ಜಿಯೋ ಸಿನಿಮಾದ ಪ್ಲ್ಯಾನ್​ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್​ಗಳಿವೆ?

Jio Cinema Plans: 89 ರೂಪಾಯಿ ಪ್ಲ್ಯಾನ್ ಕೂಡ ತಿಂಗಳ ಪ್ಲ್ಯಾನ್ ಆಗಿದೆ. ಇದು ಕೂಡ 29 ರೂಪಾಯಿ ಪ್ಲ್ಯಾನ್​ನ ಬೆನಿಫಿಟ್​ಗಳನ್ನು ನೀಡಲಿದೆ. ಇದರ ಜೊತೆಗೆ ಏಕಕಾಲಕ್ಕೆ ನಾಲ್ಕು ಡಿವೈಸ್​ಗಳಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿಯೂ ಐಪಿಎಲ್​, ಲೈವ್ ಚಾನೆಲ್ ನೋಡುವಾಗ ಜಾಹೀರಾತು ಪ್ರಸಾರ ಆಗಲಿದೆ.

ಜಿಯೋ ಸಿನಿಮಾದ ಪ್ಲ್ಯಾನ್​ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್​ಗಳಿವೆ?
ಜಿಯೋ ಸಿನಿಮಾ

Updated on: May 01, 2024 | 7:36 AM

ಜಿಯೋ ಸಿನಿಮಾ (Jio Cinema) ಇತ್ತೀಚೆಗೆ ಪ್ರೀಮಿಯಂ ಸಬ್​ಸ್ಕ್ರಿಪ್ಶನ್ ಘೋಷಣೆ ಮಾಡಿದೆ. ಇದರ ಅನುಸಾರ ಪ್ರತಿ ತಿಂಗಳಿಗೆ 29 ರೂಪಾಯಿ ಹಾಗೂ 89 ರೂಪಾಯಿ ಪ್ಲ್ಯಾನ್ ಘೋಷಣೆ ಮಾಡಿದೆ. ಎರಡೂ ಪ್ಲ್ಯಾನ್​ಗಳು ಬೇರೆ ಬೇರೆ ಬೆನಿಫಿಟ್​ಗಳನ್ನು ಹೊಂದಿವೆ. ಜಾಹೀರಾತಿನಿಂದ ಮುಕ್ತಿ ಪಡೆಯಲು ಈ ಪ್ಲ್ಯಾನ್ ಸಹಕಾರಿ ಆಗಲಿದೆ. ಬೇಸರದ ವಿಚಾರ ಎಂದರೆ ಕ್ರೀಡೆ ಹಾಗೂ ಲೈವ್​ ಚಾನೆಲ್​ನಲ್ಲಿ ಜಾಹೀರಾತಿನಿಂದ ಮುಕ್ತಿ ಇಲ್ಲ.

29 ರೂಪಾಯಿ ಪ್ರೀಮಿಯಂ ಪ್ಲ್ಯಾನ್ ಹಲವು ವಿಧಧ ಬೆನಿಫಿಟ್​ಗಳನ್ನು ನೀಡುತ್ತದೆ. 4K ಕಂಟೆಂಟ್​, ಜಾಹೀರಾತು ರಹಿತ ವೀಕ್ಷಣೆ, ಆಫ್​ಲೈನ್ ವೀಕ್ಷಣೆ, ಎಕ್ಸ್​ಕ್ಲೂಸಿವ್ ಸೀರಿಸ್, ಸಿನಿಮಾ, ಹಾಲಿವುಡ್ ಸಿನಿಮಾಗಳು ಹಾಗೂ ಟಿವಿ ಎಂಟರ್​ಟೇನ್​ಮೆಂಟ್​ಗಳನ್ನು ವೀಕ್ಷಿಸಬಹುದು. ಲೈವ್ ಟಿವಿ ಹಾಗೂ ಕ್ರೀಡೆಗಳಲ್ಲಿ ಜಾಹೀರಾತು ಬರಲಿದೆ. 29 ರೂಪಾಯಿ ಪ್ಲ್ಯಾನ್​ನಲ್ಲಿ ಒಮ್ಮೆಗೆ ಒಂದು ಡಿವೈಸ್​ನಲ್ಲಿ ಮಾತ್ರ ನೋಡಬಹುದು.

89 ರೂಪಾಯಿ ಪ್ಲ್ಯಾನ್ ಕೂಡ ತಿಂಗಳ ಪ್ಲ್ಯಾನ್ ಆಗಿದೆ. ಇದು ಕೂಡ 29 ರೂಪಾಯಿ ಪ್ಲ್ಯಾನ್​ನ ಬೆನಿಫಿಟ್​ಗಳನ್ನು ನೀಡಲಿದೆ. ಇದರ ಜೊತೆಗೆ ಏಕಕಾಲಕ್ಕೆ ನಾಲ್ಕು ಡಿವೈಸ್​ಗಳಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿಯೂ ಐಪಿಎಲ್​, ಲೈವ್ ಚಾನೆಲ್ ನೋಡುವಾಗ ಜಾಹೀರಾತು ಪ್ರಸಾರ ಆಗಲಿದೆ.

ಇದನ್ನೂ ಓದಿ: Jio Cinema: ‘ಇನ್ಮುಂದೆ ಜಾಹೀರಾತು ಇರಲ್ಲ’; ಹೊಸ ಘೋಷಣೆ ಮಾಡಿದ ಜಿಯೋ ಸಿನಿಮಾ

ನೀವೊಬ್ಬರೇ ವೀಕ್ಷಿಸೋದು ಎಂದಾದೆ 29 ರೂಪಾಯಿ ಪ್ಲ್ಯಾನ್ ಸಹಕಾರಿ ಆಗಲಿದೆ. 89 ರೂಪಾಯಿ ಪ್ಲ್ಯಾನ್ ಪಡೆದರೆ ನಿಮ್ಮ ಜೊತೆ ನಿಮ್ಮ ಗೆಳೆಯರು, ಕುಟುಂಬದವರು ಕೂಡ ವೀಕ್ಷಿಸಬಹುದು. 29 ರೂಪಾಯಿ ಪ್ಲ್ಯಾನ್​ನ ನಾಲ್ಕು ಬಾರಿ ಪಡೆದರೆ 120 ರೂಪಾಯಿ ಆಗಲಿದೆ. ಇಡೀ ಕುಟುಂಬವೇ ವೀಕ್ಷಣೆ ಮಾಡುತ್ತದೆ ಎಂದರೆ 89 ರೂಪಾಯಿ ಪ್ಲ್ಯಾನ್ ಉತ್ತಮ. ಉಳಿದ ಒಟಿಟಿ ಪ್ಲ್ಯಾಟ್​ಫಾರ್ಮ್​ಗಳಿಗೆ ಹೋಲಿಸಿದರೆ ಜಿಯೋ ಸಿನಿಮಾ ಕಡಿಮೆ ಬೆಲೆಯಲ್ಲಿ ಪ್ಲ್ಯಾನ್​ಗಳನ್ನು ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us