ಈ ವಾರ ಬಿಡುಗಡೆ ಆಗುತ್ತಿವೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು
Movies in Theater: ಜುಲೈ ತಿಂಗಳು ಸಿನಿಮಾ ಪ್ರೇಮಿಗಳ ಪಾಲಿಗೆ ಭರ್ಜರಿ ತಿಂಗಳಾಗಿದೆ. ಅದರಲ್ಲೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಈ ತಿಂಗಳು ಅದ್ಭುತವಾಗಿತ್ತು. ‘ಜೂನಿಯರ್’, ‘ಎಕ್ಕ’ ಸಿನಿಮಾಗಳು ಹಿಟ್ ಎನಿಸಿಕೊಂಡವು ಅದರ ಬೆನ್ನಲ್ಲೆ ಬಂದ ‘ಸು ಫ್ರಂ ಸೋ’ ಸಿನಿಮಾ ಅಂತೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಇದೀಗ ಮತ್ತೊಂದು ಶುಕ್ರವಾರ ಬರುತ್ತಿದೆ. ಈ ವಾರ ಮತ್ತಷ್ಟು ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ.

Movies Releasing This Week
- ಜಾತಿ ಮತ್ತು ಪ್ರೀತಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ‘ದಢಕ್’ ಸಿನಿಮಾ ಸರಣಿಯ ಎರಡನೇ ಸಿನಿಮಾ ‘ದಢಕ್ 2’ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ತಮಿಳಿನ ‘ಪರಿಯೇರುಮ್ ಪೆರುಮಾಳ್’ ಸಿನಿಮಾದ ರೀಮೇಕ್ ಇದಾಗಿದೆ.
- ಮಲಯಾಳಂ ಹಾಗೂ ತಮಿಳಿನ ಕೆಲ ಸಣ್ಣ-ಪುಟ್ಟ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ. ತಮಿಳಿನಲ್ಲಿ ಧನುಶ್ ನಟನೆಯ ಕೆಲ ಹಳೆಯ ಸಿನಿಮಾಗಳು ಈ ವಾರ ಮರು ಬಿಡುಗಡೆ ಸಹ ಆಗುತ್ತಿವೆ.
- ವಿಜಯ್ ದೇವರಕೊಂಡ ಮುಖ್ಯ ಪಾತ್ರದಲ್ಲಿ ನಟಿಸಿ, ಗೌತಮ್ ತಿನರೂರಿ ನಿರ್ದೇಶನ ಮಾಡಿರುವ ‘ಕಿಂಗ್ಡಮ್’ ಸಿನಿಮಾ ನಾಳೆ ಅಂದರೆ ಜುಲೈ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಅದ್ಭುತವಾಗಿದೆ. ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.
- ಯಶ್ ಅವರ ತಾಯಿ ಪುಷ್ಪ ಅವರು ನಿರ್ಮಾಣ ಮಾಡಿ, ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್, ಗೋಪಾಲ ದೇಶಪಾಂಡೆ ಇನ್ನಿತರರು ನಟಿಸಿರುವ ಆಕ್ಷನ್ ಥ್ರಿಲ್ಲರ್ ಕತೆ ಹೊಂದಿರುವ ಸಿನಿಮಾ ‘ಕೊತ್ತಲವಾಡಿ’ ಇದೇ ಶುಕ್ರವಾರ (ಆಗಸ್ಟ್ 1) ಬಿಡುಗಡೆ ಆಗುತ್ತಿದೆ.
- ಅಜಯ್ ದೇವಗನ್, ಮೃಣಾಲ್ ಠಾಕೂರ್, ರವಿ ಕಿಶನ್ ಇನ್ನೂ ಹಲವರು ನಟಿಸಿರುವ ‘ಸನ್ ಆಫ್ ಸರ್ದಾರ್ 2’ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಎರಡು ವಾರದ ಹಿಂದೆಯೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಈಗ ತೆರೆಗೆ ಬರುತ್ತಿದೆ.









