ಆರು ವಾರಗಳ ಕಾಲ ನಡೆದುಕೊಂಡು ಬಂದ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್ಗೆ ಈಗ ತೆರೆ ಬೀಳುವ ಸಮಯ ಬಂದಿದೆ. ಇಂದು (ಸೆ.16) ಈ ಶೋ ಫಿನಾಲೆ (Bigg Boss Finale) ನಡೆಯಲಿದೆ. ಈಗಾಗಲೇ ಕಿಚ್ಚ ಸುದೀಪ್ ಅವರು ಈ ಸ್ಪೆಷಲ್ ಸಂಚಿಕೆಯ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ. ಅದರ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಶೇಷ ಗೆಟಪ್ನಲ್ಲಿ ಬಂದು ಸುದೀಪ್ (Kichcha Sudeep) ಅವರು ವೇದಿಕೆ ಏರಿದ್ದಾರೆ. ‘ಒಟಿಟಿ ಸೀಸನ್ನ ಕೊನೇ ದಿನ. ಮನೆಯಲ್ಲಿ ಇನ್ನೂ 8 ಜನ ಇದ್ದಾರೆ. ಆದರೆ ಟೆಲಿವಿಷನ್ ಸೀಸನ್ನಲ್ಲಿ ಜಾಗ ಇರುವುದು 4 ಜನರಿಗೆ ಮಾತ್ರ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಒಟ್ಟು 16 ಜನರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋಗೆ ಎಂಟ್ರಿ ಪಡೆದಿದ್ದರು. ಕೊನೇ ವಾರದಲ್ಲಿ ಕೇವಲ 8 ಜನರ ನಡುವೆ ಸ್ಪರ್ಧೆ ನಡೆಯಿತು. ಜಶ್ವಂತ್ ಬೋಪಣ್ಣ, ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಅವರು ಫಿನಾಲೆ ವಾರ ತಲುಪಿದ್ದಾರೆ. ಇವರ ಪೈಕಿ ಯಾರಿಗೆ ಟಿವಿ ಸೀಸನ್ ಪ್ರವೇಶಿಸುವ ಚಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
‘ಇವತ್ತು ಕೆಲವರಿಗೆ ಹಾರ್ಟ್ಬ್ರೇಕ್ ಆಗೋದು ಖಚಿತ. ಇಲ್ಲಿಗೆ ನಮ್ಮ ಪ್ರಯಾಣ ಮುಕ್ತಾಯ..’ ಎಂದು ಕಿಚ್ಚ ಸುದೀಪ್ ಅವರು ಹೇಳಿರುವುದು ಪ್ರೋಮೋದಲ್ಲಿ ಹೈಲೈಟ್ ಆಗಿದೆ. ವೂಟ್ ಸೆಲೆಕ್ಟ್ ಮೂಲಕ ಸಂಜೆ 7 ಗಂಟೆಗೆ ‘ಬಿಗ್ ಬಾಸ್ ಒಟಿಟಿ ಕನ್ನಡ’ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಕನ್ನಡದ ಪ್ರೇಕ್ಷಕರಿಗೆ ಒಟಿಟಿ ಸೀಸನ್ ಹೊಸ ಅನುಭವ ನೀಡಿದೆ. ಈಗ ಎಲ್ಲರೂ ಟಿವಿ ಸೀಸನ್ ನೋಡಲು ಸಜ್ಜಾಗಿದ್ದಾರೆ.
ಎಂಟರಲ್ಲಿ ನಾಲ್ಕು ಜನರಿಗೆ ಮಾತ್ರ ಟಿ.ವಿ ಸೀಸನ್ಗೆ ಅವಕಾಶ! > OTT ಸೀಸನ್ ಗೆದ್ದು ಟಿ.ವಿ ಸೀಸನ್ಗೆ ಪ್ರವೇಶ ಪಡೆಯೋರು ಯಾರು? ಸ್ಟ್ರೀಮಿಂಗ್ 24×7 ಲೈವ್@kichchasudeepa | BIGG BOSS OTT FINALE ಇಂದು ಸಂಜೆ 7#BiggBossOTT #BiggBossOTTKannada #BBOTTKOnVoot @vootselect @endemolshineind @vimalelaichi pic.twitter.com/JMcIIOFHa3
— Colors Super (@ColorsSuper) September 16, 2022
ಸೋನು ಶ್ರೀನಿವಾಸ್ ಗೌಡ ಅವರು ವೈರಲ್ ವಿಡಿಯೋ ಮೂಲಕ ಕುಖ್ಯಾತಿ ಪಡೆದಿದ್ದರು. ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋಗೆ ಬಂದಿದ್ದು ಕೆಲವರಿಗೆ ಹಿಡಿಸಲಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಟ್ರೋಲ್ ಜೋರಾಗಿತ್ತು. ಹಾಗಾಗಿ ಕಡಿಮೆ ವೋಟ್ ಪಡೆದು ಅವರು ಮೊದಲ ವಾರವೇ ಔಟ್ ಆಗಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಹಾಗಾಗಲಿಲ್ಲ. ವೀಕ್ಷಕರಿಂದ ಅಗತ್ಯ ವೋಟ್ ಪಡೆಯುವ ಮೂಲಕ ಅವರು ಫಿನಾಲೆ ವಾರದವರೆಗೂ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಎಲ್ಲ ವಾರ ನಾಮಿನೇಟ್ ಆಗಿದ್ದರೂ ಕೂಡ ಜಯಶ್ರೀ ಆರಾಧ್ಯ ಅವರು ಕೊನೆ ವಾರದ ತನಕವೂ ಸೇಫ್ ಆಗಿದ್ದು ಕೂಡ ಪ್ರೇಕ್ಷಕರಿಗೆ ಅಚ್ಚರಿ ನೀಡಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:27 pm, Fri, 16 September 22