ ಸ್ಟಾರ್ ಮೊದಲ ದಿನವೇ ಎಲಿಮಿನೇಟ್ ಆದರೆ ಆ ನಂತರ ಈವರೆಗೆ ಹತ್ತು ಮಂದಿ ಎಲಿಮಿನೇಟ್ ಆಗಿದ್ದಾರೆ. ಬಿಗ್​ಬಾಸ್ ಒಟಿಟಿ 2 ಜಿಯೋ ಸಿನಿಮಾಸ್​ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Fri, 11 August 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್