Kotigobba 3: ಸುದೀಪ್ ಫ್ಯಾನ್ಸ್​​​ಗೆ ಸಿಹಿ ಸುದ್ದಿ; ಒಟಿಟಿಯಲ್ಲಿ ‘ಕೋಟಿಗೊಬ್ಬ 3’ ರಿಲೀಸ್ ಆಗೋಕೆ ದಿನಾಂಕ ಫಿಕ್ಸ್

| Updated By: ರಾಜೇಶ್ ದುಗ್ಗುಮನೆ

Updated on: Nov 19, 2021 | 3:05 PM

ಕಿಚ್ಚ ಸುದೀಪ್​ ನಟನೆಯ ಈ ಸಿನಿಮಾ ಸಾಕಷ್ಟು ಆ್ಯಕ್ಷನ್​ ದೃಶ್ಯಗಳನ್ನು ಹೊಂದಿದೆ. ಸುದೀಪ್​ ಅವರು ಡಬಲ್ ರೋಲ್​ನಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್​ ಥ್ರಿಲ್​ ನೀಡಿತ್ತು.

Kotigobba 3: ಸುದೀಪ್ ಫ್ಯಾನ್ಸ್​​​ಗೆ ಸಿಹಿ ಸುದ್ದಿ; ಒಟಿಟಿಯಲ್ಲಿ ‘ಕೋಟಿಗೊಬ್ಬ 3’ ರಿಲೀಸ್ ಆಗೋಕೆ ದಿನಾಂಕ ಫಿಕ್ಸ್
ಸುದೀಪ್​
Follow us on

ಸುದೀಪ್​ (Kichcha Sudeep) ನಟನೆಯ ‘ಕೋಟಿಗೊಬ್ಬ 3’ (Kotigobba 3) ಸಿನಿಮಾ ಕೆಲ ಸಮಸ್ಯೆಗಳನ್ನು ಎದುರಿಸಿದ್ದರಿಂದ ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್​ 15ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಕಮಾಯಿ (Box Office Collection) ಮಾಡಿದ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಂಡಿತ್ತು. ಸಿನಿಮಾ ರಿಲೀಸ್​ ಆಗಿ ಒಂದು ತಿಂಗಳ ಮೇಲಾಗಿದೆ. ಅನೇಕ ಕಡೆಗಳಲ್ಲಿ ಕಿಚ್ಚ ಸುದೀಪ್​ ಚಿತ್ರ ಪ್ರದರ್ಶನ ಕಾಣುತ್ತಿದೆ. ಈಗ ಚಿತ್ರತಂಡ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್​ ಮಾಡೋಕೆ ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ‘ಕೋಟಿಗೊಬ್ಬ 3’ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗುತ್ತಿದೆ. ಹಾಗಾದರೆ, ರಿಲೀಸ್​ ದಿನಾಂಕ ಯಾವುದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಿಚ್ಚ ಸುದೀಪ್​ ನಟನೆಯ ಈ ಸಿನಿಮಾ ಸಾಕಷ್ಟು ಆ್ಯಕ್ಷನ್​ ದೃಶ್ಯಗಳನ್ನು ಹೊಂದಿದೆ. ಸುದೀಪ್​ ಅವರು ಡಬಲ್ ರೋಲ್​ನಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್​ ಥ್ರಿಲ್​ ನೀಡಿತ್ತು. ಕೆಲವರು ಎರಡು ಬಾರಿ ಚಿತ್ರಮಂದಿರದತ್ತ ಮುಖ ಮಾಡಿದ್ದರು. ಇನ್ನೂ ಕೆಲವರು ಕೊವಿಡ್​ಗೆ ಭಯ ಬಿದ್ದು ಮನೆಯಲ್ಲೇ ಇದ್ದರು. ಇದರಿಂದ ಸಿನಿಮಾ ನೋಡೋಕೆ ಆಗಿರಲಿಲ್ಲ. ಆದರೆ, ಈಗ ಅವರೆಲ್ಲರಿಗೂ ಸಿಹಿ ಸುದ್ದಿ ಸಿಕ್ಕಿದೆ. ‘ಕೋಟಿಗೊಬ್ಬ 3’ ಸಿನಿಮಾ ನವೆಂಬರ್​ 23ರಂದು ಅಮೇಜಾನ್ ಪ್ರೈಮ್​ನಲ್ಲಿ ತೆರೆಗೆ ಬರುತ್ತಿದೆ.

ಅಭಿಮಾನಿಯೋರ್ವ ಟ್ವಿಟರ್​ನಲ್ಲಿ ಅಮೇಜಾನ್​ ಪ್ರೈಮ್​ ಹೆಲ್ಪ್​ ಡೆಸ್ಕ್​ಗೆ ‘ಕೋಟಿಗೊಬ್ಬ 3’ ಯಾವಾಗ ರಿಲೀಸ್​ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಅಮೇಜಾನ್​ ಪ್ರೈಮ್​ ವಿಡಿಯೋ ಉತ್ತರ ನೀಡಿದೆ. ನವೆಂಬರ್ 23ಕ್ಕೆ ಸಿನಿಮಾ ರಿಲೀಸ್​ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್​ ವಿಳಂಬವಾದರೂ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ ಫುಲ್​ ಪ್ರದರ್ಶನ ಕಂಡಿತ್ತು. ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಮೊದಲ ದಿನ ‘ಕೋಟಿಗೊಬ್ಬ 3’ ಬರೋಬ್ಬರಿ 12.5 ಕೋಟಿ ರೂಪಾಯಿ ಗಳಿಸಿತ್ತು. ನಾಲ್ಕು ದಿನಕ್ಕೆ ಸಿನಿಮಾ ಬರೋಬ್ಬರಿ 40.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು.

 

ಇದನ್ನೂ ಓದಿ: ನಿರೂಪಣೆಯಿಂದ ಅರುಣ್​ ಸಾಗರ್​ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್​

Published On - 1:44 pm, Fri, 19 November 21