
ಕಲ್ಯಾಣಿ ಪ್ರಿಯದರ್ಶನ್ ಅವರು ನಟಿಸಿದ ‘ಲೋಕಃ ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ದುಲ್ಖರ್ ಸಲ್ಮಾನ್ ಅವರು. ಈ ಚಿತ್ರದಲ್ಲಿ ದುಲ್ಖರ್, ಟುವಿನೋ ಥಾಮಸ್ ಸೇರಿದಂತೆ ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ. ಈಗ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ.
ಆಗಸ್ಟ್ 28ರಂದು ‘ಲೋಕಃ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಕರ್ನಾಟಕದಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರ ಥಿಯೇಟರ್ನಲ್ಲಿ ಕನ್ನಡ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯ ಇರಲಿಲ್ಲ. ಆದರೆ, ಒಟಿಟಿಯಲ್ಲಿ ಈ ಅವಕಾಶವನ್ನು ಮಾಡಿಕೊಡಲಾಗಿದೆ. ಹೀಗಾಗಿ, ಮಲಯಾಳಂ ಜೊತೆ ಕನ್ನಡದಲ್ಲೂ ಸಿನಿಮಾ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಇದಪ್ಪಾ ಡೆಡಿಕೇಷನ್ ಅಂದ್ರೆ; ಹೇಗಿದ್ದ ಕಲ್ಯಾಣಿ ಪ್ರಿಯದರ್ಶನ್ ಹೇಗಾದ್ರು ನೋಡಿ
ಸಾಮಾನ್ಯವಾಗಿ ಎಂತಹುದೇ ಸೂಪರ್ ಹಿಟ್ ಚಿತ್ರವಾದರೂ ಸಿನಿಮಾ ರಿಲೀಸ್ ಆದ ಒಂದು ತಿಂಗಳಿಗೆ ಒಟಿಟಿಗೆ ಕಾಲಿಡುತ್ತದೆ. ಆದರೆ, ‘ಲೋಕಃ’ ಸಿನಿಮಾ ಹಾಗಲ್ಲ. ಈ ಚಿತ್ರ ರಿಲೀಸ್ ಆಗಿ 50 ದಿನಗಳ ಮೇಲಾಗಿದೆ. ಆದಾಗ್ಯೂ ಸಿನಿಮಾ ಒಟಿಟಿಗೆ ಕಾಲಿಟ್ಟಿಲ್ಲ. ಸದ್ಯ ಹಾಟ್ ಸ್ಟಾರ್ ಕಡೆಯವರು ‘ಶೀಘ್ರವೇ ಸಿನಿಮಾ ಪ್ರಸಾರ ಕಾಣಲಿದೆ’ ಎಂದಷ್ಟೇ ಮಾಹಿತಿ ನೀಡಿದೆ. ಈ ಶುಕ್ರವಾರ (ಅಕ್ಟೋಬರ್ 24) ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುವ ನಿರೀಕ್ಷೆ ಇದೆ.
Queen of the Night — Chandra, from the Lokah Universe. #Lokah coming soon on JioHotstar. #LokahOnJioHotstar #LokahUniverse #ComingSoonOnJioHotstar #YakshiReturns #LokahChapter1 #Wayfarerfilms #DulquerSalmaan #DominicArun #KalyaniPriyadarshan #Naslen #Superhero #Lokahthefilm pic.twitter.com/5hDCubzLsw
— JioHotstar Malayalam (@JioHotstarMal) October 18, 2025
Wishing everyone a very Happy Deepavali!
May your days be filled with light, love, and endless happiness✨🪔♥️— Kalyani Priyadarshan (@kalyanipriyan) October 20, 2025
‘ಲೋಕಃ’ ಸಿನಿಮಾ ಥಿಯೇಟರ್ನಲ್ಲಿ ಇದ್ದಾಗಲೇ ವಿವಾದ ಸೃಷ್ಟಿ ಮಾಡಿತ್ತು. ಈ ಸಿನಿಮಾದಲ್ಲಿ ಬರೋ ಪೊಲೀಸ್ ಪಾತ್ರಧಾರಿ ಇಡೀ ಬೆಂಗಳೂರಿನ ಹುಡುಗಿಯರಿಗೆ ಅವಮಾನ ಮಾಡುವ ರೀತಿಯಲ್ಲಿ ಡೈಲಾಗ್ ಹೇಳಿದ್ದರು. ಆ ಬಳಿಕ ದುಲ್ಖರ್ ನಿರ್ಮಾಣ ಸಂಸ್ಥೆ ಈ ಬಗ್ಗೆ ಕ್ಷಮೆ ಕೇಳಿ ಡೈಲಾಗ್ ಬದಲಿಸಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Tue, 21 October 25