ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ‘ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಕಾರ್ಯಕ್ರಮ ಹಲವು ಕಾರಣಗಳಿಂದ ಜನಪ್ರಿಯವಾಗಿದೆ. ಅದರಲ್ಲಿ ಭಾಗವಹಿಸುವವರು ಸೆಲೆಬ್ರಿಟಿಗಳು ಎಂಬುದು ಒಂದು ಕಾರಣವಾದರೆ, ಆ ಕಾರ್ಯಕ್ರಮದ ವಿಷಯ ವಸ್ತು ನೋಡುಗರಿಗೆ ಬಹಳ ಆಸಕ್ತಿಯ ವಿಷಯ ಎಂಬುದು ಅದರ ಖ್ಯಾತಿಗೆ ಮತ್ತೊಂದು ಕಾರಣ. ಈಗಾಗಲೇ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಹಾಗೂ ಸೂಪರ್ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಮುಂದಿನ ಎಪಿಸೋಡ್ಗಳಲ್ಲಿ ಮತ್ತಿಬ್ಬರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮವನ್ನು ನಡೆಸಿಕೊಡುವ ಬೇರ್ ಗ್ರಿಲ್ಸ್ ಖಚಿಪಡಿಸಿದ್ದಾರೆ. ನಟ ಅಜಯ್ ದೇವಗನ್ ಅವರಲ್ಲಿ ಓರ್ವರು ಎನ್ನುತ್ತವೆ ಮೂಲಗಳು.
ಅಜಯ ದೇವಗನ್ ಕಾಣಿಸಿಕೊಳ್ಳಲಿದ್ದಾರಾ?
ಬಲ್ಲ ಮೂಲಗಳ ಪ್ರಕಾರ ಬಾಲಿವುಡ್ನ ಖ್ಯಾತ ನಟ ಅಜಯ್ ದೇವಗನ್ ಶೋನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ, ಅಜಯ್, ಬೇರ್ ಗ್ರಿಲ್ಸ್ ನಡೆಸಿಕೊಡಲಿರುವ ಪ್ರಖ್ಯಾತ ಶೋನಲ್ಲಿ ಭಾಗವಹಿಸಲಿದ್ದಾರೆ. ಅವರು ಭಾಗವಹಿಸಲಿರುವ ಶೋ, ಮಾಲ್ಡೀವ್ಸ್ನಲ್ಲಿ ಚಿತ್ರೀಕರಣವಾಗಲಿದೆ. ಇದಕ್ಕಾಗಿ ಇಂದು (ಭಾನುವಾರ) ಅಜಯ್, ಮಾಲ್ಡೀವ್ಸ್ಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಕೆಲ ಸಮಯಗಳ ಹಿಂದಷ್ಟೇ ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಪ್ರಸ್ತುತ ಬೇರ್ ಗ್ರಿಲ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸ್ಟೋರಿಯ ಪ್ರಕಾರ, ಮುಂದಿನ ಎಪಿಸೋಡ್ನಲ್ಲಿ ಬಾಲಿವುಡ್ನ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಹಾಗಾದರೆ ದೀಪಿಕಾ ಕೂಡ ಭಾಗವಹಿಸಲಿದ್ದಾರೆಯೇ ಎಂಬ ಚರ್ಚೆ ಮತ್ತೆ ಅಭಿಮಾನಿ ಬಳಗದಲ್ಲಿ ಪ್ರಾರಂಭವಾಗಿದೆ.
‘ಇನ್ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಖ್ಯಾತ ಕಾರ್ಯಕ್ರಮವಾಗಿದ್ದು, ಕಾಡಿನಲ್ಲಿ ಅತ್ಯಂತ ಕಷ್ಟದ ಸಂದರ್ಭದಲ್ಲಿ ಬಚಾವಾಗುವುದು ಹೇಗೆ ಎಂಬ ಪರಿಕಲ್ಪನೆಯಲ್ಲಿ ಮೂಡಿಬರುತ್ತದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಖ್ಯಾತ ಟೆನ್ನಿಸ್ ತಾರೆ ರೋಜರ್ ಫೆಡರರ್ ಸೇರಿದಂತೆ ಅನೇಕರು ಬ್ರಿಟನ್ ಮೂಲದ ಬೇರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ:
‘ಕುಡಿಯೋ ಎಂದು ಅಂಬರೀಷ್ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್
ಭೀಕರ ಬೈಕ್ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್ ತೇಜ್ ಹೀಗೆ ಮಾಡಬಾರದಿತ್ತು
(Into the wild with bear grylls program will host two Bollywood celebrities in their next)
Published On - 10:36 am, Sun, 12 September 21