ಮತ್ತೆ ಪ್ರಾರಂಭ ಕಪಿಲ್ ಶೋ, ಜೂ ಎನ್​ಟಿಆರ್ ಸೇರಿ ಹಲವು ಅತಿಥಿಗಳು, ಇಲ್ಲಿದೆ ಪಟ್ಟಿ

|

Updated on: Sep 14, 2024 | 7:37 PM

‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಎರಡನೇ ಸೀಸನ್ ಪ್ರಾರಂಭ ಆಗಲಿದೆ. ಇದೇ ತಿಂಗಳಿನಲ್ಲಿ ಶೋನ ಎರಡನೇ ಸೀಸನ್ ಪ್ರಾರಂಭವಾಗಲಿದ್ದು, ಜೂ ಎನ್​ಟಿಆರ್ ಸೇರಿ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ. ಇಲ್ಲಿದೆ ನೋಡಿ ಅತಿಥಿಗಳ ಪಟ್ಟಿ.

ಮತ್ತೆ ಪ್ರಾರಂಭ ಕಪಿಲ್ ಶೋ, ಜೂ ಎನ್​ಟಿಆರ್ ಸೇರಿ ಹಲವು ಅತಿಥಿಗಳು, ಇಲ್ಲಿದೆ ಪಟ್ಟಿ
Follow us on

ಕಪಿಲ್ ಶರ್ಮಾ ಶೋ, ಕಳೆದ ಒಂದು ದಶಕದಿಂದಲೂ ಟಿವಿ ಜಗತ್ತಿನಲ್ಲಿ ಟಾಪ್ ಕಾಮಿಡಿ ಶೋ ಎನಿಸಿಕೊಂಡಿದೆ. ಇತರೆ ಡ್ರಾಮಾ ಧಾರಾವಾಹಿಗಳನ್ನೂ ಮೀರಿ ಟಿಆರ್​ಪಿ ಗಳಿಸಿದ ಸಮಯವೂ ಇದೆ. ದಶಕಗಳ ಕಾಲ ಟಿವಿಯಲ್ಲಿ ರಾರಾಜಿಸಿದ ಕಪಿಲ್ ಶರ್ಮಾ ಶೋ ಇದೀಗ ಒಟಿಟಿಗೆ ಬಂದಿದೆ. ಕೆಲ ತಿಂಗಳ ಹಿಂದೆ ನೆಟ್​ಫ್ಲಿಕ್ಸ್​ನಲ್ಲಿ ‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ದ ಮೊದಲ ಸೀಸನ್ ಪ್ರಸಾರವಾಗಿತ್ತು. ಕಪಿಲ್​ ಜೊತೆ ಕಿತ್ತಾಡಿಕೊಂಡು ದೂರಾಗಿದ್ದವರು ಸಹ ಈ ಸೀಸನ್​ಗಾಗಿ ಒಂದಾಗಿ ಅದ್ಭುತವಾಗಿ ಶೋ ನಡೆಸಿಕೊಟ್ಟರು. ಇದೀಗ ಎರಡನೇ ಶೋ ಬರುತ್ತಿದ್ದು, ಎರಡನೇ ಶೋನ ಪ್ರೋಮೊ ಬಿಡುಗಡೆ ಆಗಿದೆ. ಈ ಬಾರಿ ದೊಡ್ಡ ಸ್ಟಾರ್ ನಟ-ನಟಿಯರು ಅತಿಥಿಗಳಾಗಿ ಬರುತ್ತಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿರುವ ‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ ಎರಡನೇ ಸೀಸನ್​ನ ಅತಿಥಿಗಳ ಪಟ್ಟಿಯಲ್ಲಿ ಈ ಬಾರಿ ಜೂ ಎನ್​ಟಿಆರ್ ಇರುವುದು ವಿಶೇಷ. ತಮ್ಮ ನಟನೆಯ ‘ದೇವರ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜೂ ಎನ್​ಟಿಆರ್, ಕಪಿಲ್ ಶರ್ಮಾ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಅಂದಹಾಗೆ ಶೋನ ಮೊದಲ ಅತಿಥಿಯೇ ಜೂ ಎನ್​ಟಿಆರ್ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾದ ನಾಯಕಿ ಜಾನ್ಹವಿ ಸಹ ಬಂದಿದ್ದಾರೆ. ಸೈಫ್ ಅಲಿ ಖಾನ್ ಸಹ ಅತಿಥಿಯಾಗಿ ಬಂದಿದ್ದು, ಸಖತ್ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:ಮುನಿಸು ಮರೆತು ಚಿಕ್ಕಪ್ಪನ ಮಗನಿಗೆ ಶುಭ ಹಾರೈಸಿದ ಜೂ ಎನ್​ಟಿಆರ್

ಜೂ ಎನ್​ಟಿಆರ್ ಮಾತ್ರವೇ ಅಲ್ಲದೆ, ನಟಿ ಆಲಿಯಾ ಭಟ್ ಸಹ ಶೋಗೆ ಅತಿಥಿಯಾಗಿ ಆಗಮಿಸಿದ್ದು, ಶೋನಲ್ಲಿ ‘ಗಲ್ಲಿಬಾಯ್​’ನ ಡೈಲಾಗ್​ಗಳನ್ನು ಹೇಳಿದ್ದಾರೆ ಮಾತ್ರವೇ ಅಲ್ಲದೆ ಸಖತ್ ಎಂಜಾಯ್ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಸಹ ಶೋಗೆ ಅತಿಥಿಯಾಗಿ ಬಂದಿದ್ದಾರೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಇನ್ನಿತರೆ ಕೆಲವು ಆಟಗಾರರು ಶೋಗೆ ಆಗಮಿಸಿ ಮಸ್ತ್ ಮಜಾ ಮಾಡಿದ್ದಾರೆ.

‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ನ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಪ್ರೋಮೋನಲ್ಲಿ ಜೂ ಎನ್​ಟಿಆರ್, ಸೈಫ್, ಜಾನ್ಹವಿ, ಆಲಿಯಾ, ರೋಹಿತ್ ಶರ್ಮಾ, ಕರಣ್ ಜೋಹರ್, ಸೂರ್ಯ ಕುಮಾರ್ ಯಾದವ್ ಇನ್ನೂ ಹಲವಾರು ಮಂದಿ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 21ರಿಂದ ‘ದಿ ಗ್ರೇಟ್ ಇಂಡಿಯಲ್ ಕಪಿಲ್ ಶೋ’ನ ಎರಡನೇ ಸೀಸನ್ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ