ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?

|

Updated on: Jul 05, 2024 | 7:05 AM

ಕಳೆದ ಸೀರಿಸ್​ನ ಡೈಲಾಗ್​ಗಳು ಗಮನ ಸೆಳೆದಿದ್ದವು. ಕಳೆದ ಸೀಸನ್​ಗಳಲ್ಲಿ ಮೀಮ್​ಗಳನ್ನು ಮಾಡಲು ಸಾಕಷ್ಟು ದೃಶ್ಯಗಳು ಇದ್ದವು. . ಆದರೆ, ಈ ಬಾರಿ ಅದಕ್ಕೆಲ್ಲ ಹೆಚ್ಚು ಅವಕಾಶವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇನ್ನು ನಿರೀಕ್ಷೆ ಹೆಚ್ಚಿದ್ದರೆ ನಿರಾಸೆ ಆಗೋದ ಖಂಡಿತ ಎನ್ನುತ್ತಾರೆ ಪ್ರೇಕ್ಷಕರು.

ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದ ‘ಮಿರ್ಜಾಪುರ್ 3’; ಹೇಗಿದೆ ಹೊಸ ಸೀಸನ್?
ಮಿರ್ಜಾಪುರ್
Follow us on

‘ಮಿರ್ಜಾಪುರ್’  ಯಶಸ್ವಿಯಾಗಿ ಎರಡು ಸೀಸನ್​ಗಳನ್ನು ಪೂರೈಸಿದೆ. ಇಂದಿನಿಂದ (ಜುಲೈ 12) ‘ಮಿರ್ಜಾಪುರ್ 3’ ಪ್ರಸಾರ ಆರಂಭಿಸಿದೆ. ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಮೂಲಕ ಮೂರನೇ ಸೀಸನ್ ಪ್ರಸಾರ ಕಾಣುತ್ತಿದೆ. ಈ ಮೊದಲಿನ ಎರಡು ಸೀಸನ್​ಗಳು ಇದೇ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಕಳೆದ ಸೀಸನ್​ಗಳಿಗೆ ಹೋಲಿಕೆ ಮಾಡಿದರೆ ‘ಮಿರ್ಜಾಪುರ್ 3’ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದಕ್ಕೆ ಹಲವು ಕಾರಣಗಳನ್ನು ಪ್ರೇಕ್ಷಕರು ನೀಡಿದ್ದಾರೆ.

ಅಕ್ಟೋಬರ್ 2020ರಂದು ‘ಮಿರ್ಜಾಪುರ್ 2’ ರಿಲೀಸ್ ಆಯಿತು. ಈಗ ನಾಲ್ಕು ವರ್ಷಗಳ ಬಳಿಕ ಇದಕ್ಕೆ ಹೊಸ ಸೀಸನ್ ಬಂದಿದೆ. ಕಳೆದ ಸೀಸನ್​ನಂತೆ ಈ ಸೀಸನ್​ನಲ್ಲೂ ಭರ್ಜರಿಯಾಗಿ ಹಿಂಸೆ ಇದೆ. ಗನ್​ಗಳು ಇಲ್ಲಿಯೂ ಸದ್ದು ಮಾಡುತ್ತವೆ. ಆದರೆ, ಕಳೆದ ಸೀಸನ್​ಗಳಲ್ಲಿ ಇದ್ದಂತೆ ಈ ಸೀಸನ್​ಲ್ಲಿ ಕಿಡಿ ಇಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಸೀಸನ್​ಗಳಲ್ಲಿ ಮೀಮ್​ಗಳನ್ನು ಮಾಡಲು ಸಾಕಷ್ಟು ದೃಶ್ಯಗಳು ಇದ್ದವು. ಸೀರಿಸ್​ನ ಡೈಲಾಗ್​ಗಳು ಗಮನ ಸೆಳೆದಿದ್ದವು. ಆದರೆ, ಈ ಬಾರಿ ಅದಕ್ಕೆಲ್ಲ ಹೆಚ್ಚು ಅವಕಾಶವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇನ್ನು ನಿರೀಕ್ಷೆ ಹೆಚ್ಚಿದ್ದರೆ ನಿರಾಸೆ ಆಗೋದ ಖಂಡಿತ ಎನ್ನುತ್ತಾರೆ ಪ್ರೇಕ್ಷಕರು.

ಇದನ್ನೂ ಓದಿ: ‘ಮಿರ್ಜಾಪುರ್’, ‘ಸೇಕ್ರೆಡ್ ಗೇಮ್ಸ್’ ಅಲ್ಲ, 500 ಕೋಟಿ ಬಜೆಟ್​ನಲ್ಲಿ ಸಿದ್ಧವಾಗಿದೆ ಭಾರತದ ಈ ಸೀರಿಸ್

ಮುನ್ನ ಭಯ್ಯ ಎರಡನೇ ಸೀಸನ್​ನ ಕೊನೆಯಲ್ಲಿ ನಿಧನ ಹೊಂದುತ್ತಾನೆ. ಹೀಗಾಗಿ ಆತನ ಅನುಪಸ್ಥಿತಿ ಬಹುವಾಗಿ ಕಾಡುತ್ತದೆ. ಕಾಲೀನ್ ಭಯ್ಯ ಕೂಡ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಹೀಗಾಗಿ, ಕಳೆದ ಸೀಸನ್​ಗಳಿಗಿಂತ ಈ ಸೀಸನ್ ಡಲ್ ಎನಿಸುತ್ತದೆ. ಮೊದಲ ಮೂರು ಎಪಿಸೋಡ್​ಗಳು ನಿಧಾನವಾಗಿ ಸಾಗುತ್ತವೆ. ಆ ಬಳಿಕ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.