
ಒಟಿಟಿಯ ವ್ತಾಪ್ತಿ ಈಗ ವಿಸ್ತಾರಗೊಂಡಿದೆ. ಹಲವು ಒಟಿಟಿಗಳು ತಲೆ ಎತ್ತಿವೆ. ಅದೇ ರೀತಿ ವಿವಿಧ ರೀತಿಯ ಸಿನಿಮಾಗಳು, ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲೂ ಒಟಿಟಿಯಲ್ಲಿ (OTT) ಸಸ್ಪೆನ್ಸ್, ಕ್ರೈಮ್ ಹಾಗೂ ಥ್ರಿಲ್ಲರ್ ರೀತಿಯ ಸಿನಿಮಾಗಳು ಹೆಚ್ಚು ವೀಕ್ಷಣೆ ಕಾಣುತ್ತವೆ. ಈಗ ಒಟಿಟಿಯಲ್ಲಿರೋ ಈ ಚಿತ್ರವನ್ನು ಮಿಸ್ ಮಾಡಲೇಬೇಡಿ. ಇದರಲ್ಲಿ ಕ್ರೈಮ್, ಸಸ್ಪೆನ್ಸ್ ಜೊತೆ ಒಂದಷ್ಟು ಫನ್ ಕೂಡ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಈ ಸಿನಿಮಾದ ಹೆಸರು ‘ಮೋನಿಕಾ, ಓ ಮೈ ಡಾರ್ಲಿಂಗ್’. ಈ ಚಿತ್ರ ಹಿಂದಿ ಭಾಷೆಯಲ್ಲಿದೆ. ಜನಪ್ರಿಯ ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ. 2022ರ ಚಿತ್ರ ಇದಾಗಿದ್ದು, ಇದನ್ನು ಇನ್ನೂ ವೀಕ್ಷಿಸದೆ ಇರುವವರು ನೋಡಬಹುದು. ಇದರ ರನ್ ಟೈಮ್ 2 ಗಂಟೆ 10 ನಿಮಿಷ ಮಾತ್ರ. ಹೀಗಾಗಿ, ಟೈಮ್ ಪಾಸ್ಗೆ ಒಂದೊಳ್ಳೆಯ ಸಿನಿಮಾ ಇದು. ರಾಜ್‌ಕುಮಾರ್ ರಾವ್, ಹುಮಾ ಖುರೇಶಿ, ರಾಧಿಕಾ ಆಪ್ಟೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಜೈ (ರಾಜ್‌ಕುಮಾರ್ ರಾವ್) ರೋಬೋಟಿಕ್ ಇಂಜಿನಿಯರ್. ಆತನನ್ನು ಕಂಪನಿಗೆ ಸಿಇಒ ಆಗಿ ನೇಮಕ ಮಾಡಲಾಗುತ್ತದೆ. ಆತ ಒಬ್ಬಳನ್ನು ಕೊಲೆ ಮಾಡೋ ಪರಿಸ್ಥಿತಿ ಬರುತ್ತದೆ. ಎಲ್ಲರೂ ಸೇರಿ ಈ ಕೊಲೆ ನಡೆಸುತ್ತಾರೆ. ಅಲ್ಲಿ ಪ್ಲ್ಯಾನ್ ಇದ್ದಿದ್ದೇ ಒಂದು, ಕೊಲೆ ಆಗುವುದೇ ಇನ್ನೊಬ್ಬರದ್ದು. ನಂತರ ಸರಣಿ ಕೊಲೆಗಳು ನಡೆಯುತ್ತವೆ. ಇದನ್ನು ಯಾರು ಮಾಡಿದ್ದು ಎಂಬುದು ಕೊನೆಯವರೆಗೂ ಕುತೂಹಲ ಇರುತ್ತದೆ. ಇದರ ಜೊತೆಗೆ ಇನ್ನೂ ಒಂದಷ್ಟು ಸಸ್ಪೆನ್ಸ್ ವಿಚಾರಗಳು ಸಿನಿಮಾದಲ್ಲಿ ಇವೆ.
ಇದನ್ನೂ ಓದಿ: Su From So OTT: ಯಾವ ಒಟಿಟಿಯಲ್ಲಿ ಬರಲಿದೆ ಸೂಪರ್ ಹಿಟ್ ‘ಸು ಫ್ರಮ್ ಸೋ’ ಸಿನಿಮಾ?
ರಾಜ್‌ಕುಮಾರ್ ರಾವ್ ಅವರು ನಟನೆಯಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅವರು ಒಳ್ಳೆಯ ಸ್ಕ್ರಿಪ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಗೆದ್ದಿದ್ದಾರೆ. ಈ ಚಿತ್ರ ಸಖತ್ ಮನರಂಜನೆ ಜೊತೆಗೆ ನಿಮ್ಮನ್ನು ಚೇರ್ನ ಕೊನೆಯಲ್ಲಿ ಕೂರಿಸುವ ಕೆಲಸವನ್ನು ಕೂಡ ಮಾಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.